8:56 AM Thursday12 - February 2026
ಬ್ರೇಕಿಂಗ್ ನ್ಯೂಸ್
ದಕ್ಷಿಣ ಕೊಡಗಿನಲ್ಲಿ ಆತಂಕದ ಸೃಷ್ಟಿಸಿದ್ದ ವ್ಯಾಘ್ರ ಕೊನೆಗೂ ಸೆರೆ: ಬಲೆಗೆ ಬಿದ್ದ ಗಂಡು… ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ… ರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ: ಮಾಜಿ… NDPS ಕಾಯ್ದೆ: ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು… Mangaluru | ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ನಮ್ಮ ಅಭಿಪ್ರಾಯ ಕೇಳಿಲ್ಲ:…

ಇತ್ತೀಚಿನ ಸುದ್ದಿ

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆ ದಾರುಣ ಸಾವು; ಇನ್ನೊಬ್ಬರ ಸ್ಥಿತಿ ಗಂಭೀರ 

27/03/2022, 09:57

ಚಿಕ್ಕಮಗಳೂರು(reporterkarnataka.com): ಕಾಫಿತೋಟದಲ್ಲಿ ಮೆಣಸು ಕೊಯ್ಯುವಾಗ ಇಬ್ಬರು ಕಾರ್ಮಿಕರ ಮೇಲೆ ಆನೆ ದಾಳಿ ಮಾಡಿದ್ದು ಮಹಿಳೆ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರಗೊಂಡಿರುವ ಘಟನೆ ತಾಲೂಕಿನ ಆಲ್ದೂರಿನಲ್ಲಿ ನಡೆದಿದೆ. ಮೃತರನ್ನ 45 ವರ್ಷದ ಸರೋಜಬಾಯಿ ಎಂದು ಗುರುತಿಸಲಾಗಿದ್ದು, ಮತೋರ್ವ ಕಾರ್ಮಿಕ ದುಗ್ಗಪ್ಪ ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡಿದ್ದಾರೆ. ಮೃತ ಮಹಿಳೆ ಹಾಗೂ ಗಾಯಗೊಂಡ ಕಾರ್ಮಿಕ ಮೂಲತಃ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಬ್ಯಾಡಗಿ ಮೂಲದವರು. ಕುಟುಂಬ ಸಮೇತರಾಗಿ ಜಿಲ್ಲೆಗೆ ಬಂದು ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಇಂದು ಮರ ಹತ್ತಿ ಮೆಣಸು ಕೊಯ್ಯುವಾಗ ಆನೆ ದಾಳಿ ಮಾಡಿದೆ. ಕೂಡಲೇ ಸರೋಜಬಾಯಿಯನ್ನ ಆಸ್ಪತ್ರೆಗೆ ಕರೆತಂದರೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತೋಟದಲ್ಲಿ ಕೆಲಸ ಮಾಡುವಾಗ ಸದ್ದಿಲ್ಲದೆ ಬಂದ ಆನೆ ಮಹಿಳೆಯನ್ನ ಎತ್ತಿ ಬಿಸಾಡಿದೆ. ಮೈಮೇಲೆ ಯಾವುದೇ ಗಾಯವಾಗದಿದ್ದರೂ ಆನೆ ನೆಲಕ್ಕೆ ಬಡಿದಿದ್ದರಿಂದ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಒಂದು ಚಿಕ್ಕ ಗಂಡು ಮಗುವಿದೆ. ಯಾವುದೇ ಜಮೀನು, ತೋಟ ಯಾವುದೂ ಇಲ್ಲ. ಹಾಗಾಗಿ, ಸರ್ಕಾರ ಹಾಗೂ ತೋಟದ ಮಾಲೀಕರು ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ತೋಟದಲ್ಲಿ ಆನೆಯನ್ನ ಕಂಡ ಕೂಡಲೇ ಮೃತ ಸರೋಜಬಾಯಿ ಜೊತೆಗಿದ್ದ ಮಗುವನ್ನ ಹೋಗು ಎಂದು ಕಳಿಸಿದ್ದಾಳೆ. ಆನೆಯನ್ನ ಕಂಡು ಆಕೆ ಕೂಗುವಾಗ ಮಂಗಗಳು ಊಟದ ಬಾಕ್ಸ್‍ಗಳನ್ನ ತೆಗೆದುಕೊಂಡು ಹೋಗುತ್ತಿರಬೇಕು. ಅದಕ್ಕೆ ನಮ್ಮವರೇ ಕೂಗಾಡುತ್ತಿದ್ದಾರೆ ಎಂದು ಉಳಿದವರು ಭಾವಿಸಿದ್ದಾರೆ. ಆದರೆ, ಮಗು ಓಡಿ ಬಂದು ಅಳುತ್ತಾ ಅಮ್ಮನನ್ನ ಆನೆ ಹಿಡಿದುಕೊಂಡಿದೆ ಎಂದು ಹೇಳಿದ ಮೇಲೆ ಎಲ್ಲರೂ ಹೋಗುವಷ್ಟರಲ್ಲಿ ಆನೆ ಆಕೆಯನ್ನ ಎತ್ತಿ ನೆಲಕ್ಕೆ ಬಡಿದಿತ್ತು. ಕೂಡಲೇ ಆಸ್ಪತ್ರೆಗೆ ಕರೆತಂದರೂ ಯಾವುದೇ ಪ್ರಯೋಜನವಾಗದೆ ಆಕೆ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಆನೆ ಹಾವಳಿ ಮಿತಿ ಮೀರಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ಗುತ್ತಿ, ಕೋಗಿಲೆ, ಗೌಡಹಳ್ಳಿ, ಸಾರಗೋಡು ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಆನೆ ಹಾವಳಿ ಮಿತಿ ಮೀರಿದೆ. ಆಗಾಗ್ಗೆ ಆನೆಗಳ ಹಿಂಡು ಬೆಳೆಗಳ ಮೇಲೆ ದಾಂಗುಡಿ ಇಟ್ಟು ಬೆಳೆಯನ್ನ ನಾಶ ಮಾಡುತ್ತಿವೆ. ಸ್ಥಳಿಯರು ಆನೆಯನ್ನ ಸ್ಥಳಾಂತರಿಸಿ ಎಂದು ಮನವಿ ಮಾಡಿದರು ಸಂಬಂಧಪಟ್ಟವರು ಸಂಬಂಧವಿಲ್ಲದಂತಿದ್ದಾರೆ ಅನ್ನೋದು ಸ್ಥಳಿಯರ ಆರೋಪ. ಈಗಾಗಲೇ ಮಲೆನಾಡಲ್ಲಿ ಆನೆ ದಾಳಿಯಿಂದ ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ಮೂರ್ನಾಲ್ಕು ಜನ ಪ್ರಾಣ ಕಳೆದುಕೊಂಡಿದ್ದಾರೆ.


ಇಂದು ಕೂಡ ತುತ್ತು ಅನ್ನಕ್ಕಾಗಿ ಹಾವೇರಿಯಿಂದ ಬಂದು ಬದುಕುತ್ತಿದ್ದ ಮಹಿಳೆ ಆನೆ ದಾಳಿಗೆ ಬಲಿಯಾಗಿದ್ದು ನಿಜಕ್ಕೂ ದುರಂತ. ಇನ್ನಾದರೂ ಅಧಿಕಾರಿಗಳು ಆನೆಗಳನ್ನ ಓಡಿಸಲು ಕ್ರಮಕೈಗೊಳ್ಳುತ್ತಾರೆ ಕಾದುನೋಡಬೇಕು. ಆಲ್ದೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು