3:15 PM Thursday9 - April 2026
ಬ್ರೇಕಿಂಗ್ ನ್ಯೂಸ್
ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: 60 ಎಕರೆ ಅರಣ್ಯ ಪ್ರದೇಶ… ಎಲ್ಲ ಕಡೆ ಸಿದ್ದರಾಮಯ್ಯ ಬೇಕು ಎಂಬ ಬೇಡಿಕೆಯಿದೆ; ಕುಮಾರಸ್ವಾಮಿನಾ ಯಾರು ಎಂದು ಕೇಳ್ತಾರೆ:… ರಾಜ್ಯದಲ್ಲಿ ಬ್ಯಾನ್​​ ಆಗುತ್ತಾ ಸೋಲೋ ಟ್ರೆಕ್ಕಿಂಗ್?: ಅನುಭವವಿದ್ದರೂ ಅಪಾಯ ಫಿಕ್ಸ್​​; ಯಾಕೆ ಗೊತ್ತಾ? ಕೊಡಗಿನ ಅಳಿಯನಿಗೆ ಭರ್ಜರಿ ಪಾರ್ಟಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ತವರಿನಲ್ಲಿ ಅದ್ದೂರಿ… ಎನ್.ಆರ್.ಪುರ: ಶಿವಮೊಗ್ಗದ ನರ್ಸ್ ಆತ್ಮಹತ್ಯೆ; ಹೊಳೆಗೆ ಹಾರಿ ಜೀವತ್ಯಾಗ Kodagu | ನಟಿ ರಶ್ಮಿಕಾ ಮಂದಣ್ಣಗೆ ತಂದೆಯಿಂದ ವಿರಾಜಪೇಟೆಯ “ಸೆರಿನಿಟಿ ಕಾಟೇಜ್” ಗಿಫ್ಟ್ ಮಧ್ಯಪ್ರಾಚ್ಯ ಯುದ್ಧ: ಕೊಡಗಿನಲ್ಲಿ ಸಿಲುಕಿದ ಇರಾನಿ ದಂಪತಿ; ಪಾಸ್‌ಪೋರ್ಟ್ ಆತಂಕ ಬಾಗಲಕೋಟೆ ಉಪ ಚುನಾವಣೆ | ಬಿಜೆಪಿ ಅಭ್ಯರ್ಥಿ ವಿರುದ್ಧ ಕರಪತ್ರ ಹಂಚಿಕೆ: ಇಬ್ಬರು… ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ದೆಗೆಡಿಸಿದ ಉಪ ಚುನಾವಣೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ Bangalore | ಅಡುಗೆ ಅನಿಲ ದಾಸ್ತಾನು ಕೊರತೆ ಇಲ್ಲ: ವದಂತಿಗಳಿಗೆ ಕಿವಿಗೊಡಬೇಡಿ: ಡಿಸಿ…

ಇತ್ತೀಚಿನ ಸುದ್ದಿ

Chikkamagaluru | ಚಂದ್ರದ್ರೋಣ ಪರ್ವತಕ್ಕೆ ಪ್ರವಾಸ ಹೋಗಿದ್ದ ಬಾಲಕಿ ಮಿಸ್ಸಿಂಗ್: ತೀವ್ರ ಕಾರ್ಯಾಚರಣೆ ಶುರು

08/04/2026, 14:17

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮಡಿಕೇರಿ ಬೆನ್ನಲ್ಲೆ ಕಾಫಿನಾಡಲ್ಲೂ ಪ್ರವಾಸಿ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಾಳೆ.
ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಬಾಲಕಿ ನಿಗೂಢವಾಗಿ ಮಿಸ್ಸಿಂಗ್ ಆಗಿದ್ದಾಳೆ.
ಕೇರಳದ ಪಾಲಕ್ಕಾಡ್ ಮೂಲದ ನಂದನ ಎಂಬಾಕೆ ನಾಪತ್ತೆಯಾದ ಬಾಲಕಿ.
ಪ್ರವಾಸಕ್ಕೆಂದು ಕೇರಳದಿಂದ ಕಾಫಿನಾಡಿಗೆ ಆಗಮಿಸಿದ್ದ 40 ಜನರ ತಂಡದಲ್ಲಿ ಬಾಲಕಿ ಇದ್ದಳು. ಕುಟುಂಬ ಸದಸ್ಯರೊಂದಿಗೆ ನಂದನ ಆಗಮಿಸಿದ್ದಳು. ನಂದನ 10ನೇ ತರಗತಿ ಓದುತ್ತಿದ್ದಾಳೆ.
ಪರ್ವತದ ಸುಂದರ ತಾಣ ವೀಕ್ಷಿಸುವಾಗ ತಂಡದಿಂದ ಬೇರ್ಪಟ್ಟಿದ್ದಳು. ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು, ಸ್ಥಳೀಯರಿಂದ ಶೋಧ ಕಾರ್ಯ ನಡೆಯುತ್ತಿದೆ. ದಟ್ಟ ಅರಣ್ಯ ಹಾಗೂ ಕಡಿದಾದ ಬೆಟ್ಟ-ಗುಡ್ಡಗಳಲ್ಲಿ ತೀವ್ರ ಕಾರ್ಯಾಚರಣೆ ನಡೆಯುತ್ತಿದೆ.
ಮಂಜು ಮತ್ತು ಕತ್ತಲಿನ ವಾತಾವರಣದಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ.
ಪ್ರವಾಸಿಗರ ವಲಯದಲ್ಲಿ ನಿಗೂಢ ನಾಪತ್ತೆ ಪ್ರಕರಣ ಆತಂಕ ಮೂಡಿಸಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಎಸ್ಪಿ ಜಯಕುಮಾರ್ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು