4:24 PM Tuesday26 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಐಷಾರಾಮಿ ಕಾರು ಅವಘಡ : ನಜ್ಜುಗುಜ್ಜಾದ ಕ್ಯಾಬ್

27/09/2021, 11:41

ಬೆಂಗಳೂರು (Reporterkarnataka.com) ಇತ್ತೀಚೆಗೆ ನಡೆದ ತಮಿಳು ನಾಡು ಶಾಸಕನ ಮಗನ ಐಷಾರಾಮಿ ಕಾರು ಅಪಘಾತದ ಸುದ್ದಿ ಹಸಿಯಾಗಿರಯವಾಗಲೆ ಸಿಲಿಕಾನ್ ಸಿಟಿಯಲ್ಲಿ ಭಾನುವಾರ ರಾತ್ರಿ ಭೀಕರ ಅಪಘಾತವೊಂದು ಸಂಭವಿಸಿದೆ. 

ವೀಕೆಂಡ್‌ನಲ್ಲಿ ಮೋಜು ಮಸ್ತಿಗಾಗಿ ತಮ್ಮ ಬಳಿ ಇರುವ ಐಷಾರಾಮಿ ಕಾರುಗಳನ್ನು ರೋಡಿಗಿಳಿಸೋ ದೊಡ್ಡವರ ಮಕ್ಕಳು, ರ‍್ಯಾಷ್ ಡ್ರೈವಿಂಗ್ ಮಾಡಿ ಅಪಘಾತ ಮಾಡುತ್ತಿರುವುದು ಇನ್ನೂ ನಿಂತಿಲ್ಲ. ಪದೇ ಪದೇ ಭೀಕರ ಅಪಘಾತಗಳು ಸಂಭವಿಸಿ ದುರಂತಗಳು ನಡೀತಿದ್ರು ನಗರದಲ್ಲಿ ಯುವಜನತೆ ಮಾತ್ರ ಬುದ್ದಿ ಕಲೀತಿಲ್ಲ. ಬೆಂಗಳೂರಿನಲ್ಲಿ ಐಷಾರಾಮಿ ಕಾರು ಮಾಲೀಕರ ಶೋಕಿ ಮುಂದುವರಿದಿದ್ದು, ಯಾವುದಕ್ಕೂ ಕೇರ್ ಮಾಡ್ತಿಲ್ಲ.

ನಿನ್ನೆ ತಡರಾತ್ರಿ ಬೆಂಗಳೂರಿನ ದೊಮ್ಮಲೂರು ರಸ್ತೆಯಲ್ಲಿ ಅತೀ ವೇಗವಾಗಿ ಬಂದ ಪೋರ್ಷೇ ಕಾರು ಇಟಿಯೋಸ್ ಕ್ಯಾಬ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ನಂತರ ಕಮಾಂಡೋ ಆಸ್ಪತ್ರೆಯ ಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಇಟಿಯೋಸ್ ಕಾರಿನ ಹಿಂಭಾಗ ಸಂಪೂರ್ಣ ಜಖಂ ಆಗಿದೆ. ಒಂದೂವರೆ ಕೋಟಿ ಮೌಲ್ಯದ ಪೋರ್ಷೇ ಕಂಪನಿಯ ಈ ರೇಸ್ ಕಾರು ೨ ಆಸನಗಳನ್ನು ಹೊಂದಿದೆ. ೩,೯೯೫ ಸಿಸಿಯ ಸಾಮರ್ಥ್ಯವನ್ನು ಹೊಂದಿರುವ ಪೋರ್ಷೇ ಕಾರು ಡಿಕ್ಕಿಯ ರಭಸಕ್ಕೆ ಮುಂಭಾಗದ ಎಂಜಿನ್, ಗೇರ್ ಬಾಕ್ಸ್, ೨ ಚಕ್ರಗಳಿಗೆ ಹಾನಿಯಾಗಿದೆ. ಇನ್ನು ಇಟಿಯೋಸ್ ಕ್ಯಾಬ್ ಹಿಂಬದಿ ಸಂಪೂರ್ಣ ಜಖಂ ಆಗಿದ್ದು ಚಾಲಕ ಕೃಷ್ಣಮೂರ್ತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇನ್ನೂ ಉದ್ಯಮಿ ಮಗ ಜವೇರಾ ಮೆವಾನಿ ಪೋರ್ಷೇ ಕಾರನ್ನು ಡ್ರಂಕ್ & ಡ್ರೈವ್ ಮಾಡಿರುವುದು ವೈದ್ಯಕೀಯ ಪರೀಕ್ಷೆ ವೇಳೆ ದೃಢಪಟ್ಟಿದೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಹಲಸೂರು ಟ್ರಾಫಿಕ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.. ಇನ್ನೂ ಕಾರಿನಲ್ಲಿದ್ದ ಜವೇರ್ ಪತ್ನಿ ಶ್ರೇಯಾಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು