ಇತ್ತೀಚಿನ ಸುದ್ದಿ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಿಂದ ರಂಭಾಪುರಿ ಮಠಕ್ಕೆ ಆನೆ ಕೊಡುಗೆ: ಇದು ಅಂತಿಂಥ ಆನೆಯಲ್ಲ, ಮತ್ತೇನು ಇದರ ವಿಶೇಷ?
15/12/2024, 18:41
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ರಂಭಾಪುರಿ ಮಠಕ್ಕೆ
ಆನೆ ಕೊಡುಗೆ ನೀಡಿದ್ದಾರೆ. ಇದು ಅಂತಿಂಥ ಆನೆಯಲ್ಲ, ರೋಬೋಟಿಕ್ ಆನೆ.
ರಂಭಾಪುರಿ ಶ್ರೀಗಳಿಂದ ರೋಬೋಟಿಕ್ ಆನೆಗೆ ಚಾಲನೆ ನೀಡಲಾಯಿತು. ನೋಡಲು ಸೇಮ್ ನಿಜವಾದ ಆನೆಯಂತೆ ಕಾಣುವ ರೋಬೋಟಿಕ್ ಎಲಿಫೆಂಟ್ ಇದಾಗಿದೆ.
ಸದಾ ಕಿವಿ, ತಲೆ, ಸೊಂಡಿಲು ಹಾಗೂ ಬಾಲವನ್ನ ಅಲ್ಲಾಡಿಸುತ್ತಿರುತ್ತದೆ. ನೋಡಿದ ಕೂಡಲೇ ನಿಜವಾದ ಆನೆ ಎಂದೇ ಭಾಸವಾಗುವಂತಿದೆ.
ಪಂಚಪೀಠಗಳಲ್ಲೇ ಮೊದಲ ಪೀಠವಾದ ರಂಭಾಪುರಿ ಮಠ
ಎನ್.ಆರ್.ಪುರ ತಾಲೂಕಿನ ಭದ್ರಾ ನದಿ ತಟದಲ್ಲಿದೆ.