ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಪ್ರಾಮಾಣಿಕತೆಗೆ ಸಿಕ್ಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ
19/09/2022, 10:23
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೊಟ್ಟಿಗೆಹಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾನಹಳ್ಳಿ ಮೂಡಿಗೆರೆ ತಾಲ್ಲೂಕು ಇಲ್ಲಿಯ ಶಿಕ್ಷಕಿಯವರಾದ ಇಂಪಾ ಜೆ. ಎಂ.ಇವರಿಗೆ ಈ ಬಾರಿಯ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ದೊರಕಿದ್ದು ಈ ಶಾಲೆಯಲ್ಲಿ ಸತತ ಹದಿನಾರು ವರ್ಷಗಳಿಂದ ತಮ್ಮ ಸೇವೆ ಸಲ್ಲಿಸುತ್ತಿದ್ದು ಹದಿಮೂರು ವರ್ಷಗಳ ಕಾಲ ಸಹ ಶಿಕ್ಷಕಿಯಾಗಿ ಕಳೆದ ಮೂರು ವರ್ಷಗಳಿಂದ ಪ್ರಭಾರಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ನಮ್ಮ ಊರಿನ ನಮ್ಮ ಶಾಲೆಯ ಅಭಿವೃದ್ಧಿಗೆ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಶಿಕ್ಷಣಕ್ಕೆ ಅವರ ಕೊಡುಗೆ ಅಪಾರ ಎಲ್ಲರನ್ನೂ ಆಕರ್ಷಿಸುವ ಶಾಲಾ ವಠಾರ,ಇಲ್ಲಿಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ,ವಿದ್ಯಾರ್ಥಿಗಳು ಶಿಸ್ತು ರೊಡಿಸಿಕೊಳ್ಳಲು ಮೂಲ ಕಾರಣಕರ್ತರಾಗಿದ್ದಾರೆ ಅವರಲ್ಲಿ ವಿದ್ಯೆ ಕಲಿತ ಮಕ್ಕಳು ಇಂದು ತುಂಬಾ ಜನ ಉತ್ತಮ ಉದ್ಯೋಗ,ಉತ್ತಮ ಸ್ಥಾನಮಾನ ಪಡೆದಿದ್ದು ಇದು ನಮ್ಮ ಊರಿನ ಹೆಮ್ಮೆಯನ್ನು ಹೆಚ್ಚಿಸಿದೆ ಅಲ್ಲದೇ ಯಾವುದೇ ಖಾಸಗಿ ಶಾಲೆಗಿಂತಲೂ ಕಮ್ಮಿಯಿಲ್ಲದಂತೆ ಅಭಿವೃದ್ಧಿ ಪಡಿಸಿರುವುದರಿಂದ ಮಕ್ಕಳ ದಾಖಲಾತಿಯಲ್ಲಿಯೂ ಮೂಡಿಗೆರೆ ತಾಲೂಕಿನ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿಯೇ ಮುಂದಿರುವುದು ಮಾತ್ರವಲ್ಲ ಇಲ್ಲಿಯ ಮಕ್ಕಳು ಪ್ರತಿಭಾ ಕಾರಂಜಿಯಂತಹ ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಪಲ್ಗುಣಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅತ್ಯುತ್ತಮ ಶಾಲೆಯಾಗಿದ್ದು ಇಂತಹ ಶಾಲೆಯ ನಮ್ಮೆಲ್ಲರ ಮೆಚ್ಚಿನ ಶಿಕ್ಷಕಿಗೆ ಪ್ರಶಸ್ತಿ ಬಂದಿರುವುದು ಪ್ರಾಮಾಣಿಕತೆಗೆ ಸಿಕ್ಕ ಪ್ರತಿಫಲ ಇಲ್ಲಿ 45 ಮಕ್ಕಳಿಗೆ ಇಬ್ಬರು ಶಿಕ್ಷಕಿ ಇರುವುದರಿಂದ ಇನ್ನೊಬ್ಬರನ್ನು ಸರ್ಕಾರ ನೇಮಿಸಿದರೆ ಈ ಶಾಲೆ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಶಾಲೆಯಾಗಿ ಗುರುತಿಸಿಕೊಳ್ಳಬಹುದು ಇವರ ಪ್ರಾಮಾಣಿಕತೆ,ನಿಷ್ಟಾವಂತ ಸೇವೆ ಸಂದಿರುವ ಪ್ರಶಸ್ತಿಗೆ ಶಿಕ್ಷಕಿ ಇಂಪಾ ಜೆ. ಎಂ ಅವರಿಗೆ ಹಾಗೂ ನಮ್ಮೂರಿನ ಹೆಮ್ಮೆಯ ಶಿಕ್ಷಕಿಯ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿದ ಶಿಕ್ಷಣ ಇಲಾಖೆಗೆ ಧನ್ಯವಾದಗಳು ತಿಳಿಸುತ್ತೇವೆ
ಗ್ರಾಮಸ್ಥರು, SDMC ಅಧ್ಯಕ್ಷರು, ಸರ್ವಸದಸ್ಯರು, ಹಾಗೂ ಹಳೆ ವಿದ್ಯಾರ್ಥಿಗಳು ಬಾನಹಳ್ಳಿ