10:13 AM Thursday4 - July 2024
ಬ್ರೇಕಿಂಗ್ ನ್ಯೂಸ್
ಮಂಗಳೂರಿನ ವಿವಿಧಡೆ ಟ್ರಾಫಿಕ್ ಪೊಲೀಸರಿಂದ ಕರ್ಕಶ ಹಾರ್ನ್, ಎಲ್ಇಡಿ ಲೈಟ್ ತೆರವು ಕಾರ್ಯಾಚರಣೆ ಹುಣಸಗಿ: ವಿದ್ಯಾನಂದ ಶರಣರ 18ನೇ ವರ್ಷದ ಪುಣ್ಯಸ್ಮರಣೆ; ಸತ್ಸಂಗ ಸಂಜೀವಿನಿ ಕೂಟ ನೀಟ್ ಪರೀಕ್ಷೆ ಹಗರಣ: ಕೇಂದ್ರ ಸರಕಾರ ವಿರುದ್ಧ ಕಾಂಗ್ರೆಸ್, ಎನ್ ಎಸ್ ಯುಐ… ಚಾರ್ಮಾಡಿ ಘಾಟಿಯಲ್ಲಿ ಕಸ ಎಸೆದ ಎಳನೀರು ವಾಹನದ ಚಾಲಕನ ಮೇಲೆ ಕೇಸ್; ಚಾಲಕನಿಂದಲೇ… ಪಿಎಂ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ಕಲ್ಯಾಣ ಕರ್ನಾಟಕ ಅಭಿವೃದ್ದಿ, ಬೆಂಗಳೂರಿನಲ್ಲಿ ಸುರಂಗ… 1.80 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬೆಳಗೇರಾ ಸೇತುವೆ ಸಂಚಾರಕ್ಕೆ ರೆಡಿ: ಹೋರಾಟಕ್ಕೆ ಸಂದ… ಶಹಪುರ್ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದ ಬದನೆ ಸಾಂಬಾರಿನಲ್ಲಿ ಹುಳ… ನಿಮ್ಮ ಕನಸಿನ ಮನೆಯನ್ನು ಬಹುಮಾಮವಾಗಿ ಗೆಲ್ಲಬೇಕೆ ? ಹಾಗಿದ್ದರೆ ಇಲ್ಲಿದೆ ಸುವರ್ಣಾವಕಾಶ ಫುಟ್ ಪಾತ್ ಇರುವುದು ಸಾರ್ವಜನಿಕರಿಗೆ; ಅನಧಿಕೃತ ಗೂಡಂಗಡಿಗಳ ತೆರವಿಗೆ ಕ್ರಮ: ಮೇಯರ್ ಸುಧೀರ್… ಜಪ್ಪಿನಮೊಗರು ನೆರೆ ಸಮಸ್ಯೆ ಮಳೆಯಿಂದಲ್ಲ, ಅವೈಜ್ಞಾನಿಕ ಲೇಔಟ್ ನಿಂದ!!: ಪಾಲಿಕೆ, ಮುಡಾ ಇನ್ನಾದರೂ…

ಇತ್ತೀಚಿನ ಸುದ್ದಿ

ಚಾರ್ಮಾಡಿ ಘಾಟಿಯಲ್ಲಿ ಕಸ ಎಸೆದ ಎಳನೀರು ವಾಹನದ ಚಾಲಕನ ಮೇಲೆ ಕೇಸ್; ಚಾಲಕನಿಂದಲೇ ಕಸ ತೆರವು

02/07/2024, 21:19

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಚಾರ್ಮಾಡಿ ಘಾಟಿಯಲ್ಲಿ ಕಸ ಎಸೆದು ಹೋಗಿದ್ದ ವಾಹನವನ್ನು ಪತ್ತೆ ಹಚ್ಚಿ ಕೆಪಿ ಆಕ್ಟ್ ಪ್ರಕಾರ ಕೇಸು ದಾಖಲಿಸಿದ ಪ್ರಕರಣ ಬಯಲಾಗಿದೆ.ಚಾರ್ಮಾಡಿ ಘಾಟಿಯಲ್ಲಿ ಗಸ್ತು ತಿರುಗುತ್ತಿದ್ದ ಬಣಕಲ್ ಪೊಲೀಸ್ ಸಬ್ ಇನ್ ಸ್ಪೆಕ್ಚರ್ ಡಿ.ವಿ ರೇಣುಕಾ ಮಾತನಾಡಿ’ ಚಾರ್ಮಾಡಿ ಘಾಟಿಯಲ್ಲಿ ಮಂಗಳವಾರ ಹಾಸನ ಮೂಲದ ಎಳೆನೀರು ವಾಹನದ ಚಾಲಕ ವಾಹನದಲ್ಲಿದ್ದ ಕಸವನ್ನು ಘಾಟಿಯಲ್ಲಿ ಬಿಸಾಕಿ ಮಂಗಳೂರು ಭಾಗದಿಂದ ಕೊಟ್ಟಿಗೆಹಾರ ಕಡೆಗೆ ತೆರಳಿದ್ದ. ಅದರ ಜಾಡು ಹಿಡಿದು ಚಾರ್ಮಾಡಿ ಘಾಟಿಗೆ ಗಸ್ತಿನಲ್ಲಿದ್ದ ಪಿಎಸ್ ಐ ವಾಹನವನ್ನು ಗೇಟ್ ನಲ್ಲಿ ಹಿಡಿದು ವಾಪಾಸ್ ಕರೆ ತಂದು ಅದೇ ಕಸವನ್ನು ತುಂಬಿಸಿ ಚಾಲಕನಿಗೆ ಬಣಕಲ್ ಠಾಣೆಯಲ್ಲಿ ಕೆಪಿ ಆಕ್ಟ್ ಪ್ರಕಾರ ಕೇಸು ದಾಖಲಿಸಿ ದಂಡ ವಿಧಿಸಿ ಕಸವನ್ನು ಅಲ್ಲಿಂದ ಅವರಿಂದಲೇ ತೆರವು ಗೊಳಿಸಿ ಚಾಲಕನಿಗೆ ತಾನು ಮಾಡಿದ ತಪ್ಪಿನ ಅರಿವು ಮೂಡಿಸಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಇದರಿಂದ ಇತರ ವಾಹನದವರು ಈ ರೀತಿ ಮಾಡದಂತೆ ಜಾಗೃತಿ ಮೂಡಿಸಿದ ಪೊಲೀಸರ ಕ್ರಮವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು