2:26 PM Wednesday14 - May 2025
ಬ್ರೇಕಿಂಗ್ ನ್ಯೂಸ್
Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌…

ಇತ್ತೀಚಿನ ಸುದ್ದಿ

ಬೊಕ್ಕಪಟ್ಣ ಶ್ರೀ ಬ್ರಹ್ಮ ಬೊಬ್ಬರ್ಯ ಬಂಟ ದೈವ ಸ್ಥಾನದ ಮೇಲ್ಛಾವಣಿ ಶಾಸಕ ವೇದವ್ಯಾಸ ಕಾಮತ್ ಉದ್ಘಾಟನೆ

02/06/2022, 19:21

ಮಂಗಳೂರು(reporterkarnataka.com): ಹಿಂದೂ ಧಾರ್ಮಿಕ‌ ಕ್ಷೇತ್ರಗಳ‌ ಅಭಿವೃದ್ಧಿಗೆ ಬಿಜೆಪಿ ಸರಕಾರದ ಅವಧಿಯಲ್ಲಿ ಸಾಕಷ್ಟು ಪ್ರಾಧಾನ್ಯತೆ ನೀಡಲಾಗಿದೆ.ನಗರದ ಧಾರ್ಮಿಕ ಕ್ಷೇತ್ರಗಳ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಶಾಸಕನಾಗಿ ಸರ್ವ ವಿಧದಲ್ಲೂ ಸಹಕಾರ ನೀಡುತ್ತೇನೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು‌. 

ಮಂಗಳೂರು ಮಹಾನಗರ ಪಾಲಿಕೆಯ ಬೋಳೂರು ವಾರ್ಡಿನ ಬೊಕ್ಕಪಟ್ಣ ಶ್ರೀ ಬ್ರಹ್ಮ ಬೊಬ್ಬರ್ಯ ಬಂಟ ದೇವಸ್ಥಾನದ ಮೇಲ್ಛಾವಣಿ ಉದ್ಘಾಟಿಸಿ ಮಾತನಾಡಿದ ಅವರು, ಸೈದ್ಧಾಂತಿಕ ಬದ್ಧತೆಯೊಂದಿಗೆ ಆಡಳಿತಕ್ಕೆ ಬಂದ ನಮ್ಮ ಸರಕಾರವು ಧಾರ್ಮಿಕ ಕ್ಷೇತ್ರಗಳ ಉನ್ನತಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿದೆ. ನಗರದಲ್ಲಿನ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು‌.

ಈಗಾಗಲೇ ಅನೇಕ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯ ಕುರಿತು ಮನವಿ ಬಂದಿದ್ದು ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು. ನಮ್ಮ ಆಡಳಿತದಲ್ಲಿ ನಗರದ ಅಭಿವೃದ್ಧಿಯ ಜೊತೆಗೆ ಜನರು ಭಾವನಾತ್ಮಕ ಸಂಬಂಧ ಬೆಸೆದಿರುವ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೂ ಕೂಡ ಆದ್ಯತೆ ನೀಡಲಾಗಿದೆ ಎಂದರು.

ಕ್ಷೇತ್ರದ ಅಧ್ಯಕ್ಷರಾದ ಲೋಕೇಶ್ ಸುವರ್ಣ ಮಾತನಾಡಿ, ಶ್ರೀ ಬ್ರಹ್ಮ ಬೊಬ್ಬರ್ಯ ಬಂಟ ದೈವಸ್ಥಾನದಲ್ಲಿ ಮೇಲ್ಛಾವಣಿ ನಿರ್ಮಾಣ ಕಾಮಗಾರಿಗಾಗಿ‌ ಶಾಸಕರಲ್ಲಿ ಮನವಿ ಸಲ್ಲಿಸಿದಾಗ ಅವರು ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ. ಕ್ಷೇತ್ರದ ಎಲ್ಲಾ ಭಕ್ತಾದಿಗಳು ಹಾಗೂ ಮುಖಂಡರ ಪರವಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ್ದಾರೆ.

ಈ‌ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ಜಗದೀಶ್ ಶೆಟ್ಟಿ ಬೋಳೂರು, ಮುಖಂಡರಾದ ದೇವಾನಂದ್ ಗುಜರಾನ್, ಗೌತಮ್ ಕೋಡಿಕಲ್, ಜಗದೀಶ ಶೆಟ್ಟಿ, ಆರ್. ಪಿ ಬೋಳೂರು, ಸುಭಾಶ್ಚಂದ್ರ ಕಾಂಚನ್, ನಾರಾಯಣ ಕೋಟ್ಯಾನ್, ಜನಾರ್ದನ ಗುರಿಕಾರ, ಪ್ರಕಾಶ್ ಗುರಿಕಾರ, ಮೋಹನದಾಸ್, ವಿಶು ಕುಮಾರ್, ತಾರಾನಾಥ್ ಕೋಟ್ಯಾನ್, ಸುಭಾಸ್, ಜಗದೀಶ, ಯಾದವ್ ಸುವರ್ಣ, ಪುರುಷೋತ್ತಮ್ ಕೋಟ್ಯಾನ್, ಕಿರಣ್ ರೈ, ಶ್ಯಾಮಸುಂದರ್ ಕಾಂಚನ್, ದಯಾನಂದ ಪುತ್ರನ್, ಚಂದ್ರಹಾಸ್, ಚಿದಾನಂದ ಸಾಲ್ಯಾನ್, ರಾಹುಲ್ ಶೆಟ್ಟಿ, ಕಾರ್ತಿಕ್ ಬಂಗೇರ, ಉಮಾಶಂಕರ್, ದಿನೇಶ್ ಕರ್ಕೇರ, ತೃಪ್ತಿ ಸುವರ್ಣ, ಕಿರಣ್, ಸಂದೀಪ್ ಕೋಟ್ಯಾನ್, ಪದ್ಮನಾಭ ಪುತ್ರನ್, ರಾಧಾಕೃಷ್ಣ ಶೇಟ್, ಪುರಂದರ ಶೆಟ್ಟಿ, ಗೋಪಾಲ ಬಂಗೇರ, ರಘು ಸಾಲ್ಯಾನ್, ಗೌತಮ್ ಸುವರ್ಣ, ಆನಂದ ಶೆಟ್ಟಿ, ವೆಂಕಟೇಶದಾಸ್, ಯಜ್ಞೇಶ್ ಗಟ್ಟಿ, ಅಶೋಕ್ ಆಚಾರ್, ಪುರುಷೋತ್ತಮ್, ಸುಧೀರ್ ಶೇಟ್, ಅಶೋಕ್ ಆಚಾರ್, ಅಜಯ್ ಸುವರ್ಣ, ಭಕ್ತಾದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು