ಇತ್ತೀಚಿನ ಸುದ್ದಿ
ಚೀನಾದಲ್ಲಿ ಮತ್ತೆ ಕೊರೋನಾ ಹಾವಳಿ ; ಮತ್ತೆ ಲಾಕ್ ಡೌನ್ !!
11/03/2022, 21:22
ReporterKarnataka.com
ಕೊರೊನಾ ವೈರಸ್ಸಿನ ಒಮೈಕ್ರಾನ್ ತಳಿಯ ಪರಿಣಾಮ ಚೀನಾದಲ್ಲಿ ಕೋವಿಡ್ ಸೋಂಕು ಅತಿ ವೇಗವಾಗಿ ವ್ಯಾಪಿಸುತ್ತಿದೆ ಎಂದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಸೋಂಕಿತರ ತ್ವರಿತ ಪತ್ತೆಗಾಗಿ ರ‍್ಯಾಪಿಡ್ ಆಯಂಟಿಜೆನ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಚೀನಾ ಸರ್ಕಾರ ಹೇಳಿದೆ.
ಇ ಮೂಲಕ ಸೋಂಕಿತರ ಪತ್ತೆಗಾಗಿ ಇದೇ ಮೊದಲ ಬಾರಿ ಚೀನಾ ರ‍್ಯಾಪಿಡ್ ಆಯಂಟಿಜೆನ್ ಪರೀಕ್ಷೆ ಮೊರೆ ಹೋದಂತಾಗಲಿದೆ.
ಆನ್‌ಲೈನ್ ಮತ್ತು ಇನ್ನಿತರ ಮಾರಾಟದ ವೇದಿಕೆಗಳ ಮೂಲಕ ಜನ ಸಾಮಾನ್ಯರು ಸಹ ಕೋವಿಡ್ ಪರೀಕ್ಷಾ ಕಿಟ್‌ಗಳನ್ನು ಖರೀದಿಸಬಹುದಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಮತ್ತೊಂದೆಡೆ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ 90 ಲಕ್ಷ ಜನರಿರುವ ಉತ್ತರದ ನಗರದ ಮೇಲೆ ಲಾಕ್‌ಡೌನ್ ಹೇರಲಾಗಿದೆ. ಜತೆಗೆ ಕೊರೊನಾ ನಿಯಂತ್ರಣಕ್ಕಾಗಿ ಶಾಂಘೈನಲ್ಲಿ ಶಾಲೆಗಳನ್ನು ಮುಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 10ರಂದು ಚೀನಾದಲ್ಲಿ 528ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕಂಡುಬಂದಿವೆ.