ಇತ್ತೀಚಿನ ಸುದ್ದಿ
ಬೈಂದೂರು: ಜಾತಿ ನಿಂದನೆ ಪ್ರಕರಣ; ಕಂಬದಕೋಣೆ ಅರ್ಚಕರ ವಿರುದ್ಧ ಪ್ರಕರಣ ದಾಖಲು
30/11/2022, 12:58

ಬೈಂದೂರು(reporterkarnataka.com): ಜಾತಿ ನಿಂದನೆ ಮಾಡಿದ ಹಾಗೂ ಪೂಜೆಯ ವಿಚಾರದಲ್ಲಿ ಅರ್ಚಕರ ವಿರುದ್ಧ ಪ್ರಕರಣವೊಂದು ಕಂಬದ ಕೋಣೆಯ ಕೊಕ್ಕೇಶ್ವರ ದೇವಾಲಯದಲ್ಲಿ ನಡೆದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.28ರಂದುಕಂಬದ ಕೋಣೆಯ ಕೊಕ್ಕೆಶ್ವರ ದೇವಾಲಯಕ್ಕೆ ಹೊದ ಸಂದರ್ಭದಲ್ಲಿ ಹಳಗೇರಿ ಶಿವರಾಮ ಎಂಬುವವರು ನ. 28 ರ ಬೆಳಗ್ಗೆ ದೇವರಿಗೆ ಪೂಜೆ ಮಾಡಿಸಲು ಹಣ್ಣುಕಾಯಿ, ಹೂವು ಹಾಗೂ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಮಗನೊಂದಿಗೆ ಕಂಬದ ಕೋಣೆ ಗ್ರಾಮದ ಕೊಕ್ಕೇಶ್ವರ ದೇವಸ್ಥಾನಕ್ಕೆ ಹೋಗಿದ್ದರು.
ಈ ವೇಳೆ ದೇವಸ್ಥಾನದ ಅರ್ಚಕರಾದ ಶೇಷಗಿರಿ ಕಾರಂತರು ಇದ್ದು, ಶಿವರಾಮ ಹಾಗೂ ಅವರ ಮಗನನ್ನು ತಡೆದು ನಿಲ್ಲಿಸಿದ್ದು, ಶಿವರಾಮ ಶೇಷಗಿರಿ ಕಾರಂತ ರವರಲ್ಲಿ ದೇವರಿಗೆ ಪೂಜೆ ಮಾಡಿಕೊಡುವಂತೆ ವಿನಂತಿಸಿಕೊಂಡಿದ್ದು ಅದಕ್ಕೆ ಶೇಷಗಿರಿ ಕಾರಂತರು ಒಪ್ಪದೇ ಇದ್ದು, ಶೇಷಗಿರಿ ಕಾರಂತರು ಶಿವರಾಮ ಹಾಗೂ ಅವರ ಮಗನಿಗೆ ಜಾತಿನಿಂದನೆ ಮಾಡಿ ದೇವಸ್ಥಾನಕ್ಕೆ ಪ್ರವೇಶ ಹಾಗೂ ಪೂಜೆಗೆ ನಿರಾಕರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿಲಾಗಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ತನಿಖೆ ನಡೆಸುತಿದ್ದಾರೆ.