3:53 AM Friday14 - November 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ… ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಿಂದ ವಜಾ: ರಾಜ್ಯಕ್ಕೆ ಮಹಾಜಯ Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್ ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ…

ಇತ್ತೀಚಿನ ಸುದ್ದಿ

ಕ್ಯಾಂಪ್ಕೋ ಸುವರ್ಣ ಮಹೋತ್ಸವಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ: ಸಿಎಂ ಬೊಮ್ಮಾಯಿ ಉಪಸ್ಥಿತಿ

11/02/2023, 18:34

ಚಿತ್ರ :ಅನುಷ್ ಪಂಡಿತ್ ಮಂಗಳೂರು
ಪುತ್ತೂರು(reporterkarnataka.com):
ಕೇಂದ್ರ ಅಡಿಕೆ ಮತ್ತು ಕೋಕೊ ಮಾರಾಟ ಹಾಗೂ ಸಂಸ್ಕರಣಾ ಸಹಕಾರಿ ನಿಯಮಿತ (ಕ್ಯಾಂಪ್ಕೊ) ದ ಸುವರ್ಣ ಮಹೋತ್ಸವಕ್ಕೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಶನಿವಾರ ಪುತ್ತೂರಿನ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಚಾಲನೆ ನೀಡಿದರು.


ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಎಸ್. ಅಂಗಾರ, ಸಹಕಾರ ಸಚಿವರಾದ ಸೋಮಶೇಖರ್, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸಂಸದರಾದ ನಳಿನ್ ಕುಮಾರ್ ಕಟೀಲ್, ಸ್ಥಳೀಯ ಶಾಸಕರಾದ ಸಂಜೀವ ಮಠಂದೂರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು