ಇತ್ತೀಚಿನ ಸುದ್ದಿ
ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿ: ತಪ್ಪಿದ ಭಾರೀ ಅನಾಹುತ; 8 ಮಂದಿಗೆ ಸಣ್ಣಪುಟ್ಟ ಗಾಯ
15/11/2024, 20:35

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾದ ಘಟನೆ
ಚಿಕ್ಕಮಗಳೂರು ತಾಲೂಕಿನ ಬೆಟ್ಟದ ಮಳಲಿಯಲ್ಲಿ ಗ್ರಾಮದಲ್ಲಿ ನಡೆದಿದೆ.
ಕಾರ್ಮಿಕರನ್ನ ತೋಟದಿಂದ ಕರೆತರುವಾಗ ಈ ಘಟನೆ ನಡೆದಿದೆ. ತೋಟದ ಕೆಲಸ ಮುಗಿಸಿ ವಾಪಸ್ ಕರೆತರುವಾಗ ಜೀಪ್ ಪಲ್ಟಿಯಾಗಿದೆ. ಜೀಪ್ ರಸ್ತೆ ಬದಿಯಿಂದ ಕಾಫಿ ತೋಟದೊಳಕ್ಕೆ ಉರುಳಿ ಬಿದ್ದಿದೆ. ಜೀಪ್ ಮರಗಳನ್ನ ತಡೆದು ನಿಂತ ಹಿನ್ನೆಲೆ ಭಾರೀ ಅನಾಹುತ ತಪ್ಪಿದೆ. ಜೀಪ್ ನಲ್ಲಿದ್ದ 8 ಮಂದಿಗೆ ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಲ್ಲಂದೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.