ಇತ್ತೀಚಿನ ಸುದ್ದಿ
ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಹಾಗೂ ಸಾಹಿತಿ ಬಾನು ಮುಸ್ತಾಕ್ ಗೆ ಅಸಭ್ಯ ಪದಗಳಲ್ಲಿ ನಿಂದನೆ: ಆರೋಪಿ ಪೊಲೀಸ್ ವಶಕ್ಕೆ
30/10/2025, 22:43
ಮಂಗಳೂರು(reporterkarnataka.com): ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಖ್ಯಾತ ಸಾಹಿತಿ ಬಾನು ಮುಸ್ತಾಕ್ ಅವರನ್ನು ಅಸಭ್ಯ ಪದಗಳಲ್ಲಿ ನಿಂದಿಸಿ ಆರೋಪದ ಮೇಲೆ ಪುರುಷೋತ್ತಮ ಆಚಾರ್ಯ ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ Facebook ನಲ್ಲಿ *purush acharya* ಎಂಬ ಹೆಸರಿನ ಖಾತೆಯಿಂದ ದಸರಾ ಉದ್ಘಾಟನೆ ಮಾಡಿದ ಬಾನು ಮುಸ್ತಾಕ್ ರವರ ಬಗ್ಗೆ ಮತ್ತು ಮುಖ್ಯ ಮಂತ್ರಿಗಳ ಬಗ್ಗೆ ಅಸಭ್ಯ ಪದಗಳಲ್ಲಿ ನಿಂದಿಸಿ ಪೋಸ್ಟ್ ಮಾಡಿದ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅಕ್ರ 112/2025 ಕಲಂ 296,196,354 BNS ಹಾಗೂ ಸುಬ್ರಮಣ್ಯ ಠಾಣೆಯಲ್ಲಿ 55/2025 ಕಲಂ 353(3),353(4) BNS ರಂತೆ ಪ್ರಕರಣಗಳು ದಾಖಲಾಗಿತ್ತು.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ನ ಸಹಕಾರದಿಂದ ಸುಳ್ಯ ಪೊಲೀಸರು ಪ್ರಕರಣದ ಆರೋಪಿ ಬಂಟ್ವಾಳ ತಾಲೂಕಿನ ಬರಿಮಾರು ನಿವಾಸಿ ಪುರುಷೋತ್ತಮ ಆಚಾರ್ಯ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.













