ಇತ್ತೀಚಿನ ಸುದ್ದಿ
ಚಳ್ಳಕೆರೆ: ಸಾರ್ವಜನಿಕ ಸ್ಥಳಗಳಲ್ಲಿ ಮಟ್ಕಾದಂಧೆ; ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ
20/11/2021, 20:59
ಗೋಪಾನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಸಾರ್ವಜನಿಕ ಸ್ಥಳಗಳಲ್ಲಿ ಮಟ್ಕಾ ಚೀಟಿ ಬರೆಯುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂದನಕ್ಕೆ ಕಳಿಸಿದ ಪ್ರಕರಣ ಚಳ್ಳಕೆರೆ ಠಾಣೆ ವ್ಯಾಪ್ತಿಯಲ್ಲಿ ಶವಿವಾರ ಸಂಜೆ ನಡೆದಿದೆ.
ನಗರದ ಕರ್ನಾಟ ಬೇಕರಿ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮಟ್ಕ ಚೀಟಿ ಬರೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಪೋಲಿಸ್ ಇನ್ಸ್ಪೆಕ್ಟರ್ ಜೆ.ಎಸ್.ತಿಪ್ಪೇಸ್ವಾಮಿ ದಾಳಿ ನಡೆಸಿ ಕುರಡಿಹಳ್ಳಿ ಗ್ರಾಮದ ಮೂರ್ತಿನಾಯ್ಕ(33) ಹಾಗೂ 770 ರೂ ಹಾಗೂ ಟೌನ್ ರಹೀಂನಗರದ ಶುದ್ದನೀರಿನ ಘಟಕದ ಬಳಿ ಪಾಪಣ್ಣ(32) 610 ರೂ ಹಾಗೂ ಮಟ್ಕ ಚೀಟಿಗಳನ್ನು ವಶಕ್ಕೆ ಪಡೆದು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂದನದ ವಶಕ್ಕೆ ನೀಡಲಾಗಿದೆ.
ಮಟ್ಕಾ ದಂಧೆಕೋರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಠಾಣೆಯಲ್ಲೇ ಜಾಮೀನು ಪಡೆದು ಬಿಡಲಾಗುತ್ತಿದ್ದು ಇದೇ ಪ್ರಥಮ ಬಾರಿಗೆ ಇಬ್ಬರು ಆರೋಪಿಗಳಿಗೆ ಜಾಮೀನು ರಹಿತ ಪ್ರಕರಣದಡಿಯಲ್ಲಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೋಲಿಸ್ ಇನ್ಸ್ಪೆಕ್ಟರ್ ಜೆ,ಎಸ್.ತಿಪ್ಪೇಸ್ವಾಮಿ ರಿಪೋರ್ಟರ್ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.