11:45 AM Thursday7 - August 2025
ಬ್ರೇಕಿಂಗ್ ನ್ಯೂಸ್
ಮುತ್ತಾಲಿಕ್ ಜತೆ ವೇದಿಕೆ ಹಂಚಿಕೊಂಡ ಕೈ ಶಾಸಕಿ: ನಯನಾ ಮೋಟಮ್ಮ ವಿರುದ್ಧ ಪ್ರಾಯಶ್ಚಿತ್ತ… ಮತದಾರರ ಹಕ್ಕು ರಕ್ಷಣೆ ರಾಜಕೀಯ ಪಕ್ಷಗಳ ಕರ್ತವ್ಯ: ಡಿಸಿಎಂ ಡಿ.ಕೆ. ಶಿವಕುಮಾರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ‘ರಿದಂ ಆಫ್ ಬಿಎಲ್‌ಆರ್‌’: ವಿಶಿಷ್ಟ ಧ್ವನಿ ಗುರುತು… ಶಿಬು ಸೊರೇನ್ ನಿಧನ: ಮತಗಳ್ಳತನ ವಿರುದ್ಧ ಪ್ರತಿಭಟನಾ ಸಭೆ ಆ. 8ಕ್ಕೆ ಮುಂದೂಡಿಕೆ:… ವಿಶ್ವ ವಿಖ್ಯಾತ ಮೈಸೂರು ದಸರಾ: ಪುಷ್ಪಾರ್ಚನೆ ಮೂಲಕ ಅಭಿಮನ್ಯು ನೇತೃತ್ವದ ಗಜ ಪಯಣಕ್ಕೆ… Shivamogga | ತೀರ್ಥಹಳ್ಳಿ: ಮನೆಗಾಗಿ ಸಾಲ; ಮನನೊಂದ ವೃದ್ದ ದಂಪತಿ ಒಂದೇ ಮರಕ್ಕೆ… Kodagu | ಬೆಕ್ಕೆಸುಡ್ಲೂರಿನಲ್ಲಿ ತಡರಾತ್ರಿ ರಸ್ತೆ ಮಧ್ಯೆ ಲಾರಿ ಪಲ್ಟಿ: ಕುಟ್ಟ- ಪೊನ್ನಂಪೇಟೆ… Kodagu | ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ: ರ್‍ಯಾಂಬುಟನ್ ಹಣ್ಣು ಮಾರಾಟಕ್ಕೆ ನಿರ್ಬಂಧ; ವ್ಯಾಪಾರಸ್ಥರ… SIT | ಧರ್ಮಸ್ಥಳ ಪ್ರಕರಣ: ದೂರು ನೀಡಲು ಮತ್ತೊಬ್ಬ ದೂರುದಾರ ಎಸ್ಐಟಿ ಕಚೇರಿಗೆ… ಸುಹಾಸ್ ಶೆಟ್ಟಿ ಮರ್ಡರ್ ಕೇಸ್: ಕಾಫಿನಾಡು ಕಳಸದಲ್ಲಿ ಎನ್ಐಎ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ

ಇತ್ತೀಚಿನ ಸುದ್ದಿ

ಚಾರ್ಮಾಡಿ ಘಾಟಿ ಕಾಡ್ಗಿಚ್ಚು ತಡೆಯಲು ಅರಣ್ಯ ಇಲಾಖೆಯಿಂದ ಕೊನೆಗೂ ಸಿಬ್ಬಂದಿಗಳ ನಿಯೋಜನೆ

27/01/2025, 22:49

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಚಾರ್ಮಾಡಿ ಘಾಟಿಯಲ್ಲಿ ಪದೇ ಪದೇ ಸಂಭವಿಸುತ್ತಿರುವ ಕಾಡ್ಗಿಚ್ಚು ತಡೆಯಲು ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಕೊನೆಗೂ ನಿಯೋಜನೆ ಮಾಡಿದೆ.
ಕೊಟ್ಟಿಗೆಹಾರ ಅರಣ್ಯ ಇಲಾಖೆಯಲ್ಲಿ ಬೆಂಕಿ ವೀಕ್ಷಕರು ಇದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಬದಿ ಕಿಡಿಗೇಡುಗಳು ಹಚ್ಚುವ ಬೆಂಕಿಯಿಂದ ಉಂಟಾಗುತ್ತಿರುವ ಕಾಡ್ಗಿಚ್ಚು ತಡೆಯಲು ಸಾಧ್ಯವಾಗುತ್ತಿಲ್ಲ.
ಬಿದರತಳ ಬಳಿ ಅರಣ್ಯದಲ್ಲಿ ಬೆಂಕಿ ಹರಡಿತ್ತು. ಅದಾದ ಒಂದೇ ವಾರದ ನಂತರ ಘಾಟಿಯಲ್ಲಿ ಅಣ್ಣಪ್ಪಸ್ವಾಮಿ ದೇಗುಲದ ಸಮೀಪ ಮತ್ತೆ ಕಾಡ್ಗಿಚ್ಚು ಕಾಣಿಸಿಕೊಂಡು ನೂರಾರು ಎಕರೆ ಹುಲ್ಲುಗಾವಲು ಅಗ್ನಿಗೆ ಆಹುತಿಯಾಯಿತು.
ಇದನ್ನು ತಪ್ಪಿಸಲು ಈಗ ಅರಣ್ಯ ಇಲಾಖೆಯಿಂದ ಆನೆ ಕಾರ್ಯಪಡೆ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡಿದೆ. ರಸ್ತೆ ಬದಿಯಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚುವುದನ್ನು ತಡೆಯಲು, ರಸ್ತೆಯಲ್ಲಿ ವಾಹನ ನಿಲ್ಲಿಸಿದವರ ಮೇಲೆ ನಿಗಾ ಇಡುವ ಕೆಲಸವನ್ನು ಈ ಸಿಬ್ಬಂದಿ ಮಾಡಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು