4:56 PM Monday6 - October 2025
ಬ್ರೇಕಿಂಗ್ ನ್ಯೂಸ್
ಹರ್ಷಿಕಾ ಪೂಣಚ್ಚ – ಭುವನ್ ದಂಪತಿ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬ: ಹರಿದು… Madikeri | ವಿರಾಜಪೇಟೆ: ಹೆಂಡತಿ ಜತೆ ಜಗಳವಾಡಿ ಮನೆಬಿಟ್ಟು ತೆರಳಿದ್ದ ವ್ಯಕ್ತಿ ಶವವಾಗಿ… ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ

ಇತ್ತೀಚಿನ ಸುದ್ದಿ

ಕೆನರಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ:ಅಮ್ಮೆಂಬಳ ಸುಬ್ಬರಾವ್ ಪ್ರತಿಮೆಗೆ ಪುಷ್ಪ ನಮನ

20/11/2021, 16:07

ಚಿತ್ರ; ಮಂಜು ನೀರೇಶ್ವಾಲ್ಯ

ಮಂಗಳೂರು(reporterkarnataka.com): ನಗರದ ಹೃದಯ ಭಾಗವಾದ ಕೆನರಾ ಶಾಲಾ ಆವರಣದಲ್ಲಿ ಕೆನರಾ ಸಮೂಹ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು. 

ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕ್ ಸರ್ಕ ಲ್ ಆಫೀ ಸ್ ನ  ಜನರಲ್ ಮ್ಯಾನೇಜರ್ ಯೋಗೀ ಶ ಆಚಾರ್ಯ  ಅವರು ಧ್ವಜಾರೋಹಣ ನೆರವೇರಿಸಿದರು. ಅಮ್ಮೆಂಬಳ ಸುಬ್ಬರಾವ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಅವರು ತಮ್ಮ ಅತಿಥಿಗಳು ಸಭೆಯನ್ನು ದ್ದೇಶಿಸಿ ಮಾತನಾಡಿ ಕೆನರಾ ಸಂಸ್ಥೆಯ ಹೆಮ್ಮೆ ಯ ಸಂಸ್ಥಾಪಕರಾದ

ಅಮ್ಮೆಂಬಳ ಸುಬ್ಬರಾವ್ ಪೈ ಅವರ ಸಾಮಾಜಮುಖಿ ಸೇವೆ ಹಾಗೂ ಸಾಧನೆಯನ್ನು ವಿದ್ಯಾ ರ್ಥಿಗಳು ಎಂದೆಂದಿಗೂ ನೆನಪಿನಲ್ಲಿರಿಸುವುದು ಅತಿ ಮುಖ್ಯ ಎಂದರು.

ಈ ಸಂದರ್ಭ ಕೆನರಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ. ಅಣ್ಣಪ್ಪ ಪೈ, ಕಾರ್ಯದರ್ಶಿ ಗಳಾದ ಎಂ. ರಂಗನಾಥ ಭಟ್, ಅಮ್ಮೆಂಬಳ ಸುಬ್ಬ ರಾವ್ ಪೈ ಮೆಮೋರಿಯಲ್ ಫಂಡ್  ಅಧ್ಯಕ್ಷ ಆರ್. ಎನ್. ಸುಜೀರ್, ಕಾರ್ಯ ದರ್ಶಿ ಶ್ರೀನಿವಾಸ ಕಾಮತ್, ಕೆನರಾ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು, ಮುಖ್ಯ ಅಧ್ಯಾಪಕರು, ಶಿಕ್ಷಕ -ಶಿಕ್ಷಕೇತರ ವೃಂದದವರು, ವಿದ್ಯಾ ರ್ಥಿ ಗಳು ಹಾಗೂ ಅವರ ಪಾಲಕರು ಉಪಸ್ಥಿತರಿದ್ದರು.

ಈ ಸಂದರ್ಭ 2019 – 20 ಹಾಗೂ 2020 – 21ನೇ ಸಾಲಿನ ಶೈ ಕ್ಷಣಿಕ ಹಾಗೂ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾ ರ್ಥಿಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕೆನರಾ ಹೈಸ್ಕೂಲ್ ಸಿಬಿಎಸ್ಇ  ಪ್ರಾಂಶುಪಾಲರಾದ ಅಕ್ಷತಾ ಶೆಣೈ ನೆರೆದಿರುವ ಅತಿಥಿ ಅಭ್ಯಾಗತರನ್ನು ಸ್ವಾ ಗತಿಸಿದರು. ಕೆನರಾ ಹೈ ಸ್ಕೂ ಲ್ ಇದರ ಮುಖ್ಯ ಶಿಕ್ಷಕರಾದ ಅರುಣಾ ಕುಮಾರಿ ಅವರು ಅಮ್ಮೆಂಬಳ ಸುಬ್ಬರಾವ್ ಪೈ ಇವರ ಬಗ್ಗೆ ಮಾತನಾಡಿದರು. ಕೆನರಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ

ಪ್ರಾಧ್ಯಾಪಕಿ ಕವಿತಾ ಮೌರ್ಯ ವಂದಿಸಿದರು. ಶಾಲಾ ಶಿಕ್ಷಕಿಯರಾದ ಪದ್ಮಿನಿ ರಾವ್ ,ಸುಶ್ಮಿತಾ ಕಾಮತ್,  ಮಮತಾ ಹಾಗೂ ಪಾರ್ವತಿ ಕಾರ್ಯಕ್ರಮಗಳನ್ನು ನಿರ್ವ ಹಿಸಿದರು.

 

ಇತ್ತೀಚಿನ ಸುದ್ದಿ

ಜಾಹೀರಾತು