12:26 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕೆನರಾ ಯೂನಿಯನ್ ಬ್ಯಾಡ್ಮಿಂಟನ್ ಲೀಗ್ 2ನೇ ಆವೃತ್ತಿ: ಇಂಡೋಗ್ಯಾಸ್ ಚಾಲೆಂಜರ್ಸ್ ಗೆ ಜಯ

21/11/2021, 20:15

ಬೆಂಗಳೂರು(reporterkarnataka.com): ಪ್ರಕಾಶ್ ಕೋರ್ಟ್‍ನಲ್ಲಿ ಕೆನರಾ ಯೂನಿಯನ್ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಕೆನರಾ ಯೂನಿಯನ್ ಬ್ಯಾಡ್ಮಿಂಟನ್ ಲೀಗ್ ಎರಡನೇ ಆವೃತ್ತಿಯನ್ನು ಇಂಡೋಗ್ಯಾಸ್ ಚಾಲೆಂಜರ್ಸ್ ಗೆದ್ದುಕೊಂಡಿದೆ.
ಫೈನಲ್‍ನಲ್ಲಿ ಇಂಡೋಗ್ಯಾಸ್ ಚಾಲೆಂಜರ್ಸ್ ಆರೋಹ್ ಸ್ಮಾಷರ್ಸ್ ಅನ್ನು 3-1 ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಮೊದಲ ಗೇಮ್‍ನಲ್ಲಿ ಮನೋಜ್ ರೈ ಮತ್ತು ಸುಧೀರ್ ಅವರ ಉತ್ತಮ ಪ್ರದರ್ಶನ ಇಂಡೋಗ್ಯಾಸ್ ಚಾಲೆಂಜರ್ಸ್ ಗೆಲುವಿನ ಪ್ರಮುಖ ಅಂಶವಾಗಿತ್ತು. ಅವರು ಎಂ.ಎಂ.ಲಾಲು ಮತ್ತು ನಾಗರಾಜ್ ಅವರನ್ನು 21-11, 21-14 ನೇರ ಸೆಟ್‍ಗಳಿಂದ ಸೋಲಿಸಿದರು.
ಎರಡನೇ ಗೇಮ್‍ನಲ್ಲಿ ಇಂಡೋಗ್ಯಾಸ್ ಚಾಲೆಂಜರ್ಸ್‍ನ ರವಿ ಅಯ್ಯರ್ ಮತ್ತು ದಿನು ಕೆ, ಆರೋಹ್ ಸ್ಮಾಷರ್ಸ್‍ನ ನಿರಂಜನ್ ಮತ್ತು ಭಾಸ್ಕರ್ ಅವರನ್ನು 21-15, 21-12 ನೇರ ಸೆಟ್‍ಗಳಿಂದ ಸೋಲಿಸಿದರು.
ಆದಾಗ್ಯೂ ಆರೋಹ್ ಸ್ಮಾಷರ್ಸ್ ತಂಡದ ದಿನೇಶ್ ಮತ್ತು ಸಾತ್ವಿಕ್ ಅವರು ಇಂಡೋಗ್ಯಾಸ್ ಚಾಲೆಂಜರ್ಸ್‍ನ ಸಚ್ಚಿದಾನಂದ್ ಮತ್ತು ಕೃಷ್ಣಮೂರ್ತಿ ಅವರನ್ನು 21-12, 21-23, 21-12 ರಿಂದ ಸೋಲಿಸಿದರು.
ನಾಲ್ಕನೇ ಗೇಮ್‍ನಲ್ಲಿ ಇಂಡೋಗಾಸ್ ಚಾಲೆಂಜರ್ಸ್‍ನ ಕಿಶನ್ ಮತ್ತು ರವಿಚಂದ್ರ 21-12, 21-17 ನೇರ ಸೆಟ್‍ಗಳಿಂದ ಆರೋಹ್ ಸ್ಮಾಷರ್ಸ್‍ನ ಉದಯ್ ರೈ ಮತ್ತು ಸುಧಾ ರಾಣಿ ಅವರನ್ನು ಸೋಲಿಸಿದರು.
ಅಂತಿಮ ಫಲಿತಾಂಶ – ಇಂಡೋಗಾಸ್ ಚೆಲ್ಲಂಜರ್ಸ್ 5 ಗೇಮ್‍ಗಳಲ್ಲಿ 3-1 ರಲ್ಲಿ ಆರೋಹ್ ಸ್ಮಾಷರ್ಸ್ ಅನ್ನು ಸೋಲಿಸಿತು.
ಸಿಯುಬಿಎಲ್ 6 ತಂಡಗಳ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಭಾಗವಹಿಸಿದ್ದ ತಂಡಗಳೆಂದರೆ ಇಂಡೋಗಾಸ್ ಚಾಲೆಂಜರ್ಸ್, ಯೂನಿಯನ್ ಏಸರ್ಸ್, ಲೆ ಗ್ರೇಪ್ಸ್ ಚಾಂಪಿಯನ್ಸ್, ಜೆಪಿ ಸೂಪರ್ ಕಿಂಗ್ಸ್, ಕಾರ್ಪೆ ಡೈಮ್ ಮತ್ತು ಆರೋಹ್ ಸ್ಮಾಷರ್ಸ್. ಪಂದ್ಯಾವಳಿಯಲ್ಲಿ ಒಟ್ಟು 70 ಆಟಗಾರರು ಭಾಗವಹಿಸಿದ್ದರು, 

ಇತ್ತೀಚಿನ ಸುದ್ದಿ

ಜಾಹೀರಾತು