1:58 PM Friday10 - April 2026
ಬ್ರೇಕಿಂಗ್ ನ್ಯೂಸ್
ಚಾಮರಾಜನಗರ; ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ‘ಸೈಕೋ’ ಕಳ್ಳನ ಬಂಧನ ಫೇಲಾದವರಿಗೆ ಇನ್ನೊಂದು ಚಾನ್ಸ್: ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಪ್ರಕಟ Suratkal | ಅಮಾನತುಗೊಂಡಿದ್ದ ಎನ್‌ಐಟಿಕೆ ಕುಲಸಚಿವ ರವೀಂದ್ರನಾಥ್ ಸೇವೆಯಿಂದ ವಜಾ ಪತಿಯ ಶವದ ಜತೆ 10 ದಿನ ಕಳೆದ ಪತ್ನಿ: ಮಲೆನಾಡು ಚಿಕ್ಕಮಗಳೂರಿನಲ್ಲಿ ವಿಚಿತ್ರ… ಕಾಂಗ್ರೆಸ್‌ನಿಂದ ಕೋಟ್ಯಂತರ ರೂಪಾಯಿ ಹಣ ಹಂಚಿಕೆ: ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಆರೋಪ ಅಮ್ಮನ ಸಾವಿನ ದುಃಖದಲ್ಲೂ ಛಲ ಬಿಡದೆ ಪರೀಕ್ಷೆ ಬರೆದ ದಿಶಾ ಸ್ಟೇಟ್ ಗೆ… ದಾವಣಗೆರೆ ದಕ್ಷಿಣ: ಮತಗಟ್ಟೆ ಬಳಿ ಟೇಬಲ್ ವಿಚಾರವಾಗಿ ಕಾಂಗ್ರೆಸ್-ಎಸ್ ಡಿಪಿಐ ಕಾರ್ಯಕರ್ತರ ಜಟಾಪಟಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆ: ಬಹುತೇಕ ಶಾಂತಿಯುತ ಮತದಾನ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: 60 ಎಕರೆ ಅರಣ್ಯ ಪ್ರದೇಶ… ಎಲ್ಲ ಕಡೆ ಸಿದ್ದರಾಮಯ್ಯ ಬೇಕು ಎಂಬ ಬೇಡಿಕೆಯಿದೆ; ಕುಮಾರಸ್ವಾಮಿನಾ ಯಾರು ಎಂದು ಕೇಳ್ತಾರೆ:…

ಇತ್ತೀಚಿನ ಸುದ್ದಿ

ಚಳ್ಳಕೆರೆ: ಸಂಭ್ರಮ- ಸಡಗರದಿಂದ ನಡೆದ ಹನುಮ ಜಯಂತಿ: ದೇವರಿಗೆ ಹಾಲು- ತುಪ್ಪದ ಅಭಿಷೇಕ

25/12/2023, 22:03

ಮುರುಡೇ ಗೌಡ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಹನುಮ ಜಯಂತಿಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಂಭ್ರಮ ಸಡಗರದಿಂದ ಗ್ರಾಮಸ್ಥರೆಲ್ಲರೂ ಆಚರಿಸಿದರು.
ಹನುಮನ ದೇವಸ್ಥಾನವನ್ನು ಮಾವಿನ-ತೋರಣ ವಿದ್ಯುತ್ ದೀಪಗಳು ಮತ್ತು ವಿವಿಧ ಬಗೆಯ ಹೂಗಳಿಂದ ದೇವಸ್ಥಾನವನ್ನು, ಅಲಂಕರಿಸಿ ದೇವರಿಗೆ, ಹಾಲು-ತುಪ್ಪದ ಅಭಿಷೇಕ, ವಿವಿಧ ಬಗೆಯ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ಭಕ್ತರು ಹನುಮಾನ ದರ್ಶನ ಪಡೆಯಲು ಹೂವಿನ ಹಾರ, ಬಾಳೆಹಣ್ಣು, ತೆಂಗಿನಕಾಯಿ, ಕರ್ಪೂರ, ಪೂಜಾ ಸಾಮಗ್ರಿಗಳೊಂದಿಗೆ ಗ್ರಾಮದ ಸಮಸ್ತ ಭಕ್ತರು ದೇವಸ್ಥಾನಕ್ಕೆ ಬಂದು ದರ್ಶನವನ್ನು ಪಡೆದಿದ್ದಾರೆ, ಎಂದು ಪೂಜಾರಿ ರಂಗಸ್ವಾಮಿ ತಿಳಿಸಿದ್ದಾರೆ.

ಪ್ರತಿವರ್ಷದಂತೆ ಈ ವರ್ಷವೂ ಹನುಮ ಜಯಂತಿಯನ್ನು ತಾಲೂಕಿನಲ್ಲಿ ಬರಗಾಲವಿದ್ದರೂ ಸಹ ಗ್ರಾಮದ ಎಲ್ಲಾ ಜಾತಿ ಜನಾಂಗದ ಸಹಕಾರದಿಂದ ವಿಜೃಂಭಣೆಯಿಂದ ಆಚರಿಸಿದ್ದೇವೆ. ಅನ್ನ ಸಂತರ್ಪಣೆ ಮಾಡಲು ಒಂದು ಕ್ವಿಂಟಲ್ ಪುಳಿಯೋಗರೆ, ಅರ್ಧ ಕ್ವಿಂಟಲ್ ಪಾಯಸ,ಪಲ್ಯ ಎಲ್ಲವನ್ನು ಭಕ್ತರಿಗೆ ಮಾಡಿಸಿದ್ದು 2 ಸಾವಿರಕ್ಕೂ ಅಧಿಕ ಭಕ್ತಾದಿಗಳು ಪ್ರಸಾದ ಸ್ವೀಕರಿಸಿದ್ದಾರೆ. ಹಾಗೂ ಗ್ರಾಮದಲ್ಲಿ 12 ವರ್ಷಗಳಿಂದ ಹನುಮ ಜಯಂತಿ ಆಚರಿಸುತ್ತಾ ಬಂದಿದ್ದೇವೆ. ದೇವಸ್ಥಾನ ಇನ್ನು ಅಭಿವೃದ್ಧಿ ಹೊಂದಬೇಕಿದೆ. ಇದರಿಂದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕರಾದ ಟಿ. ರಘುಮೂರ್ತಿ ಅವರು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನವನ್ನು ತನ್ನ ಅನುದಾನದಲ್ಲಿ ಪೂರ್ಣಗೊಳಿಸಿ ಕೊಡುತ್ತಾರೆ ಎಂಬ ಭರವಸೆ ನೀಡಿದ್ದರು. ಇದರಿಂದ ಗ್ರಾಮಸ್ಥರು ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿ ಜಯಶೀಲರನ್ನಾಗಿಸಿದ್ದೇವೆ. ಶಾಸಕರು ದೇವಸ್ಥಾನವನ್ನು ಪೂರ್ಣಗೊಳಿಸಿ ಕೊಡುವ ನಂಬಿಕೆ ಗ್ರಾಮಸ್ಥರಿಗೆ ಇದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಪಿ.ಟಿ.ಎಸ್. ನಾಗರಾಜ್ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು