2:50 PM Sunday30 - November 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ… ಶಾಲೆಯಂಗಳದಲ್ಲಿ ತಾರಾಲಯ: ಗ್ರಾಮೀಣ ಮಕ್ಕಳಲ್ಲಿ ಖಗೋಳ ವಿಜ್ಞಾನ ಕೌತುಕ ಬಿತ್ತುವ ಗುರಿ; ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ಯಾವುದೇ ಸಂಘರ್ಷ ನಡೆಯದಂತೆ ಹಬ್ಬವನ್ನು ಆಚರಿಸಿ: ತಹಸೀಲ್ದಾರ್ ರಂಜಿತ್ ಎಸ್.

22/08/2025, 21:36

ನೀವು ಶಾಂತಿ ಸುವ್ಯವಸ್ಥೆಯಿಂದ ಹಬ್ಬ ಮಾಡಿದರೆ ನಾವು ನಿಮ್ಮ ಜೊತೆಗೆ ಹಬ್ಬ ಮಾಡುತ್ತೇವೆ. ಶಾಂತಿ ಕದಡಿದರೆ ನಾವು ಕೆಲಸದ ನಿಮಿತ್ತ ಬರಬೇಕಾಗುತ್ತದೆ: ಡಿವೈಎಸ್ಪಿ ಅರವಿಂದ್ ಕಲಗುಜ್ಜಿ

ಈ ಬಾರಿ ಡಿ ಜೆ ಹಾಕಬಹುದಾ? ಏನಂದ್ರು ಅಧಿಕಾರಿಗಳು.!?

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಎರಡು ಹಬ್ಬಗಳು ನಿನ್ನೆ ಮೊನ್ನೆ ಶುರುವಾಗಿದ್ದಲ್ಲ, ಹಿಂದಿನಿಂದಲೂ ಹಾಗೂ ಮುಂದೆಯೂ ಆಚರಿಸಬೇಕಾದ ಹಬ್ಬ, ಈ ಸಭೆ ಅಧಿಕಾರಿಗಳಿಂದ ನಿಮಗೆ ನಿರ್ಬಂಧ ಹೇರಲು ಮಾಡುತ್ತಿಲ್ಲ. ಎರಡು ಹಬ್ಬಗಳನ್ನು ಜೊತೆ ಜೊತೆಗೆ ಆಚರಿಸಬೇಕು ಎಂಬ ಕಾರಣದಿಂದ ಈ ಸಭೆ ಮಾಡುತ್ತಿದ್ದೇವೆ ಎಂದು ತಾಲೂಕು ದಂಡಾಧಿಕಾರಿ ರಂಜಿತ್ ಎಸ್. ಹೇಳಿದರು.
ಶುಕ್ರವಾರ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಸೌಹಾರ್ದ ಸಭೆ ನಡೆಸಿ ಮಾತನಾಡಿದರು.
ಎಲ್ಲಾ ಇಲಾಖೆ ಅಧಿಕಾರಿಗಳನ್ನು ತಾಲೂಕು ಕಚೇರಿಯಲ್ಲಿ ಹಬ್ಬದ ಅಂಗವಾಗಿ ಒಂದೇ ಕಡೆ ಸೇರಿಸುವ ಸಲುವಾಗಿ ಏಕಗವಾಕ್ಷಿ ಕೇಂದ್ರ ತೆರೆಯಲಾಗಿದೆ. ಕಳೆದ ಬಾರಿ ನಿಮಗೆ ಏನೇ ಸಮಸ್ಯೆ ಆಗಿದ್ದರು. ಅದರ ಬಗ್ಗೆ ಮಾತನಾಡಬಹುದು, ಧಾರ್ಮಿಕ ಹಬ್ಬ ಆಗಿರುವುದರಿಂದ ನಮ್ಮ ಈ ತೀರ್ಥಹಳ್ಳಿಯಲ್ಲಿ ಯಾವುದೇ ಸಂಘರ್ಷ ಹಾಗೂ ಕೋಮುಗಲಭೆ ಆಗುವ ಕೆಲಸ ನಡೆಯಬಾರದು ಎಂದು ಈ ಶಾಂತಿ ಸೌಹಾರ್ದ ಸಭೆ ನಡೆಸುತ್ತಿದ್ದೇವೆ ಎಂದರು.
ಡಿವೈಎಸ್ ಪಿ ಅರವಿಂದ್ ಕಲಗುಜ್ಜಿ ಮಾತನಾಡಿ, ಗಣಪತಿ ಹಾಗೂ ಈದ್ ಮಿಲಾದ್ ಹಬ್ಬ ಒಟ್ಟೋಟ್ಟಿಗೆ ಬರುವುದರಿಂದ
ಎಲ್ಲರೂ ಸೇರಿ ಹಬ್ಬ ಮಾಡಬೇಕು. ನೀವು ಶಾಂತಿ ಸುವ್ಯವಸ್ಥೆಯಿಂದ ಹಬ್ಬ ಮಾಡಿದರೆ ನಾವು ನಿಮ್ಮ ಜೊತೆಗೆ ಹಬ್ಬ ಮಾಡುತ್ತೇವೆ. ಶಾಂತಿ ಕದಡಿದರೆ ನಾವು ಕೆಲಸದ ನಿಮಿತ್ತ ಬರಬೇಕಾಗುತ್ತದೆ. ಮೊದಲೆಲ್ಲ ಗಣಪತಿ ತರುವಾಗ ಘಂಟೆ ಬಾರಿಸಿ ತರುತ್ತಿದ್ದೇವು. ಈಗ ಪಟಾಕಿ, ಡಿಜೆ ಆಗಿ ಬದಲಾಗಿದೆ. ಹಾಗಾಗಿ ಅತ್ಯಂತ ಸಂಭ್ರಮದ ಜೊತೆಗೆ ಆಚರಿಸಿ ಎಂದರು.
ಎಲ್ಲಾ ಗಣಪತಿ ಪೆಂಡಾಲ್ ಬಳಿ ಸಿಸಿ ಕ್ಯಾಮರಾ ಅಳವಡಿಕೆ ಬಗ್ಗೆ ಮಾತನಾಡಿ, ಯಾವುದೇ ಸಂದರ್ಭದಲ್ಲಿ ಅಹಿತಕರ ಘಟನೆ ನಡೆದಾಗ ಯಾವುದೇ ಕಿಡಿಗೇಡಿಗಳು ತೊಂದರೆ ಮಾಡಿದರು ಅಂತಹವರನ್ನು ಹಿಡಿಯಲು ಅವಕಾಶ ಸಿಗುತ್ತದೆ. ಈಗ ಅತ್ಯಂತ ಕಡಿಮೆ ಹಣದಲ್ಲಿ ಸಿಸಿ ಕ್ಯಾಮರಾ ಸಿಗುತ್ತದೆ, ಪಟಾಕಿ ಹೊಡೆಯಲು ಸಾವಿರಾರು ಹಣ ಖರ್ಚು ಮಾಡುವಾಗ ಸಿಸಿ ಕ್ಯಾಮರ ಅಳವಡಿಕೆ ಬಗ್ಗೆ ಯಾಕೆ ಹೀಗೆ? ಸಿಸಿ ಕ್ಯಾಮರವನ್ನು ಎಲ್ಲರೂ ಅಳವಡಿಸಬೇಕು ಎಂದರು.
ಇನ್ನು ಕಳೆದ ಬಾರಿ ಗಣಪತಿ ವಿಸರ್ಜನೆ ವೇಳೆ ಡಿಜೆ ಜೊತೆಗೆ ಬಳಸುವ ಲೇಸರ್ ಲೈಟ್ ನಿಂದ ಸಮಸ್ಯೆ ಆಗಿದೆ. ಹಾಗಾಗಿ ಈ ಬಾರಿ ಅದಕ್ಕೆ ಕಡಿವಾಣ ಹಾಕಬೇಕು ಎಂದು ಪತ್ರಕರ್ತರೇ ತಿಳಿಸಿದಾಗ ತಹಸೀಲ್ದಾರ್ ಮಾತನಾಡಿ ಈ ಬಗ್ಗೆ ನನಗೂ ತಿಳಿದಿದೆ. ಹಾಗಾಗಿ ಈ ಬಾರಿ ಅಧಿಕಾರಿಗಳ ಜೊತೆಗೆ ಚರ್ಚಿಸಿ ಅದಕ್ಕೆ ಕಡಿವಾಣ ಹಾಕುತ್ತೇವೆ ಎಂದು ತಿಳಿಸಿದರು.
ಬಹಳ ಮುಖ್ಯವಾಗಿ ಚರ್ಚೆ ಆದಂತಹ ಗಣಪತಿ ವಿಸರ್ಜನೆ ವೇಳೆ ಡಿಜೆ ಬಳಕೆ ಬಗ್ಗೆ ಅತಿಯಾದ ಸೌಂಡ್, ಲೈಟಿಂಗ್ ವ್ಯವಸ್ಥೆ ಮಾಡುವುದರಿಂದ ಚಿಕ್ಕ ಮಕ್ಕಳು, ಹಿರಿಯರು ಎಲ್ಲರಿಗೂ ತೊಂದರೆ ಆಗುತ್ತದೆ. ಕಾನೂನು ಜಾರಿ ಆಗಿದೆ. ಅದನ್ನು ನಾವು ಕಾಪಾಡಬೇಕು. ಡಿಜೆ ಹಾಕಬಾರದು ಎಂಬ ಆದೇಶ ಇದೆ. ಅದಕ್ಕೆ ನೀವೆಲ್ಲರೂ ಸಹಕಾರ ನೀಡಬೇಕು ಎಂದು ಅರವಿಂದ್ ಕಲಗುಜ್ಜಿ ತಿಳಿಸಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಮಾತನಾಡಿ ಧಾರ್ಮಿಕ ಹಿನ್ನಲೆಯಲ್ಲಿ ಬರುವ ಹಬ್ಬಗಳು ಅತ್ಯಂತ ಸಂತೋಷ ಆಗಿರುತ್ತದೆ. ಬಾಲ ಗಂಗಾಧರ್ ತಿಲಕ್ ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಗಣೇಶ ಹಬ್ಬ ಆಚರಿಸಲು ಆರಂಭಿಸಿದರು. ರಾಷ್ಟ್ರೀಯ ಐಕ್ಯತೆ ಬಲಪಡಿಸಲು ಆಚರಿಸುವ ಹಬ್ಬ ಗಣಪತಿ ಹಬ್ಬ. ಈದ್ ಮಿಲಾದ್ ಹಬ್ಬ ಸಹ ಮುಸಲ್ಮಾನ್ ಬಾಂಧವರು ಆಚರಿಸುವ ಹಬ್ಬ. ಸೌಹಾರ್ದಕ್ಕೆ ಹೆಸರುವಾಸಿಯಾಗಿರುವ ನಮ್ಮ ತೀರ್ಥಹಳ್ಳಿಯಲ್ಲಿ ಯಾವುದೇ ಸಂಘರ್ಷ ಆಗುವುದಿಲ್ಲ. ಆದರೂ ಅಧಿಕಾರಿಗಳ ಕೆಲಸ ಹಾಗಾಗಿ ಸೌಹಾರ್ದ ಸಭೆ ಮಾಡುತ್ತಿದ್ದಾರೆ. ಎಲ್ಲರೂ ಒಟ್ಟಿಗೆ ಸೇರಿ ಎರಡು ಹಬ್ಬಗಳನ್ನು ಆಚರಿಸೋಣ ಎಂದರು.
ಸಭೆಯಲ್ಲಿ ಎಲ್ಲಾ ಗಣಪತಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಮಸೀದಿ ಮುಖಂಡರುಗಳು ಉಪಸ್ಥಿತರಿದ್ದರು. ಈ ವೇಳೆ ಎಲ್ಲರಿಗೂ ಸಭೆ ನಡೆಸಿದ ಅಧಿಕಾರಿಗಳು ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗರಾಜ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶೈಲಾ, ಇನ್ಸ್ಪೆಕ್ಟರ್ ಇಮ್ರಾನ್ ಬೇಗ್, ಜೆ ಸಿ ಆಸ್ಪತ್ರೆ ಆರೋಗ್ಯ ಅಧಿಕಾರಿ, ಮೆಸ್ಕಾಂ ಅಧಿಕಾರಿ ಪ್ರಶಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು