ಇತ್ತೀಚಿನ ಸುದ್ದಿ
ಚಳ್ಳಕೆರೆ: ಬೆಳ್ಳಂಬೆಳಗೆ ರಸ್ತೆ ಅಪಘಾತ; ಮೆಕ್ಕೆಜೋಳ ಸಾಗಿಸುತ್ತಿದ್ದ ಟೆಂಪೋಗೆ ಬುಲೆರೋ ಡಿಕ್ಕಿ; ಒಬ್ಬರಿಗೆ ಗಾಯ, ಆಸ್ಪತ್ರೆಗೆ ದಾಖಲು
24/11/2023, 11:57
ಮುರುಡೇ ಗೌಡ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಚಳ್ಳಕೆರೆ – ಪರಶುರಾಂಪುರ ಹೆದ್ದಾರಿಯಲ್ಲಿ ಇಂದು ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಅಲ್ಲಾಪುರದ ಗೇಟ್ ಬಳಿ ಬೆಳಗ್ಗೆ 6 ಗಂಟೆಯ ವೇಳೆಗೆ ಅಪಘಾತ ನಡೆದಿದೆ.
ನಾಲ್ಕು ಚಕ್ರದ ಟೆಂಪೋ ವಾಹನದಲ್ಲಿ ಮೆಕ್ಕೆಜೋಳ ತುಂಬಿಕೊಂಡು ಚಳ್ಳಕೆರೆಗೆ ಹೊರಟಿದ್ದ ಸೂರನಹಳ್ಳಿ ಗ್ರಾಮದ ಚಾಲಕ ತಿಮ್ಮಣ್ಣ ಅವರ ವಾಹನಕ್ಕೆ ಎದುರಿನಿಂದ ಬಂದ ಬುಲೆರೋ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಸೂರನಹಳ್ಳಿ ತಿಮ್ಮಣ್ಣ ಅವರು ಕಾಲು ಮುರಿತಕ್ಕೊಳಗಾಗಿದ್ದು, ಅವರನ್ನು ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೆ ಕಾರಣನಾದ ಬುಲೆರೋ ವಾಹನ ಚಾಲಕ ವಾಹನ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಪೊಲೀಸರು ಕೇಸು ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.