7:00 AM Friday9 - January 2026
ಬ್ರೇಕಿಂಗ್ ನ್ಯೂಸ್
ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್: ಎಎಪಿ ಯುವ ಘಟಕದಿಂದ ಸಹಿ ಸಂಗ್ರಹಣ… ಬಾಂಗ್ಲಾದವರು ನುಸುಳುವವರೆಗೆ ಕೇಂದ್ರ ಗೃಹ ಇಲಾಖೆ ನಿದ್ದೆಗೆ ಜಾರಿತ್ತಾ?: ಸಚಿವ ಕೃಷ್ಣ ಬೈರೇಗೌಡ… ಇನ್ಫೋಸಿಸ್ ನಿಂದ 53.5 ಎಕರೆ ಭೂಮಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಮಾರಾಟ: ತನಿಖೆಗೆ… ಕ್ವಾಂಟಮ್ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಸಹಭಾಗಿತ್ವಕ್ಕೆ ಪೆನಾಂಗ್ ಉಪಮುಖ್ಯಮಂತ್ರಿ ಒಲವು ಲಾರಿ- ಬೈಕ್ ಡಿಕ್ಕಿ: ಗಾಯಾಳು ಬೈಕ್ ಸವಾರ ಗೋಣಿಕೊಪ್ಪಲು ಲೋಪಮುದ್ರ ಆಸ್ಪತ್ರೆಯಲ್ಲಿ ಸಾವು ಸುದೀರ್ಘ ಅವಧಿಗೆ ಸಿಎಂ ಎಂಬ ದಾಖಲೆ ಜನರ ಆಶೀರ್ವಾದಿಂದ ಸಾಧ್ಯವಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ; ಕಲಾವಿದರು,ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆ ಕಲ್ಪಿಸಿದೆ: ಮುಖ್ಯಮಂತ್ರಿ

ಇತ್ತೀಚಿನ ಸುದ್ದಿ

ಬೋಂದೆಲ್ ಸಂತ ಲಾರೆನ್ಸರ ದೇವಾಲಯ ಮತ್ತು ಪುಣ್ಯಕ್ಷೇತ್ರದ ಶತಮಾನೋತ್ಸವ: ಬೃಹತ್ ಹೊರೆಕಾಣಿಕೆ ಮೆರವಣಿಗೆ

16/11/2024, 20:50

ಮಂಗಳೂರು(reporterkarnataka.com): ನಗರದ ಬೋಂದೆಲ್ ನ ಸಂತ ಲಾರೆನ್ಸರ ದೇವಾಲಯ ಮತ್ತು ಪುಣ್ಯಕ್ಷೇತ್ರದ ಶತಮಾನೋತ್ಸವ ಮತ್ತು ನವೀಕೃತ ನೂತನ ಚರ್ಚ್ ಉದ್ಘಾಟನೆಯ ಪ್ರಯುಕ್ತ ಬೃಹತ್ ಹೊರೆಕಾಣಿಕೆ ಮೆರವಣಿಗೆ ನಗರದ ಮೇರಿ ಹಿಲ್‌ ಮೌಂಟ್ ಕಾರ್ಮೆಲ್ ಶಾಲಾ ಆವರಣದಿಂದ ಬೋಂದೆಲ್ ಚರ್ಚ್ ವರೆಗೆ ನಡೆಯಿತು.

ಕಾರ್ಯಕ್ರಮಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಚಾಲನೆ ನೀಡಿದರು, ಆಶೀರ್ವಚನ ಕಾರ್ಯವನ್ನು ಸಂತ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲರಾದ ಫಾ. ಪೀಟರ್ ಗೊನ್ಸಾಲ್ವಿಸ್ ನಡೆಸಿದರು. ಸಂತ ಲಾರೆನ್ಸ್ ಚರ್ಚ್ ನ ಪ್ರಧಾನ ಧರ್ಮ ಗುರು ಫಾ‌. ಆ್ಯಂಡ್ರೂ ಲಿಯೋ ಡಿಸೋಜ ಹೊರೆಕಾಣಿಗಳಿಗೆ ಪವಿತ್ರ ನೀರು ಸಿಂಪಡಣೆ ನೆರವೇರಿಸಿದರುಮ ಕಾರ್ಯಕ್ರಮದಲ್ಲಿ ಮಂಗಳೂರು ಸಿಟಿ ವಲಯದ ಪ್ರಧಾನ ಧರ್ಮಗುರು ಫಾ.ಜೇಮ್ಸ್ ಡಿಸೋಜ, ಬೆಥರಾಂ ಫಾರ್ಮೇಶನ್ ಹೌಸ್ ಸುಪೀರಿಯರ್ ಫಾ. ಅರುಣ್, ಪ್ರೆಸೆಂಟೇಶನ್ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಲೀಲಾ, ಮೌಂಟ್ ಕಾರ್ಮೆಲ್ ಸ್ಕೂಲ್ ಪ್ರಾಂಶುಪಾಲೆ ಸಿಸ್ಟರ್ ಮೆಲಿಸಾ, ಸಂತ ಲಾರೆನ್ಸ್ ಚರ್ಚ್ ಸಹಾಯಕ ಧರ್ಮಗುರು ಫಾ‌. ವಿಲಿಯಂ ಡಿಸೋಜ, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಜಾನ್ ಡಿಸಿಲ್ವ, ಕಾರ್ಯದರ್ಶಿ ಸಂತೋಷ್ ಮಿಸ್ಕಿತ್, ಕಾಂಗ್ರೆಸ್ ಮುಖಂಡ ಎಂ.ಜಿ. ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಶತಮಾನೋತ್ಸವ ಮತ್ತು ನವೀಕೃತ ನೂತನ ಚರ್ಚ್ ಉದ್ಘಾಟನೆಯ ಪ್ರಯುಕ್ತ ಬೃಹತ್ ಹೊರೆಕಾಣಿಕೆ ಮೆರವಣಿಗೆ ಮಂಗಳೂರಿನ ಮೇರಿ ಹಿಲ್‌ ಮೌಂಟ್ ಕಾರ್ಮೆಲ್ ಶಾಲಾ ಆವರಣದಿಂದ ಬೋಂದೆಲ್ ಚರ್ಚ್ ವರೆಗೆ ನಡೆಯಿತು.
ಕಾರ್ಯಕ್ರಮಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಚಾಲನೆ ನೀಡಿದರು, ಆಶೀರ್ವಚನ ಕಾರ್ಯವನ್ನು ಸಂತ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲರಾದ ಫಾ. ಪೀಟರ್ ಗೊನ್ಸಾಲ್ವಿಸ್ ನಡೆಸಿದರು. ಸಂತ ಲಾರೆನ್ಸ್ ಚರ್ಚ್ ನ ಪ್ರಧಾನ ಧರ್ಮ ಗುರು ಫಾ‌. ಆ್ಯಂಡ್ರೂ ಲಿಯೋ ಡಿಸೋಜ ಹೊರೆಕಾಣಿಗಳಿಗೆ ಪವಿತ್ರ ನೀರು ಸಿಂಪಡಣೆ ನೆರವೇರಿಸಿದರುಮ ಕಾರ್ಯಕ್ರಮದಲ್ಲಿ ಮಂಗಳೂರು ಸಿಟಿ ವಲಯದ ಪ್ರಧಾನ ಧರ್ಮಗುರು ಫಾ.ಜೇಮ್ಸ್ ಡಿಸೋಜ, ಬೆಥರಾಂ ಫಾರ್ಮೇಶನ್ ಹೌಸ್ ಸುಪೀರಿಯರ್ ಫಾ. ಅರುಣ್, ಪ್ರೆಸೆಂಟೇಶನ್ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಲೀಲಾ, ಮೌಂಟ್ ಕಾರ್ಮೆಲ್ ಸ್ಕೂಲ್ ಪ್ರಾಂಶುಪಾಲೆ ಸಿಸ್ಟರ್ ಮೆಲಿಸಾ, ಸಂತ ಲಾರೆನ್ಸ್ ಚರ್ಚ್ ಸಹಾಯಕ ಧರ್ಮಗುರು ಫಾ‌. ವಿಲಿಯಂ ಡಿಸೋಜ, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಜಾನ್ ಡಿಸಿಲ್ವ, ಕಾರ್ಯದರ್ಶಿ ಸಂತೋಷ್ ಮಿಸ್ಕಿತ್, ಕಾಂಗ್ರೆಸ್ ಮುಖಂಡ ಎಂ.ಜಿ. ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು