ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಕುಡಿತದ ಮತ್ತಿನಲ್ಲಿ ಬಾರ್ ನಲ್ಲಿ ಗಲಾಟೆ; ಯುವಕನಿಗೆ ಚಾಕು ಇರಿತ; ಗಂಭೀರ ಗಾಯ
29/12/2025, 18:42
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ನಗರ ಹೊರವಲಯದ ಶಕ್ತಿನಗರ
ಕುಡಿದ ಮತ್ತಿನಲ್ಲಿ ಬಾರ್ ನಲ್ಲಿ ಗಲಾಟೆ ನಡೆದು ವ್ಯಕ್ತಿಯೊಬ್ಬರಿಗೆ ಚಾಕು ಇರಿತ ಘಟನೆ ನಡೆದಿದೆ.





ಮೂಗ್ತಿಹಳ್ಳಿ ಗ್ರಾಮದ ಅನಿಲ್ ಕುಮಾರ್ ಗೆ ಚಾಕು ಇರಿತಕ್ಕೊಳಗಾದ ಯುವಕ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಅನಿಲ್ ನನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಗರೇಟ್ ವಿಚಾರವಾಗಿ ಎರಡು ಟೀಮ್ ಗಳ ನಡುವೆ ಗಲಾಟೆ ನಡೆದಿದ್ದು, ಗಲಾಟೆ ವೇಳೆ ಓರ್ವನಿಗೆ ಚಾಕು ಇರಿಯಲಾಗಿದೆ. ಗಲಾಟೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗಲಾಟೆ ವೇಳೆ ಏಕಾಏಕಿ ಚಾಕುವಿನಿಂದ ಯುವಕ ಇರಿದಿದ್ದಾನೆ. ಬಾರ್ ಒಳಗಿಂದ ಚಾಕು ತಂದು ಇರಿದು ಎಸ್ಕೇಪ್ ಆಗಿದ್ದಾನೆ.
ಚಾಕು ಇರಿದ ಯುವಕನನ್ನು ಪೊಲೀಸರ ಬಂಧಿಸಿದ್ದಾರೆ.












