8:29 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವ ಮಗುವಿಗೆ ಕಾಂಗ್ರೆಸ್ ನಾಯಕ ಮಿಥುನ್ ರೈ ಸಹಾಯ ಹಸ್ತ

04/06/2021, 07:54

ಮೂಡುಬಿದಿರೆ(reporterkarnataka news) : ಪುತ್ತಿಗೆ ಗ್ರಾಮದ ಸಬ್ ಸ್ಟೇಷನ್ ಬಳಿಯ ಶೇಕ್ ಮುಬೀನ್ ಮತ್ತು ಸಲ್ಮಾ ಬಾನು ಅವರ 8 ವರ್ಷದ ಮಗು ಮಹಮ್ಮದ್ ಸರೋಶ್ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದು , ಅದರ ಚಿಕಿತ್ಸೆಯ ನಂತರ ಮಗುವಿನ ದೈಹಿಕ ಬೆಳವಣಿಗೆ ಕುಂಠಿತವಾಗಿದ್ದು, ಮಗುವಿನ ಮುಂದಿನ ಬೆಳವಣಿಗೆಗೆ 12 ತಿಂಗಳ ಕಾಲ 15,000 ರೂಪಾಯಿ ಮೌಲ್ಯದ ಇಂಜೆಕ್ಷನ್ ನೀಡುವಂತೆ ವೈದ್ಯರು ಸೂಚಿಸಿದ್ದು ಬಡಕುಟುಂಬ ಬಹಳಷ್ಟು ಸಂಕಷ್ಟಕ್ಕೀಡಾಗಿತ್ತು. ಇದನ್ನು ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಿಥುನ್ ರೈ ಅವರ ಗಮನಕ್ಕೆ ಸ್ಥಳೀಯ ನಾಯಕರು ತಂದಿದ್ದು ಅವರು ಆ ಮಗುವಿಗೆ 15,000 ಮೌಲ್ಯದ ಇಂಜೆಕ್ಷನ್ ಆ ಮಗುವಿನ ಮನೆಗೆ ತಂದುಕೊಟ್ಟಿದ್ದು ಮಗುವಿನ ಮುಂದಿನ ಚಿಕಿತ್ಸೆಗೆ ನೆರವಾಗುವ ಭರವಸೆಯನ್ನು ನೀಡಿ ಮಗುವಿನ ಪೋಷಕರಿಗೆ ಧೈರ್ಯ ತುಂಬಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ,  ವಲೇರಿಯನ್ ಸಿಕ್ವೇರಾ , ರಾಜೇಶ್ ಕಡಲಕೆರೆ , ಚಂದ್ರಹಾಸ್  ಸನಿಲ್ , ಜಯಕುಮಾರ್ ಶೆಟ್ಟಿ , ವಾಸುದೇವ ನಾಯಕ್ , ನಿತಿನ್ ಬೆಳುವಾಯಿ,  ಮಹಮ್ಮದ್ ಶರೀಫ್ , ಸುದೀಶ್ ಪುತ್ತಿಗೆ  , ಲತೀಫ್ ,  ಶಬೀರ್ , ಪುರುಷೋತ್ತಮ್ ನಾಯಕ್ , ಸುರೇಶ್ ಕೋಟ್ಯಾನ್ , ಸುಂದರ ಸಿ. ಪೂಜಾರಿ , ಕುಮಾರ್ ಪೂಜಾರಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು