ಇತ್ತೀಚಿನ ಸುದ್ದಿ
Chikkamagaluru | ಮುಳ್ಳಯ್ಯನಗಿರಿ ಮತ್ತು ದತ್ತಪೀಠದ ಗಿರಿಶ್ರೇಣಿಯಲ್ಲಿ ಕಾಡ್ಗಿಚ್ಚು; ಶೋಲಾರಣ್ಯ ನಾಶ ಭೀತಿ
17/02/2025, 21:57

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಮತ್ತು ದತ್ತಪೀಠದ ಗಿರಿಶ್ರೇಣಿಯಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ.
ಪಶ್ಚಿಮ ಘಟ್ಟಗಳ ತಪ್ಪಲಿನ 2 ಕಡೆ ಕಾಡಿಗೆ ಬೆಂಕಿ ಬಿದ್ದಿದೆ.
ಬೆಂಕಿಯಿಂದ ಅಪರೂಪದ ಶೋಲಾರಣ್ಯ ನಾಶವಾಗುವ ಭೀತಿ ಉಂಟಾಗಿದೆ. ಇಂದು ಸಂಜೆಯ ನಂತರ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.
ಕವಿಕಲ್ ಗಂಡಿ ಹಾಗೂ ಸೀತಾಳಯ್ಯನಗಿರಿ ಸಾಲಿನಲ್ಲಿ ಕಾಡ್ಗಿಚ್ಚು ಹಾವಳಿ ಜಾಸ್ತಿಯಾಗಿದೆ.