5:16 PM Saturday4 - April 2026
ಬ್ರೇಕಿಂಗ್ ನ್ಯೂಸ್
Bangalore | ರಿಕ್ಕಿ ರೈ ಲ್ಯಾಂಬೋರ್ಗಿನಿ ಕಾರು ಸೀಜ್: 35 ಲಕ್ಷ ದಂಡ ರಾಜ್ಯದ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಬದಲಾವಣೆ ಸಾಧ್ಯತೆ: ಗೃಹ ಸಚಿವ ಡಾ. ಪರಮೇಶ್ವರ್ ವಾರ್ ಎಫೆಕ್ಟ್‌‌ | ಇವಿಗೆ ಹೆಚ್ಚಿದ ಡಿಮ್ಯಾಂಡ್: ತಿಂಗಳಲ್ಲಿ 29 ಸಾವಿರಕ್ಕೂ ಅಧಿಕ… ಗೋಪಾಲಪುರದ ಸಂತ ಅಂತೋಣಿ ಚರ್ಚ್ ನಲ್ಲಿ ಗುಡ್ ಫ್ರೈಡೆಯನ್ನು ಶಿಲುಬೆಟ್ಟದಲ್ಲಿ ಶ್ರದ್ದಾ ಭಕ್ತಿಯಿಂದ… ವಿರಾಜಪೇಟೆಯಲ್ಲಿ ಸಂಭ್ರಮದ ಹನುಮ ಜಯಂತಿ ಆಚರಣೆ: ಸಹಸ್ರಾರು ಸಂಖ್ಯೆಯಲ್ಲಿ ಸಮಾಗಮ ಪಾಟೀಲ್ – ಯತ್ನಾಳ್ ವಾಕ್ಸಮರ | ಒಂದು ದಿನ ಅವರೇ ಅಪ್ಪ-ಮಕ್ಕಳನ್ನು ಕೈಬಿಟ್ಟು… ದಾವಣಗೆರೆ ಉಪ ಚುನಾವಣೆ: ಕೆಂಡ ತುಳಿದು ಭಕ್ತಿ ಸಮರ್ಪಿಸಿದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್‌ ಸಿದ್ದಗಂಗಾ ಮಠಕ್ಕೆ ಬಂದಿದ್ದು ನನ್ನ ಜೀವನದ ಸೌಭಾಗ್ಯ: ರಾಷ್ಟ್ರಪತಿ ದ್ರೌಪದಿ ಮುರ್ಮು ದಾವಣಗೆರೆ, ಬಾಗಲಕೋಟೆಯಲ್ಲಿ ಸಚಿವ ಜಮೀರ್ ಪ್ರಚಾರ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕೆಂಜಾರು ದೇಗುಲದ ಹುಂಡಿ ಕಳ್ಳತನ: ಅಂತಾರಾಜ್ಯ ಕಳ್ಳನ ಬಂಧನ

ಇತ್ತೀಚಿನ ಸುದ್ದಿ

ರಾಜ್ಯದ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಬದಲಾವಣೆ ಸಾಧ್ಯತೆ: ಗೃಹ ಸಚಿವ ಡಾ. ಪರಮೇಶ್ವರ್

04/04/2026, 16:56

ದಾವಣಗೆರೆ(reporterkarnataka.com): ದೇಶದಲ್ಲಿ ಜಾರಿಗೆ ಬರಲಿರುವ ಮಹಿಳಾ ಮೀಸಲಾತಿ ಮತ್ತು ಜನಗಣತಿ ಪ್ರಕ್ರಿಯೆ ಬಳಿಕ ಕರ್ನಾಟಕದ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿಯೂ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳ ಮರು ಹಂಚಿಕೆ ನಡೆದಾಗ ಸೀಟುಗಳ ಸಂಖ್ಯೆ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು ಎಂದರು.
ಪ್ರಸ್ತುತ 2.5 ಲಕ್ಷ ಮತದಾರರಿಗೆ ಒಂದು ಕ್ಷೇತ್ರ ಎಂಬ ನಿಯಮ ಇದೆ. ಈ ಸಂಖ್ಯೆ ಹೆಚ್ಚಾದರೆ ಸಹಜವಾಗಿಯೇ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಲಿದೆ. ಒಂದು ವೇಳೆ ಮತದಾರರ ಸಂಖ್ಯೆಯನ್ನು 1.50ಲಕ್ಷ ಅಥವಾ 1.75 ಲಕ್ಷಕ್ಕೆ ಸೀಮೀತಗೊಳಿಸಿದರೆ ಕ್ಷೇತ್ರಗಳ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು ಎಂದರು.
ಮಹಿಳಾ ಮೀಸಲಾತಿ ವಿಧೇಯಕವು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆ ಪಡೆದ ನಂತರ, ಅದರ ಅನುಷ್ಠಾನವು ಮುಂಬರುವ ಜನಗಣತಿಯ ಮೇಲೆ ಅವಲಂಬಿತವಾಗಿದೆ. ಕೇಂದ್ರ ಸರ್ಕಾರವು ‘ಒಂದು ದೇಶ, ಒಂದು ಚುನಾವಣೆ’ ನೀತಿಯನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಇದರ ಭಾಗವಾಗಿಯೇ ಕ್ಷೇತ್ರಗಳ ಪುನರ್ವಿಂಗಡಣೆ ಪ್ರಕ್ರಿಯೆ ನಡೆಯಲಿದೆ. ಇದು ರಾಜ್ಯದ ರಾಜಕೀಯ ಭೂಪಟದಲ್ಲಿ ಹೊಸ ಬದಲಾವಣೆಗಳಿಗೆ ನಾಂದಿ ಹಾಡಲಿದೆ ಎಂದು ಅಭಿಪ್ರಾಯಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು