4:30 AM Sunday16 - November 2025
ಬ್ರೇಕಿಂಗ್ ನ್ಯೂಸ್
ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ…

ಇತ್ತೀಚಿನ ಸುದ್ದಿ

ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಉರುಳಿದ 3 ಮರ: ಟ್ರಾಫಿಕ್ ಜಾಮ್; 3 ತಾಸು ಸಂಚಾರ ಸ್ಥಗಿತ; ತಡೆಗೋಡೆ ಕುಸಿತ

30/09/2023, 20:54

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮಂಗಳೂರು- ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಡಿ ಘಾಟ್ ನಲ್ಲಿ ಬೃಹತ್ ಗಾತ್ರದ 3 ಮರಗಳು ರಸ್ತೆಗೆ ಉರುಳಿದ ಪರಿಣಾಮ ಸುಮಾರು 3 ತಾಸು ಸಂಚಾರ ಸ್ಥಗಿತಗೊಂಡಿತು. ಅಣ್ಣಪ್ಪ ಗುಡಿ ಬಳಿ ತಡೆಗೋಡೆ ಕುಸಿದು ಬಿದ್ದಿದೆ.
ಕಾಫಿನಾಡಿನಲ್ಲಿ ಮಳೆಯ ಆರ್ಭಟ ಜೋರಾಗಿದೆ. ವಿಪರೀತ ಗಾಳಿ ಬೀಸುತ್ತಿದೆ.


ಚಾರ್ಮಾಡಿ ಘಾಟಿಯಲ್ಲಿ ಮಂಜು ಮುಸುಕಿನ ವಾತಾವರಣ ನೆಲೆಸಿದೆ. ಇದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ರಸ್ತೆ ತಡೆಗೋಡೆ ಕುಸಿದು ಬಿದ್ದಿದೆ.
ಕಳೆದ 3 ದಿನಗಳಿಂದ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಬಣಕಲ್, ಬಾಳೂರು ಸುತ್ತಮುತ್ತ ಮಳೆಯ ಅರ್ಭಟ ಹೆಚ್ಚಾಗಿದ್ದು ರೈತರ ಕೃಷಿ ಚಟುವಟಿಕೆಗೆ ಅಡಚಣೆಯಾಗಿದೆ. ಗುರುವಾರದಿಂದ ಶನಿವಾರದ ವರೆಗೆ 164.2 ಮಿ.ಮೀ(16.4ಸೆ.ಮೀ) ಮಳೆ ದಾಖಲಾಗಿದ್ದು ಶನಿವಾರವೂ ಧಾರಾಕಾರ ಮಳೆ ಮುಂದುವರೆದಿದ್ದು ರೈತರ ಬೆಳೆಗಳಿಗೆ ಹಾನಿಯಾಗುವ ಸಂಭವವಿದೆ. ಕಾಫಿ ಬೆಳೆ ಉದುರುವಿಕೆ ಆರಂಭವಾಗಿದೆ. ಕಾಫಿನಾಡು ಮಳೆಯಿಂದ ಸಂಪೂರ್ಣ ಸ್ಥಬ್ದವಾಗಿದೆ. ಕಾವೇರಿ ಹೋರಾಟದ ಬೆನ್ನಲ್ಲೇ ಮಲೆನಾಡಿನಲ್ಲಿ ವರುಣ ಅರ್ಭಟಿಸುತ್ತಿದ್ದಾನೆ. ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಕವಿದ ವಾತಾವರಣ ಸೃಷ್ಟಿಯಾಗಿದ್ದು ಅಣ್ಣಪ್ಪ ಸ್ವಾಮಿ ದೇವಸ್ಥಾನದ ಕೆಲವೇ ಅಂತರದಲ್ಲಿ ತಡೆಗೋಡೆ ಕುಸಿದಿದ್ದು ಮಳೆ ಹೆಚ್ಚಾದರೆ ಕುಸಿಯುವ ಅಪಾಯವೂ ಇದೆ. ಇಲ್ಲಿ ರಸ್ತೆ ಪಾಯ ಹಾಕಲು ಪ್ರಪಾತ ಇರುವುದರಿಂದ ತೊಂದರೆ ಉಂಟಾಗಿದೆ. ಬಲಭಾಗದಲ್ಲಿ ಮುಗಿಲೆತ್ತರದ ಬಂಡೆ ಆಕಾಶಕ್ಕೆ ಮುಖ ಮಾಡಿರುವುದರಿಂದ ಕಲ್ಲು ಬಂಡೆ ಹೊಡೆಯುವುದು ಕಷ್ಟವಾಗಿದೆ. ಇನ್ನು ಸೋಮನಕಾಡು ಪ್ರಪಾತದ ಬಳಿ ಮೊನ್ನೆ ನೀರು ಸಾಗಿಸುತ್ತಿದ್ದ ಲಾರಿ ಬಿದ್ದ ಜಾಗದಲ್ಲಿ ಪೊಲೀಸರು ಬ್ಯಾರೀಕೇಡ್ ಹಾಕಿದ್ದು ಅವು ಕೂಡ ಗಾಳಿಗೆ ಬಿದ್ದು ಹೋಗಿದೆ. ಇನ್ನು ಸ್ವಲ್ಪ ಗಾಳಿ ಬೀಸಿದರೆ ಬ್ಯಾರಿಕೇಡ್ ಕೂಡ ಪ್ರಪಾತಕ್ಕೆ ಬೀಳುವ ಸಂಭವವಿದೆ. ಮಳೆಯ ನಡುವೆಯೇ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಮಳೆಯ ಆರ್ಭಟಕ್ಕೆ ಪ್ರವಾಸಿಗರು ಚಾರ್ಮಾಡಿ ಘಾಟಿಯ ಜಲಪಾತಗಳಿಗೆ ಮೈಯೊಡ್ಡಿ ಸಂಭ್ರಮಿಸುತ್ತಿದ್ದಾರೆ. ಇನ್ನು ಜಲಪಾತಗಳಂತೂ ಭೋರ್ಗರೆದು ದುಮುಕಿ ಜನರ ಕಣ್ಮನ ಸೆಳೆಯುತ್ತಿವೆ. ಚಾರ್ಮಾಡಿ ಘಾಟಿಯಲ್ಲಿ ಒಂದು ಮರ ಎರಡು ದಿನದ ಹಿಂದೆ ಬಿದ್ದಿದ್ದು ಅದನ್ನು ಯಂತ್ರದಿಂದ ಕಡಿದು ತೆರವುಗೊಳಿಸಲಾಗಿದೆ. ಇನ್ನು ಶನಿವಾರ ಚಾರ್ಮಾಡಿ ಘಾಟಿಯ 8ನೇ ತಿರುವಿನಲ್ಲಿ ರಸ್ತೆಗೆ 3 ಮರ ಒಮ್ಮೆಲೇ ಬಿದ್ದಿದ್ದು ಸಮಾಜ ಸೇವಕ ಹಸನಬ್ಬ ಚಾರ್ಮಾಡಿ ಹಾಗೂ ಮೊಹಮ್ಮದ್ ಆರೀಫ್ ತಂಡ ಹಾಗೂ ಅಲ್ಲಿಯ ಸ್ಥಳೀಯರು ಸೇರಿ ಯಂತ್ರದಿಂದ ಮರವನ್ನು ತೆರವುಗೊಳಿಸಿದ್ದಾರೆ. 2 ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತ ಗೊಂಡಿತ್ತು. ಸಂಜೆ 5.30ಕ್ಕೆ ಸಂಚಾರ ಮುಕ್ತವಾಯಿತು. ಆದರೆ ಘಾಟ್ ನಲ್ಲಿ ಅಪಾಯದ ಕುಸಿದ ಎರಡು ಕಡೆಯ ತಡೆಗೋಡೆಗೆ ಎಚ್ಚರಿಕೆ ಫಲಕ ಹಾಕಿ ಅಪಾಯದ ಜಾಗೃತಿ ಮೂಡಿಸಬೇಕಿದೆ. ಇನ್ನು ಹೇಮಾವತಿ ನದಿಯಲ್ಲಿ ನೀರಿನ ಹರಿವು ಮೊನ್ನೆಗಿಂತ ಏರಿಕೆಯಾಗಿದೆ. ಬಾಳೂರು ಹೋಬಳಿಯ ಮೇಗೂರು ರಾಮಯ್ಯ ಎಂಬುವರ ಮನೆ ಮಳೆಗೆ ಕುಸಿದು ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ. ಅತಿಯಾದ ಮಳೆಯಿಂದ ವಿದ್ಯುತ್ ಕೂಡ ಕಣ್ಮುಚ್ಚಾಲೆ ಆಡುತ್ತಿದೆ. ಹೀಗೆ ಮಳೆ ಮುಂದುವರೆದರೆ ಅಪಾಯ ಸಂಭವಿಸುವ ಸಾಧ್ಯತೆಗಳು ದಟ್ಟವಾಗಿವೆ.

ಇತ್ತೀಚಿನ ಸುದ್ದಿ

ಜಾಹೀರಾತು