7:43 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್: ವಿದ್ಯಾರ್ಥಿ ವೇತನ, ಅಸಹಾಯಕರಿಗೆ ಧನ ಸಹಾಯ ವಿತರಣೆ

22/09/2025, 22:27

ಮಂಗಳೂರು(reporterkarnataka.com): ನಗರದ ಪಡೀಲ್ ನಲ್ಲಿ ಇತ್ತೀಚೆಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೆಬಲ್ ಟ್ರಸ್ಟ್ ಮೂಲಕವಾಗಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನಿ. ಪಡೀಲ್ ಇದರ ಸಹಯೋಗದೊಂದಿಗೆ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಆಶಕ್ತರಿಗೆ, ಅಸಹಾಯಕರಿಗೆ ಧನ ಸಹಾಯವನ್ನು ವಿತರಿಸಲಾಯಿತು.
ಟ್ರಸ್ಟ್ ನ ಗೌರವಾಧ್ಯಕ್ಷರಾದ ವಾಮನ್ ಕುದ್ರೋಳಿ ಮಾತನಾಡಿ, ಟ್ರಸ್ಟ್ ತನ್ನ ಸೇವಾಕಾರ್ಯಗಳನ್ನು ಕಳೆದ 23 ವರುಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ವಿದ್ಯಾರ್ಥಿ ವೇತನ, ಆಶಕ್ತರಿಗೆ ಸಹಾಯ ಹಸ್ತ, ಆರೋಗ್ಯ ಶಿಬಿರ, ಕನ್ನಡಕ ವಿತರಣೆ ಪ್ರಮುಖವಾಗಿವೆ, ಜೊತೆಗೆ ಮಾಹಿತಿ ಆಧಾರಿತ ಮಾಧ್ಯಮವಾಗಿ ಆತ್ಮಶಕ್ತಿ ಪತ್ರಿಕೆಯನ್ನು ಹೊರತರಲಾಗುತ್ತಿದೆ, ಈ ಕಾರ್ಯಕ್ರವನ್ನು ನಡೆಸುವುದರಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನಿ. ಇದರ ಪಾತ್ರವೂ ಉಲ್ಲೇಖನೀಯವೆಂದರು,ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರೂ, ಟ್ರಸ್ಟ್ ನ ಕಾರ್ಯಧ್ಯಕ್ಷರೂ ಆದ ಸಹಕಾರ ರತ್ನ ಚಿತ್ತಾರಂಜನ್ ಬೋಳಾರ್ ಮಾತನಾಡುತ್ತಾ ಇಂತಹ ಸೇವಾ ಕಾರ್ಯಗಳಲ್ಲೂ ಸಂಘ ತನ್ನ ಹಸ್ತವನ್ನು ದೀರ್ಘವಾಗಿಸಿ ಟ್ರಸ್ಟ್ ನ ಈ ಎಲ್ಲಾ ಸಮಾಜ ಮುಖಿ ಚಟುವಟಿಕೆಗಳಲ್ಲಿ ತನ್ನನ್ನು ಜೊತೆಯಾಗಿಸಿಕೊಂಡಿದೆಯೆಂದರು, ಟ್ರಸ್ಟ್ ಅಧ್ಯಕ್ಷ ಗೋಪಾಲ್ ಪೂಜಾರಿ ಮಾತನಾಡುತ್ತಾ ಸಮಾಜದ ಸೇವೆ ಅದು ದೇವರ ಕೆಲಸ, ಸಮಾಜದ ಬಗ್ಗೆ ನಮಗೆ ಸದಾ ತುಡಿತ ಇರುವುದು ಅವಶ್ಯಕ ನಮಗೆಲ್ಲಾ ಸಮಾಜದ ಋಣ ವಿದೆಯೆಂದರು.
ವೇದಿಕೆಯಲ್ಲಿ ಟ್ರಸ್ಟ್ ನ ಉಪಾಧ್ಯಕ್ಷರಾದ ಮುದ್ದು ಮೂಡುಬೆಳ್ಳೆ, ಕೋಶಾಧಿಕಾರಿ ಬಾಬು ಎಸ್‌. ಕರ್ಕೇರ, ಟ್ರಸ್ಟಿಗಳಾದ ಜಯಚಂದ್ರ ಕಜೆಕಾರ್, ಸದಾನಂದ ಸುವರ್ಣ, ಚಂದ್ರಾವತಿ, ಟ್ರಸ್ಟಿ ಹಾಗೂ ಸಹಕಾರಿ ಸಂಘದ
ಉಪಾಧ್ಯಕ್ಷರಾದ, ನೇಮಿರಾಜ್ ಪಿ, ಸೀತಾರಾಮ್, ಆನಂದ್ ಕೊಂಡಾಣ, ಬಿ. ಪಿ ದಿವಾಕರ್,ರಮಾನಾಥ್ ಸನಿಲ್, ಉಮಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯಾ ವಿಜಯ್ ಮುಂತಾದವರು ಉಪಸ್ಥಿತರಿದ್ದರು.
ಟ್ರಸ್ಟ್ ಕಾರ್ಯದರ್ಶಿ ಗೋಪಾಲ್ ಎಂ. ಫಲಾನುಭವಿಗಳ ಪಟ್ಟಿ ವಾಚಿಸಿದರು. ಜೊತೆ ಕಾರ್ಯದರ್ಶಿ ವಿಶ್ವನಾಥ್ ಪೂಜಾರಿ ರೆಂಜಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು