ಇತ್ತೀಚಿನ ಸುದ್ದಿ
ಗೋಣಿಕೊಪ್ಪಲಿನಲ್ಲಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಪೊಲೀಸರ ಸಕಾಲಿಕ ಕ್ರಮದಿಂದ ತಪ್ಪಿದ ಭಾರಿ ಅನಾಹುತ
01/01/2026, 10:41
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಗೋಣಿಕೊಪ್ಪಲು- ಮೈಸೂರು ರಸ್ತೆಯ ಸೀಗೆತೋಡು ಎಂಬಲ್ಲಿ ಬೆಳಗಿನ ಜಾವ ಐದುವರೆ ಗಂಟೆ ಸಮಯಕ್ಕೆ ದೇವರಪುರದಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ, ವಿದ್ಯುತ್ ತಂತಿ ರಸ್ತೆ ಸಮೀಪ ಬಿದ್ದು, ಕರ್ತವ್ಯದಲ್ಲಿದ್ದ 112 ಪೊಲೀಸೊರಿಂದ ಬಾರಿ ಅನಾಹುತ ತಪ್ಪಿಸಿರುವ ಘಟನೆ ನಡೆದಿದೆ.
ಗೋಣಿಕೊಪ್ಪಲಿನ ಎರಡನೇ ವಿಭಾಗದ ನಿವಾಸಿ ಸಲೀಂ ಪಾಷಾ ರವರ ಪುತ್ರ ರೋಶನ್ ಹಾಗೂ ಇತರ ಮೂವರು ದೇವರಪುರದಿಂದ ಗೋಣಿಕೊಪ್ಪಲ್ಲಿಗೆ ತಮ್ಮ polo ಕಾರಿನಲ್ಲಿ(KA 05 MJ 3493) ಬರುತ್ತಿರುವ ಸಂದರ್ಭ ಕಾರು ನಿಯಂತ್ರಣ ತಪ್ಪಿ ಸೀಗೆತೋಡು ಸೇತುವೆ ಸಮೀಪದ ವಿದ್ಯುತ್ ಕಂಬಕ್ಕೆ ನೇರವಾಗಿ ಡಿಕ್ಕಿಯಾಗಿ ಕೆಳಭಾಗಕ್ಕೆ ಮಗುಚಿಕೊಂಡ ಘಟನೆ ನಡೆದಿದೆ. ವಿದ್ಯುತ್ ಕಂಬದ ತಂತಿಗಳೆಲ್ಲ ತುಂಡಾಗಿ ರಸ್ತೆ ಬದಿಯಲ್ಲಿ ಬಿದ್ದಿತ್ತು. ರಶೀದ್ ಎಂಬುವರು ದೂರವಾಣಿ ಮೂಲಕ 112ಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದ ಅನ್ವಯ ಸ್ಥಳಕ್ಕಾಗಮಿಸಿದ 112 ಪೊಲೀಸರು ಚೆಸ್ಕಂ ನವರಿಗೆ ದೂರವಾಣಿ ಮೂಲಕ ಸಂಪರ್ಕ ಕಲ್ಪಿಸಿ ಸಾಧ್ಯವಿಲ್ಲದಿದ್ದಾಗ ನೇರವಾಗಿ ಲೈನ್ ಮ್ಯಾನ್ ಹಾಗೂ ಜೆಇ ಅವರಿಗೆ ಸುದ್ದಿ ಮುಟ್ಟಿಸಿ ಕೂಡಲೇ ವಿದ್ಯುತ್ ನಿಲುಗಡೆಗೊಳಿಸಿ ರಸ್ತೆ ಬದಿಯಿಂದ ತಂತಿಗಳನ್ನು ತೆರವುಗೊಳಿಸಲಾಯಿತು.



112 ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಷಮತೆಯಿಂದ ವಿದ್ಯುತ್ ತಂತಿಗಳಿಂದ ಆಗಬಹುದಾಗಿದ್ದ ಬಾರಿ ಅನಾಹುತ ತಪ್ಪಿದಂತಾಗಿದೆ.
ಎಎಸ್ ಐ ಪ್ರಮೋದ್, 112 ಚಾಲಕ ಚಿಣ್ಣಪ್ಪ ಅಕ್ಕಿ, ಕಾನ್ಸ್ಟೇಬಲ್ ರಮೇಶ್, ಚೆಸ್ಕಾಂ ಸಿಬ್ಬಂದಿಗಳಾದ ಕೃಷ್ಣ ಮತ್ತಿತರು ಕಾರ್ಯಚರಣೆ ನಡೆಸಿ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಬಾರಿ ಮಂಜು ಆವರಿಸಿದ್ದರಿಂದ, ಚಾಲಕನ ನಿಯಂತ್ರಣ ಕಳೆದುಕೊಂಡಿದ್ದರಿಂದ ಈ ಅನಾಹುತ ಸಂಭವಿಸಿದ್ಫು, ಚಾಲಕ ಸೇರಿದಂತೆ ಇತರ ಮೂರುವರೆಗೆ ಯಾವುದೇ ರೀತಿಯ ಗಾಯಗಳು ಉಂಟಾಗಿಲ್ಲ. ಕಾರು ಮಾತ್ರ ಸಂಪೂರ್ಣ ಜಖಂಗೊಂಡಿದೆ.












