5:47 AM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಚಿಕ್ಕಬಳ್ಳಾಪುರ -ದಿಬ್ಬೂರು- ಗುಂಡ್ಲಗುರ್ಕಿ ರಸ್ತೆಯಲ್ಲಿ ಮರಗಳ ಮಾರಣ ಹೋಮ!!: ಜೀವ ಸಂಕುಲಕ್ಕೆ ಕೊಳ್ಳಿ!

03/07/2022, 10:19

ಆಶಾ ಮಂಚನಬಲೆ ಚಿಕ್ಕಬಳ್ಳಾಪುರ

info.reporterkarnataka@gmail.com

ಸಾಮಾಜಿಕ ಅರಣ್ಯ ಇಲಾಖೆಯು ಎರಡು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ -ದಿಬ್ಬೂರು ಮಾರ್ಗದ -ಮಂಚನಬಲೆ -ಗುಂಡ್ಲಗುರ್ಕಿ ಕ್ರಾಸ್ ನಡುವಿನ ರಸ್ತೆ ಯುದ್ಧಕ್ಕೂ ನೂರಾರು ಸಸಿಗಳನ್ನು ನೆಟ್ಟಿತ್ತು. ನೆಟ್ಟ ಎಲ್ಲಾ ಸಸಿಗಳು ಅತ್ಯುತ್ತಮವಾಗಿ ಬೆಳೆಯುತ್ತಿದ್ದು ,ಭವಿಷ್ಯದಲ್ಲಿ ಅವು ಹೆಮ್ಮರವಾಗಿ ಬೆಳೆದು ಜೀವಿ ಸಂಕುಲಕ್ಕೆ ಅವು ಆಸರೆಯಾಗುತ್ತಿದ್ದವು. ಆದರೆ ರಸ್ತೆ ಬದಿಯಲ್ಲಿದ್ದ ಬಹುಪಾಲು ಮರಗಳನ್ನು ಇತ್ತೀಚೆಗೆ ಮಾರಣಹೋಮ ಮಾಡಲಾಗಿದೆ. 

ಸಾಮಾಜಿಕ ಅರಣ್ಯ ಇಲಾಖೆ ನೆಟ್ಟ ಗಿಡಗಳನ್ನು ಪಾಲನೆ, ಪೋಷಣೆ ಮತ್ತು ಸಂರಕ್ಷಣೆ ಮಾಡಲು ಹಲವಾರು ನೌಕರರನ್ನು ನೇಮಕ ಮಾಡಲಾಗಿದೆ. ಕಳೆದ ವಾರದಿಂದ ಬೆಳೆಯುತ್ತಿದ್ದ ನೂರಾರು ಮರಗಳು ಕಗ್ಗೊಲೆಯಾಗಿದೆ. ಇದು ಬೆಸ್ಕಾಂ ಕೃತ್ಯವೆಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳುತ್ತಾರೆ. ರಸ್ತೆಯ ಬದಿಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲು ಸಾಕಷ್ಟು ಸ್ಥಳಾವಕಾಶವಿದೆ ಹಾಗೂ ಬೆಳೆಯುತ್ತಿರುವ ಸಸಿಗಳು ತಾಕುವಷ್ಟು ಅಷ್ಟು ಎತ್ತರಕ್ಕೆ ಬೆಳೆದಿಲ್ಲ. ಹಾಗಿದ್ದರೂ ಸಹ ಮರಗಳ ಮಾರಣಹೋಮ ನಡೆಸಿರುವುದು ಪರಿಸರ ಪ್ರೇಮಿಗಳಲ್ಲಿ ತೀವ್ರ ದುಃಖ ನೋವನ್ನು ಉಂಟು ಮಾಡಿದೆ. ಈ ಎರಡು ಇಲಾಖೆಗಳು ಈ ಕೃತ್ಯಕ್ಕೆ ಸಮಾನ ಪಾಲುದಾರರಾಗಿದ್ದು ಸಸಿಗಳನ್ನು ನೆಡಲು ಹಾಗೂ ಪೋಷಿಸಲು ಸಾರ್ವಜನಿಕ ಹಣವನ್ನು ಪೋಲು ಮಾಡಲಾಗಿದೆ.


ಆದಕಾರಣ ಕಗ್ಗೊಲೆಯಾದ ಎಲ್ಲಾ ಮರಗಳ ಐದು ಪಟ್ಟು ಸಸಿಗಳನ್ನು ನೆಟ್ಟು ಮೂರು ವರ್ಷಗಳ ಕಾಲ ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನು ಸಂಬಂಧಪಟ್ಟ ಇಲಾಖೆಗಳು ವಹಿಸಿಕೊಳ್ಳಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಉಸಿರಿಗಾಗಿ ಹಸಿರು ಟ್ರಸ್ಟ್ ಮತ್ತು ಬಾಗೇಪಲ್ಲಿಯ ಹಸಿರು ಸ್ವಯಂ ಸೇವಾ ಸಂಸ್ಥೆ ಹಾಗೂ ಆಶಾ ಫೌಂಡೇಶನ್(ರಿ.) ಮಂಚನಬಲೆ ,ಇತರೆ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಜುಲೈ 3ರಂದು ಕೊಲೆಯಾದ ಹರೆಯದ ಮರಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹಾಗೆ ಸಂಜೆ 4.30 ಗಂಟೆಗೆ ಗುಂಡ್ಲುಗುರ್ಕಿ ಕ್ರಾಸ್ ನಿಂದ ಆರಂಭವಾಗುವ ಕಾಲ್ನಡಿಗೆ ಜಾಥಾ ಮಂಚನ ಬಲೆ ಗ್ರಾಮದಲ್ಲಿ ಮುಕ್ತಾಯಗೊಳ್ಳಲಿದೆ. ಮಾರ್ಗದ ಮಧ್ಯದಲ್ಲಿ ಕೊಲೆಯಾದ ಮರಗಳಿಗೆ  ಪೂಜೆಯನ್ನು ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಮರ್ಪಿಸಲಾಗುವುದು. ತದನಂತರ ಸಂಜೆ 6 ಗಂಟೆಗೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ವೃತ್ತದ ಮಧ್ಯದಲ್ಲಿ ಮಾನವ ಸರಪಳಿಯನ್ನು ರಚಿಸಿ ಮೊಂಬತ್ತಿಗಳನ್ನು ಬೆಳಗುವುದರ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಮರ್ಪಿಸಲಾಗುವುದು.


ಸದರಿ ಕಾರ್ಯಕ್ರಮದಲ್ಲಿ ಸಮಾನ ಮನಸ್ಕ ಪರಿಸರ ಪ್ರೇಮಿಗಳು, ಶಾಲಾ ವಿದ್ಯಾರ್ಥಿಗಳು, ಹಸಿರು ಸೇವಾ ಸಂಸ್ಥೆ ಉಸಿರಿಗಾಗಿ ಹಸಿರು ಟ್ರಸ್ಟ್ ಹಾಗೂ ಆಶಾ ಫೌಂಡೇಶನ್(ರಿ.) ಸದಸ್ಯರು ಭಾಗವಹಿಸಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು