4:12 AM Monday25 - November 2024
ಬ್ರೇಕಿಂಗ್ ನ್ಯೂಸ್
ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ…

ಇತ್ತೀಚಿನ ಸುದ್ದಿ

ಭಾರತದ ಕಾರು ಮಾಲೀಕರ ನೆಚ್ಚಿನ ಸೂಪರ್ ಆ್ಯಪ್ ಪಾರ್ಕ್+: ಪ್ರಸ್ತುತ ದೇಶದಲ್ಲಿ 1.5 ಕೋಟಿ ಕಾರುಗಳ ನೋಂದಣಿ

18/03/2024, 20:05

ಪಾರ್ಕ್+ ಕಾರು ಮಾಲೀಕರ ಸಮೀಕ್ಷೆ 2024: ರಸ್ತೆ ಅವ್ಯವಸ್ಥೆ, ಪಾರ್ಕಿಂಗ್ ಸಮಸ್ಯೆ & ಫಾಸ್ಟ್ ಟ್ಯಾಗ್ ನಿಷ್ಕ್ರಿಯತೆ, ಟಾಪ್ ಸಮಸ್ಯೆಗಳು
*ಕಳೆದ 6 ತಿಂಗಳಲ್ಲಿ ಬೆಂಗಳೂರು ನಗರದ ಕಾರು ಮಾಲೀಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಸಮೀಕ್ಷೆ
ರಸ್ತೆ ಅವ್ಯವಸ್ಥೆ ಬಗ್ಗೆ ಅಸಹನೆ ತೋರಿರುವ ಶೇ.57 ಮಂದಿ ಕಾರು ಮಾಲೀಕರು

ಬೆಂಗಳೂರು(reporterkarnataka.com): ಭಾರತದ ಕಾರು ಮಾಲೀಕರ ನೆಚ್ಚಿನ ಸೂಪರ್ ಆ್ಯಪ್ ಪಾರ್ಕ್+. ಪ್ರಸ್ತುತ ದೇಶದಲ್ಲಿ 1.5 ಕೋಟಿ ಕಾರುಗಳನ್ನು ಈ ಆ್ಯಪ್ ನಲ್ಲಿ ನೋಂದಣಿ ಮಾಡಲಾಗಿದೆ. ಬೆಂಗಳೂರು ಕೇಂದ್ರಿತವಾಗಿ ನಡೆದ ಸಮೀಕ್ಷೆಯಲ್ಲಿನ ಕೆಲವು ಪ್ರಮುಖ ಅಂಕಿಅಂಶಗಳನ್ನು ಪಾರ್ಕ್+ ಬಹಿರಂಗಪಡಿಸಿದೆ. ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಕಾರು ಮಾಲೀಕರ ಪೈಕಿ 22,000 ಬೆಂಗಳೂರಿಗರು ಉತ್ತರ ನೀಡಿದ್ದು, ಬೆಂಗಳೂರು ನಗರದ ರಸ್ತೆಗಳಲ್ಲಿ ಕಾರು ಚಲಾಯಿಸುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಖಾಸಗಿ ಕಾರುಗಳನ್ನು ಹೊಂದಿರುವ ನಗರಗಳ ಸಾಲಿನಲ್ಲಿ ದೆಹಲಿಯನ್ನು ಹಿಂದಿಕ್ಕಿ ಬೆಂಗಳೂರು ಮೊದಲ ಸ್ಥಾನಕ್ಕೇರಿದೆ.
ಕಳೆದ 6 ತಿಂಗಳಲ್ಲಿ ಬೆಂಗಳೂರಿನ ಶೇ.57 ರಷ್ಟು ಕಾರು ಮಾಲೀಕರು ರಸ್ತೆಯ ಅಸ್ತವ್ಯಸ್ತತೆಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರೆ, ಶೇ.63 ರಷ್ಟು ಜನರು ತಮ್ಮ ಕಾರುಗಳನ್ನು ಕಾನೂನಾತ್ಮಕ ಮತ್ತು ಸುರಕ್ಷಿತವಾಗಿ ಪಾರ್ಕಿಂಗ್ ಮಾಡಲು ಒಂದು ಸೂಕ್ತ ಜಾಗವನ್ನು ಹುಡುಕಲು ಹರಸಾಹಸಪಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಶೇ.22 ರಷ್ಟು ಜನರು ತಮ್ಮ ಕಾರುಗಳಿಗೆ ಮಾಡಿಸಿಕೊಂಡಿದ್ದ ಫಾಸ್ಟ್ ಟ್ಯಾಗ್ ನಿಷ್ಕ್ರಿಯಗೊಳ್ಳುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂಬ ಅಂಶವನ್ನು ಸಮೀಕ್ಷೆ ಬಹಿರಂಗಪಡಿಸಿದೆ.
ರಸ್ತೆ ಬಗ್ಗೆ ಬೆಂಗಳೂರು ಕಾರು ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ. ಇದಕ್ಕೆ ಅವರು ಕೊಡುವ ಮುಖ್ಯ ಕಾರಣಗಳು:- ಆಗಾಗ್ಗೆ ಉಂಟಾಗುವ ಸಂಚಾರ ದಟ್ಟಣೆ, ಸದಾ ವಾಹನಗಳಿಂದ ತುಂಬಿರುವ ರಸ್ತೆಗಳು, ಅಸಮರ್ಪಕ ಮೂಲಸೌಕರ್ಯ, ಕಾರು ಮತ್ತು ಬಸ್ ಗಳ ನಡುವೆ ದ್ವಿಚಕ್ರ ವಾಹನಗಳು ಸಂಚರಿಸುವುದು, ಸಂಚಾರ ನಿಯಮಗಳ ಬಗ್ಗೆ ನಿರ್ಲಕ್ಷ್ಯವಹಿಸುವ ಜನರು(ಅಂದರೆ ಅತಿಯಾದ ವೇಗದಲ್ಲಿ ವಾಹನ ಚಲಾಯಿಸುವುದು, ಅಕ್ರಮವಾಗಿ ಪಾರ್ಕಿಂಗ್ ಮಾಡುವುದು, ತಪ್ಪು ಬದಿಯಿಂದ ವಾಹನ ಚಲಾಯಿಸುವುದು) ಹಾಗೂ ಆಕ್ರಮಣಕಾರಿ ಚಾಲನೆ ಮಾಡುವುದು, ಕರ್ಕಶವಾಗಿ ಹಾರ್ನ್ ಮಾಡುವುದು, ಟೈಲ್ ಗೇಟಿಂಗ್ ಹಾಗೂ ಮನಸೋಇಚ್ಛೆ ವಾಹನಗಳನ್ನು ತಿರುಗಿಸುವುದು. ಈ ಅಂಶಗಳಿಂದ ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುವಾಗ ಕಿರಿಕಿರಿ ಮತ್ತು ಆತಂಕ ಅನುಭವಿಸಬೇಕಾಗಿದೆ ಎಂದು ಕಾರು ಮಾಲೀಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ದೊಡ್ಡ ಸಮಸ್ಯೆಯಾಗಿ ಉಳಿದಿರುವ ಕಾರು ಪಾರ್ಕಿಂಗ್: ಬೆಂಗಳೂರು ನಗರದ ಕಾರು ಮಾಲೀಕರಿಗೆ ಪಾರ್ಕಿಂಗ್ ಒಂದು ದೊಡ್ಡ ಸಮಸ್ಯೆಯಾಗಿ ಮುಂದುವರಿದಿದೆ. ಏಕೆಂದರೆ, ಇಲ್ಲಿ ಕೆಲವೇ ಕೆಲವು ಜಾಗಗಳನ್ನು ಮಾತ್ರ ಪಾರ್ಕಿಂಗ್ ಸೀಮಿತಗೊಳಿಸಲಾಗಿದೆ. ಇದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ. ಇದಲ್ಲದೇ, ಈ ಪಾರ್ಕಿಂಗ್ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತರದೇ ಇರುವುದು ಸಮಸ್ಯೆ ಉಲ್ಬಣವಾಗಲು ಕಾರಣವಾಗಿದೆ. ವಾಣಿಜ್ಯ ಪ್ರದೇಶಗಳ ಸುತ್ತಮುತ್ತ ಮತ್ತು ಹೆಚ್ಚು ವ್ಯಾಪಾರಗಳು ನಡೆಯುವ ಪ್ರದೇಶಗಳಲ್ಲಿ ಪಾರ್ಕಿಂಗ್ ಗೆ ಮೀಸಲಾದ ಕಾನೂನಾತ್ಮಕ ಜಾಗದ ಕೊರತೆ ಇದೆ. ಇದರಿಂದಾಗಿ ಕಾರು ಮಾಲೀಕರಲ್ಲಿ ಗೊಂದಲ ಮತ್ತು ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಲು ಕಾರಣವಾಗಿದೆ. ಈ ಅಂಶಗಳು ಬೆಂಗಳೂರಿನ ದೈನಂದಿನ ಸಂಚಾರ ದಟ್ಟಣೆ ಮತ್ತು ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಲ್ಬಣವಾಗುವಂತೆ ಮಾಡುತ್ತಿವೆ. ಹಾಗೆಯೇ ಕಾರು ಮಾಲೀಕರು ಕಾರುಗಳ ಚಾಲನೆಯಲ್ಲಿ ತೀವ್ರರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗಿದೆ.
ಫಾಸ್ಟ್ ಟ್ಯಾಗ್ ಪರಿಸರ ವ್ಯವಸ್ಥೆಯಲ್ಲಿನ ಲೋಪಗಳ ಗೊಂದಲ: ನವೀಕರಿಸಲಾದ ಕೆವೈಸಿ ಗಡುವು ಮತ್ತು ಫಾಸ್ಟ್ ಟ್ಯಾಗ್ ನಿಷ್ಕ್ರಿಯಗೊಳಿಸುವಿಕೆಗಳ ಪ್ರಕರಣಗಳು ಕಾರುಗಳ ಮಾಲೀಕರನ್ನು ಗೊಂದಲಕ್ಕೀಡು ಮಾಡುತ್ತಿವೆ. ಈ ತೊಡಕಿನಿಂದ ಮಾಲೀಕರಿಗೆ ವಿನಾ ಕಾರಣ ಕಿರಿಕಿರಿ ಉಂಟಾಗುವುದರ ಜೊತೆಗೆ ಒತ್ತಡವನ್ನು ಅನುಭವಿಸುವಂತಾಗಿದೆ. ಇದರ ಪರಿಣಾಮ ಕಾರು ಮಾಲೀಕರು ನಿಯಮಿತವಾಗಿ ಟೋಲ್ ಗಳನ್ನು ದಾಟುವುದು ಕಷ್ಟಕರವಾಗುತ್ತಿದೆ.
ಸಮೀಕ್ಷೆಯಲ್ಲಿನ ಅಂಕಿಅಂಶಗಳ ಬಗ್ಗೆ ಮಾತನಾಡಿದ ಪಾರ್ಕ್+ ನ ಸಂಸ್ಥಾಪಕ & ಸಿಇಒ ಅಮಿತ್ ಲಕ್ಹೋಟಿಯಾ ಅವರು, “ಪಾರ್ಕ್+ ನಲ್ಲಿ ಕಾರುಗಳ ಮಾಲೀಕರಿಗೆ ಸಂತೋಷವನ್ನು ತರುವುದು ನಮ್ಮ ವ್ಯಾಪಾರದ ಉದ್ದೇಶವಾಗಿದೆ. ಈ ಬೆಂಗಳೂರು ಕೇಂದ್ರಿತ ಸಮೀಕ್ಷೆಯು ಕಾರು ಮಾಲೀಕರಿಗೆ ಆಗುತ್ತಿರುವ ನೋವು ಮತ್ತು ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ನಡೆಸಿದ್ದಾಗಿದೆ. ಅವರ ಈ ಸಮಸ್ಯೆ ಪ್ರಮಾಣವನ್ನು ಕಡಿಮೆ ಮಾಡುವ ಪ್ರಯತ್ನವಾಗಿ ಪರಿಹಾರ ಕಂಡುಕೊಳ್ಳಲು ಸಮೀಕ್ಷೆ ಒಂದು ಮಹತ್ವದ ಹೆಜ್ಜೆಯಾಗಿದೆ. ನಮ್ಮ ಈ ಪ್ರಯತ್ನದ ಭಾಗವಾಗಿ ಬೆಂಗಳೂರಿನ ಕಾರು ಮಾಲೀಕರಿಗೆ ಪ್ರಮುಖವಾಗಿ ಮೂರು ಸಮಸ್ಯೆಗಳಾದ ರೋಡ್ ರೇಜ್, ಪಾರ್ಕಿಂಗ್ ಸಮಸ್ಯೆಗಳು ಮತ್ತು ಫಾಸ್ಟ್ ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸುವಿಕೆಯನ್ನು ಪರಿಹರಿಸುವ ದಿಸೆಯಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ರಸ್ತೆ ಸಾರಿಗೆ ಸಮಸ್ಯೆಗಳ ಕಿರಿಕಿರಿ ಎದುರಿಸಲು ನಾವು ನಮ್ಮ ಅಪ್ಲಿಕೇಷನ್ ನಲ್ಲಿ ಅಫೆನ್ಸ್ ರಿಪೋರ್ಟರ್ (ಅಪರಾಧ ವರದಿಗಾರ) ಸೇವೆಗಳನ್ನು ಆರಂಭಿಸಿದ್ದೇವೆ. ಇದಲ್ಲದೇ, ನಾವು ಇಂದು ನಮ್ಮ ಅಪ್ಲಿಕೇಷನ್ ನಲ್ಲಿ 2.5 ಲಕ್ಷಕ್ಕೂ ಹೆಚ್ಚು ಕಾನೂನು ಮತ್ತು ಸುರಕ್ಷಿತ ಪಾರ್ಕಿಂಗ್ ಸ್ಥಳಗಳನ್ನು ಪೋಸ್ಟ್ ಮಾಡುತ್ತೇವೆ. ಇದರಲ್ಲಿ ಬಳಕೆದಾರರು ಪಾರ್ಕ್+ ಅಪ್ಲಿಕೇಷನ್ ನಲ್ಲಿ ನಿಯಮಬದ್ಧ ಪಾರ್ಕಿಂಗ್ ಸ್ಥಳಗಳನ್ನು ಪತ್ತೆ ಮಾಡಬಹುದಾಗಿದ್ದು, ಮುಂಗಡವಾಗಿ ಪಾರ್ಕಿಂಗ್ ಸ್ಥಳವನ್ನೂ ಕಾಯ್ದಿರಿಸಿ ಪಾವತಿಯನ್ನೂ ಮಾಡಬಹುದಾಗಿದೆ. ಇದಲ್ಲದೇ, ಫಾಸ್ಟ್ ಟ್ಯಾಗ್ ಖರೀದಿ/ನವೀಕರಣ/ರೀಚಾರ್ಜ್ ಇತ್ಯಾದಿಗಳ ಕುರಿತು ಬಳಕೆದಾರರಿಗೆ ಮಾಹಿತಿ ನೀಡಲು ಸಂಬಂಧಿತ ಫಾಸ್ಟ್ ಟ್ಯಾಗ್ ನೀಡುವ ಪಾಲುದಾರರೊಂದಿಗೆ ಸಹಭಾಗಿತ್ವ ಮಾಡಿಕೊಂಡಿದ್ದೇವೆ. ಕಾರು ಮಾಲೀಕರಿಗೆ ಅವರ ಕಾರು ಮಾಲೀಕರಿಗೆ ಅತ್ಯುತ್ತಮವಾದ ಅನುಭವವನ್ನು ಹೆಚ್ಚಿಸಲು ನಾವು ಬದ್ಧವಾಗಿದ್ದು, ಇದಕ್ಕೆ ಪೂರಕವಾಗಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ. ಈ ನಮ್ಮ ಪ್ರಯತ್ನದಲ್ಲಿ ನಮ್ಮನ್ನು ಬೆಂಬಲಿಸಲು ಅಗತ್ಯವಾದ ಪಾಲುದಾರರನ್ನೂ ಹೊಂದಲು ನಾವು ಸದಾ ಸಿದ್ಧರಾಗಿದ್ದೇವೆ’’ ಎಂದು ತಿಳಿಸಿದರು.
ಸಮೀಕ್ಷೆಯ ಅಂಕಿಅಂಶಗಳ ಬಗ್ಗೆ ಮಾತನಾಡಿದ ಪಾರ್ಕ್+ನ ಸಹ-ಸಂಸ್ಥಾಪಕ & ಸಿಟಿಒ ಹಿತೇಶ್ ಗುಪ್ತಾ ಅವರು, “ಪಾರ್ಕ್+ನಲ್ಲಿ ನಾವು ಕಾರು ಮಾಲೀಕರು ಪ್ರತಿದಿನ ಎದುರಿಸುವ ಸವಾಲುಗಳ ಮೇಲೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಕಾರು ಮಾಲೀಕತ್ವದ ಅನುಭವವನ್ನು ಸರಳೀಕರಣಗೊಳಿಸುವುದು ಮತ್ತು ಪಾರ್ಕಿಂಗ್ ಸ್ಥಳವನ್ನು ಮುಂಗಡವಾಗಿ ಕಾಯ್ದಿರುಸುವುದು, ನಿಮ್ಮ ಸಮೀಪವಿರುವ ಕಾರು ಡೀಲರ್ ಅನ್ನು ಅನ್ವೇಷಣೆ ಮಾಡುವುದು, ಫಾಸ್ಟ್ ಟ್ಯಾಗ್ ಸಂಬಂಧಿತ ಸೇವೆಗಳು, ಕಾರ್ ವ್ಯಾಲೆಟ್ ಹಾಗೂ ಇನ್ನೂ ಹೆಚ್ಚಿನ ಸೇವೆಗಳನ್ನು ಒದಗಿಸುವುದು ನಮ್ಮ ಮೊದಲ ಗುರಿಯಾಗಿದೆ. ನಾವು ಪಾರ್ಕ್+ ಅಪ್ಲಿಕೇಶನ್ ನಲ್ಲಿ `ಅಫೆನ್ಸ್ ರಿಪೋರ್ಟರ್ ಮೂಲಕ ಸಂಚಾರ ಅಪರಾಧವನ್ನು ವರದಿ ಮಾಡಲು ಬಳಕೆದಾರರಿಗೆ ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗ ಮಾಡಿಕೊಂಡ ಬಳಕೆದಾರರು ನಮ್ಮ ಅಪ್ಲಿಕೇಶನ್ ನಲ್ಲಿ 5000+ ಸಂಚಾರ ಅಪರಾಧಗಳನ್ನು ವರದಿ ಮಾಡಿದ್ದಾರೆ. ಇದಲ್ಲದೇ, ಬಳಕೆದಾರರ ಜಾಗರೂಕತೆಯನ್ನು ಮೂಲಕ ರಸ್ತೆ ಸುರಕ್ಷತೆಯನ್ನು ಕ್ರಾಂತಿಕಾರಗೊಳಿಸುವ ಗುರಿಯನ್ನು ಹೊಂದಿದ್ದೇವೆ. ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಸರಿಯಾದ ಮಾರ್ಗದ ಕುರಿತು ಅರ್ಥಪೂರ್ಣವಾದ ಚರ್ಚೆಗಳನ್ನು ಹಂಚಿಕೊಳ್ಳಲು ಮತ್ತು ಅದರಲ್ಲಿ ತೊಡಗಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಈ ಉಪಕ್ರಮಗಳ ಮೂಲಕ ನಾವು ರಸ್ತೆ ಸುರಕ್ಷತೆ ಮತ್ತು ಚಾಲಕರಲ್ಲಿ ಹೊಣೆಗಾರಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು, ಎಲ್ಲರಿಗೂ ಹೆಚ್ಚಿನ ಸಾಮರಸ್ಯದ ಚಾಲನಾ ವಾತಾವರಣವನ್ನು ಸೃಷ್ಟಿಸುತ್ತೇವೆ’’ ಎಂದು ತಿಳಿಸಿದರು.
ಐಟಿಎಸ್ ಇಂಡಿಯಾ ಫೋರಂ ಅಧ್ಯಕ್ಷ ಮತ್ತು ಐಆರ್ ಎಫ್ ರೋಡ್ ಸೇಫ್ಟಿ ಅಂಬಾಸಿಡರ್, ಐಟಿಡಿಎಯ ಐಟಿ ಅಡ್ವೈಸರ್ ಅಖಿಲೇಶ್ ಶ್ರೀವಾಸ್ತವ ಅವರು ಮಾತನಾಡಿ, “ಪಾರ್ಕ್+ ಕಾರು ಮಾಲೀಕತ್ವದ ಸಮೀಕ್ಷೆ 2024 ರಲ್ಲಿ ಸಂಗ್ರಹವಾದ ನಿರ್ಣಾಯಕ ಅಂಶಗಳು ಮತ್ತು ಕಾಳಜಿಗಳ ಮೇಲೆ ಬೆಳಕು ಚೆಲ್ಲಲಾಗಿದೆ. ರಸ್ತೆ ವ್ಯವಸ್ಥೆ ಬಗ್ಗೆ ಇರುವ ಅಸಹನೆಯಂತಹ ಪ್ರಸಂಗಗಳನ್ನು ಕಡಿಮೆ ಮಾಡಲು ಹಾಗೂ ಒಟ್ಟಾರೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ರಸ್ತೆ ಸುರಕ್ಷತಾ ಅಭ್ಯಾಸಗಳ ಕುರಿತು ಹೆಚ್ಚಿನ ಜಾಗೃತಿ ಮತ್ತು ಶಿಕ್ಷಣದ ಅಗತ್ಯವಿದೆ ಎಂಬುದನ್ನು ಸಮೀಕ್ಷೆ ಬಹಿರಂಗಪಡಿಸಿದೆ’’ ಎಂದು ತಿಳಿಸಿದೆ

ಇತ್ತೀಚಿನ ಸುದ್ದಿ

ಜಾಹೀರಾತು