ಇತ್ತೀಚಿನ ಸುದ್ದಿ
ಬ್ರಿಟನ್ ರಾಣಿ 2ನೇ ಎಲಿಜಬೆತ್ ಅಂತ್ಯಕ್ರಿಯೆ: ಭಾರತದ ಪರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಗೌರವ ನಮನ ಸಲ್ಲಿಕೆ
19/09/2022, 19:22

ಹೊಸದಿಲ್ಲಿ(reporterkarnataka.com): ಬ್ರಿಟನ್ ರಾಣಿ 2ನೇ ಎಲಿಜಬೆತ್ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿರುವ ಲಂಡನ್ ನ ವೆಸ್ಟ್ ಮಿನ್ಸ್ಟರ್ ಹಾಲ್ ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಹೈಕಮಿಷನರ್ ಸುಜಿತ್ ಘೋಷ್ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು.
ರಾಣಿಯವರ ಸ್ಮರಣೆಗಾಗಿ ಲಂಡನ್ ನ ಲ್ಯಾಂಕಾಸ್ಟರ್ ಹೌಸ್ ನಲ್ಲಿ ಇರಿಸಲಾಗಿರುವ ಸಂತಾಪ ಸೂಚಕ ಪುಸ್ತಕಕ್ಕೆ ಮುರ್ಮು ಈ ಸಂದರ್ಭ ಸಹಿ ಹಾಕಿದರು.
ಮೂರು ದಿನದ ಭೇಟಿಗಾಗಿ ಲಂಡನ್’ಗೆ ತೆರಳಿರುವ ಮುರ್ಮು ಭಾನುವಾರ ತಡರಾತ್ರಿ ಬ್ರಿಟನ್ ನೂತನ ರಾಜ 3ನೇ ಚಾರ್ಲ್ಸ್ ಅವರನ್ನು ಬಂಕಿಂಗ್‌ಹ್ಯಾಮ್ ಅರಮನೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಇಂದು ಬ್ರಿಟನ್ ಕಾಲಮಾನ ಬೆಳಿಗ್ಗೆ 11ಕ್ಕೆ ರಾಣಿ ಎಲಿಜಬೆತ್ 2 ಅವರ ಅಂತ್ಯಕ್ರಿಯೆ ವೆಸ್ಟ್ ಮಿನ್ಸ್ಟರ್ ಅಬೆಯಲ್ಲಿ ನಡೆಯಲಿದ್ದು. ಭಾರತದ ಪರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಗೌರವ ನಮನ ಸಲ್ಲಿಸಿದ್ದಾರೆ.