7:53 AM Tuesday30 - December 2025
ಬ್ರೇಕಿಂಗ್ ನ್ಯೂಸ್
ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:… ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್, ಹೋಂ ಸ್ಟೇ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಡಗಿನಲ್ಲಿ ಅರಣ್ಯ ರಕ್ಷಕರಿಂದಲೇ ಮರಗಳ ಲೂಟಿ: ಲೋಡರ್ ಬಂಧನ; ನಾಲ್ವರು ಪರಾರಿ ಖಾಸಗಿ ವಾಹನಕ್ಕೆ ನಾಮಫಲಕ | ಪೊಲೀಸಪ್ಪನಿಂದೇ ಕಾನೂನು ಉಲ್ಲಂಘನೆ: ದಂಡ ಯಾವತ್ತೇ ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ: ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ

ಇತ್ತೀಚಿನ ಸುದ್ದಿ

ಬ್ರಹ್ಮಶ್ರೀ ನಾರಾಯಣಗುರುಗಳ ಪಠ್ಯ ಮರು ಸೇರ್ಪಡೆಗೊಳಿಸದಿದ್ದರೆ ತೀವ್ರ ಹೋರಾಟ: ಪದ್ಮರಾಜ್ ಆರ್. ಎಚ್ಚರಿಕೆ

28/06/2022, 23:43

ಮಂಗಳೂರು(reporterkarnataka.com): ಬ್ರಹ್ಮಶ್ರಿ ನಾರಾಯಣಗುರುಗಳ ಪಠ್ಯವನ್ನು10ನೇ ತರಗತಿಯ ಪಠ್ಯದಲ್ಲಿ ಮರುಸೇರ್ಪಡೆಗೊಳಿಸಿ ಎನ್ನುವ ಬಿಲ್ಲವ ಸಮುದಾಯ ಹಾಗೂ ಗುರುಗಳ ಅನುಯಾಯಿಗಳ ಬೇಡಿಕೆಗೆ ರಾಜ್ಯ ಸರಕಾರ ಸ್ಪಂದಿಸಿಲ್ಲ. ಸರಕಾರದಲ್ಲಿ ಸಮುದಾಯಕ್ಕೆ ಸೇರಿದ ಇಬ್ಬರು ಸಚಿವರು ಇದ್ದರೂ ಈ ಬಗ್ಗೆ ಚಕಾರ ಎತ್ತಿಲ್ಲ. ಕರ್ನಾಟಕದಲ್ಲಿ ಬಿಲ್ಲವ, ಆರ್ಯ ಈಡಿಗ ಸೇರಿದಂತೆ 26 ಪಂಗಡಗಳ ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ ಕೋಟ್ಯಂತರ ಮಂದಿ ಅನುಯಾಯಿಗಳ ಬಗ್ಗೆ ಸರಕಾರಕ್ಕೆ ಯಾಕೆ ತಾತ್ಸಾರ ಭಾವನೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಹಾಗೂ ನ್ಯಾಯವಾದಿ ಪದ್ಮರಾಜ್ ಆರ್. ಪ್ರಶ್ನಿಸಿದ್ದಾರೆ.

ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪು ಸೇರಿದಂತೆ ನಾಡಿನ ವಿವಿಧ ಸಮಾಜ ಸುಧಾರಕರ ಕುರಿತು ಪಠ್ಯ ಪರಿಷ್ಕರಣೆಯಲ್ಲಿ ಆಗಿರುವ ತಪ್ಪುಗಳಿಗೆ ಸಮಾಜದ ವಿವಿಧ ವಲಯಗಳಿಂದ ಕೇಳಿ ಬಂದ ವಿರೋಧಗಳಿಗೆ ಸ್ಪಂದಿಸಿರುವ ಶಿಕ್ಷಣ ಇಲಾಖೆ ಎಂಟು ತಿದ್ದುಪಡಿ ಮಾಡಿ ಪಠ್ಯದಲ್ಲಿ ಅಳವಡಿಸುವಂತೆ ಆದೇಶ ಹೊರಡಿಸಿದೆ.  ಇದನ್ನು ನಾವು ಸ್ವಾಗತಿಸುತ್ತೇವೆ.ಆದರೆ ಬ್ರಹ್ಮಶ್ರಿ ನಾರಾಯಣಗುರುಗಳ ಪಠ್ಯವನ್ನು10ನೇ ತರಗತಿಯ ಪಠ್ಯದಲ್ಲಿ ಮರುಸೇರ್ಪಡೆಗೊಳಿಸಿ ಎನ್ನುವ ಬಿಲ್ಲವ ಸಮುದಾಯ ಹಾಗೂ ಗುರುಗಳ ಅನುಯಾಯಿಗಳ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ನಾರಾಯಣಗುರುಗಳ ಕುರಿತ ಪಠ್ಯವನ್ನು 10ನೇ ತರಗತಿಯ ಕನ್ನಡ ಭಾಷಾ ಪಠ್ಯದಲ್ಲಿ ಸೇರಿಸಲಾಗಿದೆ ಎಂದು ಸರ್ಕಾರ ಹಾಗೂ ಪಕ್ಷದ ಮುಖಂಡರು ಸಮಜಾಯಿಷಿ ನೀಡುತ್ತಿದ್ದಾರೆ. ಆದರೆ ಕನ್ನಡ ಭಾಷಾ ಪಠ್ಯವನ್ನು ಶೇ.30ರಿಂದ 50ರಷ್ಟು ವಿದ್ಯಾರ್ಥಿಗಳು ಮಾತ್ರ ಓದುತ್ತಾರೆ. ಉಳಿದ ಭಾಷಾ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳು ಗುರುಗಳ ಕುರಿತ ಮಾಹಿತಿಯನ್ನು ಎಲ್ಲಿ ಪಡೆಯಬೇಕು ಎಂಬುದರ ಬಗ್ಗೆ ಸರ್ಕಾರ ಚಿಂತಿಸಿದೆಯೆ? ಯಾಕೆ  ಬಿಲ್ಲವ, ಈಡಿಗ ಹಾಗೂ ಸಮಸ್ತ ನಾರಾಯಣಗುರುಗಳ ಅನುಯಾಯಿಗಳನ್ನು ಮತ್ತೆ ಮತ್ತೆ ಕಡೆಗಣಿಸುತ್ತಿದ್ದೀರಿ?

ಪ್ರತಿಪಕ್ಷದ ಶಾಸಕರು, ಮುಖಂಡರು ಕೇವಲ ಪತ್ರಿಕಾ ಹೇಳಿಕೆ ನೀಡಿ ಸರ್ಕಾರದಿಂದ ಗುರುಗಳ ಅನುಯಾಯಿಗಳಿಗೆ ‌ಆಗುತ್ತಿರುವ ಅನ್ಯಾಯದ ಬಗ್ಗೆ ಸುಮ್ಮನೆ ಕುಳಿತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಪಠ್ಯವನ್ನು ಮತ್ತೆ 10ನೇ ತರಗತಿಯ ಸಮಾಜ ವಿಜ್ಞಾನ ಅಥವಾ ಎಲ್ಲ ಭಾಷಾ ಮಾಧ್ಯಮಕ್ಕೆ ಸೇರ್ಪಡೆಗೊಳಿಸುವ ಮೂಲಕ ಎಲ್ಲ ವಿದ್ಯಾರ್ಥಿಗಳು ಓದುವಂತೆ ಮಾಡುವ ನಿರ್ಧಾರ ಕೈಗೊಳ್ಳಲಿ. ಇಲ್ಲವಾದಲ್ಲಿ ತೀವ್ರ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಸುತ್ತಿದ್ದೇವೆ ಎಂದು ಪದ್ಮರಾಜ್ ಆರ್. ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು