12:27 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಚಳ್ಳಕೆರೆ: 15 ದಿನಗಳಲ್ಲಿ 100ಕ್ಕೂ ಹೆಚ್ಚು ಮನೆ ಕುಸಿತ; 5 ಮಂದಿ ಸಾವು; ಹಳೆ ಗೋಡೆಗಳ ಸರ್ವೇ ಆರಂಭ

21/11/2021, 10:49

ಗೋಪನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಕಳೆದ ಸುಮಾರು 15 ದಿನದಿಂದ ಸತತ ಮಳೆಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಗೋಡೆ ಕುಸಿದು ಐದು ಜನರು ಪ್ರಾಣ ಕಳೆದುಕೊಂಡಿರುವುದರಿಂದ    ಅಧಿಕಾರಿಗಳು ಎಚ್ಚೆತ್ತುಕೊಂಡು ಶಿಥಿಲವಾದ ಮನೆಗಳ ಸರ್ವೇ ಕಾರ್ಯವನ್ನು ಜಿಟಿ ಜಿಟಿ ಮಳೆಯಲ್ಲೂ ಕೊಡೆ ಹಿಡಿದು ಆರಂಭಿಸಿದ್ದಾರೆ. 

ಚಳ್ಳಕೆರೆ ತಾಲೂಕಿನ ಬಾಲೆನಹಳ್ಳಿ, ರಾಮಜೋಗಿಹಳ್ಳಿ, ಚಿಕ್ಕಮ್ಮನಹಳ್ಳಿ, ದೊಡ್ಡೇರಿ ಕೆರೆ ಮುದ್ದಿನ ಹಟ್ಟಿ, ಕೋಡಿಹಳ್ಳಿ, ಹಿರೇಹಳ್ಳಿ , ಪಾಲನಾಯಕನ ಕೋಟೆ, ಕಕ್ಕಿ ಬೋರನ ಹಟ್ಟಿ ಹಳ್ಳಿಗಳು ಸೇರಿದಂತೆ ವಿವಿಧ ಗ್ರಾಮಗಳಿಗೆ ತಹಶೀಲ್ದಾರ್ ಎನ್.ರಘುಮೂರ್ತಿ,ತಾಪಂ ಇಒ ಮಡಗಿನ ಬಸಪ್ಪ ಹಾಗೂ ಸಿಬ್ಬಂದಿಗಳು ಪರಿಶೀಲನೆ ಆರಂಭಿಸಿದ್ದಾರೆ.


ಗೋಡೆ ಕುಸಿದು ಐದು ಜನರು ಮೃತ ಪಟ್ಟ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಹಳೆಯ ಶಿಥಿಲವಾದ ಗೋಡೆ ಬಿರುಕು ಬಿಟ್ಟಿರುವ ಮನೆಗಳ ಸರ್ವೆ ಮಾಡಿ ಅಂತಹ ಕುಟುಂಬಗಳಿಗೆ ತಾತ್ಕಾಲಿಕವಾಗಿ ಶಾಲೆ ಹಾಗೂ ಸಮುದಾಯಭವನಗಳಲ್ಲಿ ತಾತ್ಕಾಲಿಕವಾಗಿ ಗಂಜಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ತಾಪಂ ಇಒ ಮಡಗಿನ ಬಸಪ್ಪ ತಿಳಿಸಿದ್ದಾರೆ.

ಗ್ರಾಪಂ, ನಗರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಜಿಟಿ ಜಿಟಿ ಯಲ್ಲೂ ಬೆಳ್ಳೆಂ ಬೆಳ್ಳಗ್ಗೆ ಕೊಡೆಗಳನ್ನಿಡಿದು ಸರ್ವೆ ಕಾರ್ಯಕ್ಕೆ ಚುರುಕುಮಟ್ಟಿಸಿದ್ದಾರೆ.


ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ ತಾಲೂಕಿನಲ್ಲಿ ಅಕಾಲಿಕ ಮೆಳೆ ಪ್ರಾರಂಭವಾಗಿ 15 ದಿನಗಳನ್ನು ಸುಮಾರು 100 ಕ್ಕೂಹೆಚ್ಚು ಮನೆಗಳು ಕುಸಿದಿದ್ದು ಪ್ರತಿ ಗ್ರಾಮಗಳಲ್ಲಿ ಹಳೆಯ ಶಿಥಿಲವಾದ ಮನೆಗಳಲ್ಲಿ ವಾಸಿಸುವ ಕುಟುಂಬಗಳು ಸುಮುದಾಯ ಭವನ, ಶಾಲೆಗಳಲ್ಲಿ ವಾಸ ಮಾಡುವಂತೆ ತಿಳಿಸಿದ್ದು ಸರಕಾರದಿಂದ ವಸತಿಯೋಜನೆಯಡಿಯಲ್ಲಿ ಬಿದ್ದ ಹಾಗೂ ಶಿಥಿಲವಾದ ಮನೆಗಳಿಗೆ ವಸತಿ ಯೋಜನೆಯ ಮನೆಗಳ ಮಂಜೂರಾತಿ ಮಾಡುವಂತೆ ತಿಳಿಸಿದ್ದಾರೆ

ಇತ್ತೀಚಿನ ಸುದ್ದಿ

ಜಾಹೀರಾತು