10:54 PM Saturday21 - December 2024
ಬ್ರೇಕಿಂಗ್ ನ್ಯೂಸ್
ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಆರ್ಚ್ ಬಿಷಪ್ಸ್ ಹೌಸ್ ಕ್ರಿಸ್ಮಸ್ ಆಚರಣೆಯಲ್ಲಿ ಮುಖ್ಯಮಂತ್ರಿ… ವಕ್ಫ್ ಹೋರಾಟಕ್ಕೆ ಮಣಿದು ಸಮಿತಿ ರಚನೆಗೆ ಸರಕಾರ ನಿರ್ಧಾರ: ಪ್ರತಿಪಕ್ಷ ನಾಯಕ ಆರ್‌.… ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ? ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಿಒಸಿ ದರ್ಜೆ: ವಿಮಾನಯಾನ ಸಚಿವ ಜತೆ ಸಂಸದ ಕ್ಯಾಪ್ಟನ್… ಮಂಗಳೂರು: ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ. ಮೌಲ್ಯದ ಡ್ರಗ್ಸ್… ಎನ್.ಆರ್.ಪುರ: ತಂದೆ- ಮಗನ ಮೇಲೆ ಕಾಡಾನೆ ದಾಳಿ; ತಂದೆ ಸಾವು; ಮಗ ತಪ್ಪಿಸಿಕೊಂಡು… ಅರಣ್ಯ ಹಕ್ಕು ಕಾಯ್ದೆಯಡಿ ಇದುವರೆಗೆ 16,665 ಪ್ರಕರಣಗಳಲ್ಲಿ ಹಕ್ಕುಪತ್ರ ವಿತರಣೆ: ಸದನದಲ್ಲಿ ಸಿಎಂ… ರಾಜ್ಯದಲ್ಲಿ ಅನಧಿಕೃತವಾಗಿ ವಾಸವಿದ್ದ 24 ಪಾಕ್, 159 ಬಾಂಗ್ಲಾದೇಶ ಮೂಲದವರ ಬಂಧನ: ಗೃಹ…

ಇತ್ತೀಚಿನ ಸುದ್ದಿ

ಚಳ್ಳಕೆರೆ ಮೂಲ ಸೌಕರ್ಯ ಸಮಸ್ಯೆ: ನಗರಸಭೆ ಆಯುಕ್ತರಿಗೆ ಕರ್ನಾಟಕ ಯುವ ರಕ್ಷಣಾ ವೇದಿಕೆ ಮನವಿ

21/12/2024, 22:47

ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಕರ್ನಾಟಕ ಯುವ ರಕ್ಷಣಾ ವೇದಿಕೆ ಚಳ್ಳಕೆರೆ ತಾಲೂಕು ಸಮಿತಿ ವತಿಯಿಂದ ಶನಿವಾರ ನಗರಸಭಾ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಯುವರಕ್ಷಣಾ ವೇದಿಕೆ ಅಧ್ಯಕ್ಷರ ಹಾಗೂ ಸಂಸ್ಥಾಪಕ ಸುನಿಲ್ ಎಂ.ಎಸ್. ಅವರು ಮನವಿ ಸಲ್ಲಿಸಿದರು.
ಇತ್ತೀಚಿನ ದಿನಗಳಲ್ಲಿ ಚಳ್ಳಕೆರೆ ವೈಜ್ಞಾನಿಕವಾಗಿ ಉತ್ತಮ ಮಟ್ಟ ಅಭಿವೃದ್ಧಿ ಹೊಂದಿದ್ದು ಇಲ್ಲಿನ ಅನೇಕ ಸಮಸ್ಯೆಗಳಾದ ನಗರದ ರಸ್ತೆಗಳು ಹಾಗೂ ನಾಮಫಲಕದ ಅಳವಡಿಕೆ ಮತ್ತು ನಗರ ಸ್ವಚ್ಛತೆ ಕಾಪಾಡುವುದು ಹಾಗೆ ಖಾಸಗಿ ಬಸ್ ನಿಲ್ದಾಣ ಅರ್ಧ ಕೆಲಸವಾಗಿ ನಿಂತಿದೆ. ಇದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಓಡಾಲು ತುಂಬಾ ಸಮಸ್ಯೆಯಾಗುತ್ತಿದೆ. ಸ್ವಚ್ಛತೆ ಇಲ್ಲದೆ ಅವ್ಯವಸ್ಥೆ ನಿರ್ಮಾಣವಾಗಿದೆ. ಹಾಗೆ ರೈತರ ಮಾರುಕಟ್ಟೆ ಅವ್ಯವಸ್ಥೆಯಿಂದ ಕೂಡಿದ್ದು ಮಾರುಕಟ್ಟೆಗೆ ಬರುವ ರೈತರು ತುಂಬಾ ಇರುಸು ಮರುಸು ಆಗಿದೆ. ಸುಖ ಸುಮ್ಮನೆ ಫ್ಲೆಕ್ಸ್ ಗಳನ್ನು ದಾರಿಗಳಿಗೆ ಅಡ್ಡಗಟ್ಟಿ ಹಾಕುತ್ತಿದ್ದಾರೆ. ದಯವಿಟ್ಟು ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಬೇಕೆಂದು ನಗರ ಆಯುಕ್ತರಿಗೆ ಮನವಿ ಅರ್ಪಿಸಿದರು.
ಚಿತ್ರದುರ್ಗದ ಜಿಲ್ಲಾಧ್ಯಕ್ಷ ಪಿ. ಮೋಹನ್ ಕುಮಾರ್, ಚಳ್ಳಕೆರೆ ತಾಲೂಕು ಅಧ್ಯಕ್ಷ ಮೈಲಾರ ಸ್ವಾಮಿ, ನಗರ ಘಟಕದ ಅಧ್ಯಕ್ಷ ಮಾರುತಿ ಜಿ., ತಾಲೂಕು ಪ್ರಧಾನ ಕಾರ್ಯದರ್ಶಿ ಹಾಲೇಶ್ ಯಾದವ್ ಬೆಳಗೆರೆ,
ಕಾರ್ಮಿಕ ಘಟಕದ ಅಧ್ಯಕ್ಷ ಉಪೇಂದ್ರ ಯಾದವ್,
ನಗರ ಸಹ ಕಾರದರ್ಶಿ ಶ್ರೀನಿವಾಸ್, ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು