ಇತ್ತೀಚಿನ ಸುದ್ದಿ
ಬೃಹತ್ ಚರಂಡಿಗೆ ಬಿದ್ದ ನಾಯಿ ಮರಿ: ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ರಕ್ಷಣೆ
05/01/2025, 09:53
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ತಾಯಿ ಜೊತೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬೃಹತ್ ಚರಂಡಿಗೆ ಬಿದ್ದ ನಾಯಿ ಮರಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಚರಂಡಿಗೆ ಬಿದ್ದ ಮರಿಯನ್ನ ಮೇಲೆ ಎಳೆಯಲಾಗದೇ ತಾಯಿ ನಾಯಿ ಕೂಗುತ್ತಿತ್ತು. ಚರಂಡಿ ನೀರಿನ ಜೊತೆ ನಾಯಿ ಮರಿ
ತೇಲಿ ಹೋಗುತ್ತಿತ್ತು.
ನಾಯಿ ಚರಂಡಿ ನೋಡಿ ಬೊಗಳುತ್ತಿದ್ದದನ್ನು ಸ್ಥಳಿಯರು ಗಮನಿಸಿದರು. ಚರಂಡಿಯಲ್ಲಿ ಡ್ರೈನೇಜ್ ಪೈಪ್ ಹಿಡಿದು ನಾಯಿ ಮರಿ ನಿಂತಿತ್ತು. ತಕ್ಷಣ ಅಗ್ನಿ ಶಾಮಕ ಸಿಬ್ಬಂದಿಗಳಿಗೆ ಸ್ಥಳಿಯರು ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ನಾಯಿ ಮರಿಯನ್ನು ರಕ್ಷಿಸಿದ್ದಾರೆ. ಡ್ರೈನೇಜ್ ಒಳಗಡೆ ಹೋಗಿ ಸ್ಲಾಬ್ ತೆಗೆದು ನಾಯಿಯನ್ನ ಅಗ್ನಿಶಾಮಕ ಸಿಬ್ಬಂದಿ ಹೊರಗೆ ತಂದಿದ್ದಾರೆ.
ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಬಳಿ ಈ ಘಟನೆ ನಡೆದಿದೆ. ಚರಂಡಿಯಿಂದ ಮೇಲೆ ಎತ್ತುತ್ತಿದ್ದಂತೆ ಅಮ್ಮನ ಜೊತೆ ನಾಯಿ ಮರಿ ಓಡಿ ಹೋಯಿತು.