ಇತ್ತೀಚಿನ ಸುದ್ದಿ
ಭಾರೀ ಗಾಳಿ ಮಳೆಗೆ ರಸ್ತೆಗೆ ಬಿದ್ದಿದ್ದ ಮರ ತಪ್ಪಿಸಲು ಹೋಗಿ ಚರಂಡಿಗಿಳಿದ ಬಸ್: ಅದೃಷ್ಟವಶಾತ್ 40 ಮಂದಿ ಪ್ರವಾಸಿಗರು ಅಪಾಯದಿಂದ ಪಾರು
29/04/2025, 21:32

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಇಂದು ಸಂಜೆ ಭಾರೀ ಗಾಳಿ ಮಳೆಯಾಗಿದ್ದು, ಬಾಳೆಹೊನ್ನೂರು-ಕಳಸ ಮಾರ್ಗ ಮಧ್ಯದಲ್ಲಿರುವ ನೂರಪಾಲ್ ಎಂಬಲ್ಲಿ ಬಸ್ಸೊಂದು ರಸ್ತೆಯಲ್ಲಿ ಬಿದ್ದ ಮರ ತಪ್ಪಿಸಲು ಹೋಗಿ ಚರಂಡಿಗಿಳಿದ ಘಟನೆ ನಡೆದಿದೆ.
ಭಾರೀ ಗಾಳಿ-ಮಳೆಗೆ ಮರವೊಂದು ರಸ್ತೆ ಮೇಲೆ ಮುರಿದು ಬಿದ್ದಿತ್ತು. ಬಸ್ ಚಾಲಕ ಮರ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದಿದೆ. ಚರಂಡಿಗೆ ಇಳಿದ ಬಸ್ ಚಾಲಕನ ಚಾಕಚಕ್ಯತೆಯಿಂದ ಪಲ್ಟಿಯಾಗೋದು ತಪ್ಪಿದೆ. ಅದೃಷ್ಟವಶಾತ್ 40 ಮಂದಿ ಪ್ರಯಾಣಿಕರಿದ್ದ ಪ್ರವಾಸಿ ಬಸ್ ಜಸ್ಟ್ ಮಿಸ್ ಆಗಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಒಂದೆಡೆ ಮರ, ಮತ್ತೊಂದೆಡೆ ಬಸ್ ನಿಂತಿರುವ ಪರಿಣಾಮ
ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು. ಸುಮಾರು 2 ಕಿ.ಮೀ. ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಬಂದಿದ್ದ ಪ್ರವಾಸಿ ಬಸ್ ಇದಾಗಿದೆ.