ಇತ್ತೀಚಿನ ಸುದ್ದಿ
ಬೈಲೂರು ಥೀಮ್ ಪಾರ್ಕ್ ನಿಂದ ಸುಮಾರು 3 ಕೋಟಿ ವೆಚ್ಚದ ಪರಶುರಾಮ ಮೂರ್ತಿ ಮಾಯ!: ಈಗ ಇರುವುದು ಬರೇ ಪ್ಲಾಸ್ಟಿಕ್ ಹೊದಿಕೆ ಮಾತ್ರ!
14/10/2023, 20:59
ಕಾರ್ಕಳ(reporterkarnataka.com): ರಾಜಕೀಯ ಮೇಲಾಟ ಹಾಗೂ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿರುವ ಕಾರ್ಕಳದ ಬೈಲೂರಿನಲ್ಲಿರುವ ಥೀಮ್ ಪಾರ್ಕ್ ನಿಂದ ಪರಶುರಾಮ ಮೂರ್ತಿ ಮಾಯವಾಗಿದೆ. ಪ್ಲಾಸ್ಟಿಕ್ ನಿಂದ ಮುಚ್ಚಿಟ್ಟಿರುವ ಮೂರ್ತಿಯನ್ನು ರಾತೋರಾತ್ರಿ ಸ್ಥಳಾಂತರಿಸಲಾಗಿದೆ. ಇದೀಗ ಥೀಮ್ ಪಾರ್ಕ್ ನಲ್ಲಿ ಇರುವುದು ಮೂರ್ತಿ ಕಾಣದಂತೆ ಹೊದಿಸಿರುವ ಪ್ಲಾಸ್ಟಿಕ್ ಮಾತ್ರ.
ತುಳುವರ ಆರಾಧ್ಯಮೂರ್ತಿ ಪರಶುರಾಮ ದೇವರ ಮೂರ್ತಿಯನ್ನು
ಶುಕ್ರವಾರ ತಡರಾತ್ರಿಯೇ ತೆರವುಗೊಳಿಸಿ ಸಾಗಿಸಲಾಗಿದೆ. ಇದರೊಂದಿಗೆ ಮತ್ತೊಂದು ಸುತ್ತಿನ ರಾಜಕೀಯ ಗುದ್ದಾಟಕ್ಕೆ ಕಾರ್ಕಳ ಸಿದ್ಧವಾಗಿದೆ.
ಸುಮಾರು 33 ಅಡಿ ಎತ್ತರ, 50 ಟನ್ ಭಾರದ ಈ ಪರಶುರಾಮ ಮೂರ್ತಿಯನ್ನು ಹೆಚ್ಚು ಕಡಿಮೆ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ವಿಧಾನಸಭೆ ಚುನಾವಣೆಗೆ ಮುನ್ನ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದನ್ನು ಉದ್ಘಾಟಿಸಿದ್ದರು.