8:43 AM Thursday24 - October 2024
ಬ್ರೇಕಿಂಗ್ ನ್ಯೂಸ್
ವಯನಾಡು ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ; ಬೃಹತ್… ಪಂಚಾಯತ್ ಪಾಲಿಟಿಕ್ಸ್: ಅಧಿಕಾರ, ಅನುದಾನದ ಆಸೆಗೆ ಗ್ರಾಪಂ ಸದಸ್ಯೆಯ ಪತಿಯ ಭೀಕರ ಹತ್ಯೆ:… ಮೂಡಿಗೆರೆ ರೈತ ಭವನದಲ್ಲಿ ಅ.25ರಂದು ವೈವಿಧ್ಯಮಯ ‘ಮಲೆನಾಡು ಹಬ್ಬ’ ಸುರತ್ಕಲ್ ಎನ್ ಐಟಿಕೆ: ಯುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪರ್ಕಿಸುವ ‘ಜಂಬೋರಿ ಆನ್… ರೈಲ್ವೆ ಹಳಿ ಮೇಲೆ ಕಲ್ಲು ಇಟ್ಟ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ: ಸಂಸದ ಕ್ಯಾ.… ಕ್ರೂರ ವಿಧಿಯಾಟ: ಮದುವೆ ನಿಶ್ಚಿತಾರ್ಥವಾದ ಯುವತಿ ರಸ್ತೆ ಅಪಘಾತಕ್ಕೆ ಬಲಿ; ಮುಂದಿನ ತಿಂಗಳು… ಚಿಕ್ಕಮಗಳೂರು: ಭಾರೀ ಮಳೆ; ಜನಜೀವನ ಅಸ್ತವ್ಯಸ್ತ; ಸಿಡಿಲಿಗೆ ಎತ್ತು ಬಲಿ ವಿಜ್ಞಾನ ಮೇಳ: ಸೆನ್ಸಾರ್ ಆಧಾರಿತ ಮಾದರಿಯಲ್ಲಿ ಸೇವಾ ಭಾರತಿ ವಿದ್ಯಾರ್ಥಿ ನಹುಷ್ ಪ್ರಥಮ ಏಷ್ಯಾದ ಗೇಮಿಂಗ್ ಮತ್ತು ಅನಿಮೇಷನ್ ರಾಜಧಾನಿಯಾಗುವುದು ಕರ್ನಾಟಕದ ಗುರಿ: ಐಜಿಸಿ 2024ರಲ್ಲಿ ಸಚಿವ… ಬಿಳಾಲುಕೊಪ್ಪ-ಬಸರೀಕಟ್ಟೆ ರಸ್ತೆ ಕೆಸರುಮಯ: ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ

ಇತ್ತೀಚಿನ ಸುದ್ದಿ

ಬಿಜೆಪಿಯನ್ನು ಇನ್ನಷ್ಟು ಸಂಘಟನಾತ್ಮಕವಾಗಿ ಕಟ್ಟೋಣ: ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್

21/08/2024, 16:36

ಬಂಟ್ವಾಳ(reporterkarnataka.com): ಬಿಜೆಪಿ ಪಕ್ಷವನ್ನು ಇನ್ನಷ್ಟು ಸಂಘಟನಾತ್ಮಕವಾಗಿ ಬೆಳೆಸಲು ಕಾರ್ಯಕರ್ತರು ಒಟ್ಟಿಗೆ ಕೆಲಸ ಮಾಡಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಬಿ.ಸಿ. ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದ ವಿಶೇಷ ಕಾರ್ಯಕಾರಿಣಿ ಸಭೆ ಹಾಗೂ ಅಭಿನಂದನಾ ಸಭೆಯ ಉದ್ಘಾಟಿಸಿ ಮಾತನಾಡಿದರು.


ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಶಾಂತಿ ಮತ್ತು ನೆಮ್ಮದಿಯ ಜೀವನವನ್ನು ನಡೆಸುವ ಎಂದು ಅವರು ಕಾರ್ಯಕರ್ತರಿಗೆ ತಿಳಿಸಿದರು.
ಕಾರ್ಯಕರ್ತರ ನಿರಂತರವಾದ ಶ್ರಮ ಮತ್ತು ತ್ಯಾಗದ ಫಲವಾಗಿ ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಎಂ.ಎಲ್.ಸಿ.ಎಲ್.ಬೋಜೇಗೌಡ ಅವರನ್ನು ಅಭಿನಂದಿಸಲಾಯಿತು.
ಅಭಿನಂದನೆಯನ್ನು ಸ್ವೀಕರಿಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಂಘಟನಾತ್ಮಕವಾಗಿ ಬಲಿಷ್ಠವಾಗಿದೆ. ಹಲವು ಷಡ್ಯಂತ್ರಗಳ ನಡುವೆಯೂ 2024ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಬಹುಮತದ ಆಶೀರ್ವಾದ ಮಾಡಿದ್ದೀರಿ, ಅದಕ್ಕೆ ವಿಶೇಷವಾದ ಧನ್ಯವಾದ ನೀಡುತ್ತೇನೆ ಎಂದರು.
ಬಿಜೆಪಿ ವಿಚಾರಧಾರೆಯ ಅಡಿಯಲ್ಲಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ ಎಂದು ಅವರು ತಿಳಿಸಿದರು.
ಈ ಜಿಲ್ಲೆಯ ಮೂಲಭೂತವಾದ ಅಭಿವೃದ್ಧಿ ದೃಷ್ಟಿಯಿಂದ ಕಾನೂನಾತ್ಮಕ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮುಂದುವರಿಸುವ ಭರವಸೆ ನೀಡುತ್ತೇನೆ. ಅನುಷ್ಠಾನ ಹಂತದಲ್ಲಿರುವ ಎಲ್ಲಾ ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ಪೂರ್ತಿಗೊಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನವಯುಗ ,ನವಪಥ ಎಂಬ ಯೋಜನೆಯನ್ನು ಚುನಾವಣಾ ಪೂರ್ವದಲ್ಲಿ ಹಾಕಿಕೊಂಡಿದ್ದು, ಕೇಂದ್ರದ ಸಚಿವರ ಸಹಕಾರದೊಂದಿಗೆ ಯೋಜನೆಗಳಿಗೆ ಸಂಬಂಧಿಸಿದಂತೆ ಪುಷ್ಟಿ ನೀಡುವ ಕಾರ್ಯ ಮಾಡುತ್ತೇನೆ ಎಂದು ತಿಳಿಸಿದರು.
ಭ್ರಷ್ಟಾಚಾರ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ಕಾಂಗ್ರೆಸ್ ನಿಂತಿರುವುದು ನಾಚಿಕೆಯ ವಿಚಾರ. ಕಾನೂನು ಬಾಹಿರವಾಗಿ ಕಾಂಗ್ರೆಸ್ ಪ್ರತಿಭಟನೆ ಮಾಡಿ, ಬಾಂಗ್ಲಾದೇಶದ ರೀತಿಯಲ್ಲಿ ರಾಜ್ಯಪಾಲರ ಭವನಕ್ಕೆ ನುಗ್ಗುತ್ತೇವೆ ಎಂಬ ಐವನ್ ಡಿಸೋಜ ಅವರ ಹೇಳಿಕೆಗೆ ತೀವ್ರ ಅಕ್ಷೇಪ ವ್ಯಕ್ತಪಡಿಸಿದರು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಬಗ್ಗೆ ಇವರಿಗೇಕೆ ಪ್ರೀತಿ ಎಂದು ಕಿಡಿಕಾರಿದರು. ರಾಜ್ಯದ ಅಭಿವೃದ್ಧಿಗೆ ಒಂದು ನಯಪೈಸೆ ನೀಡದ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು.
ವಿಧಾನ ಪರಿಷತ್ ಸದಸ್ಯ ಬಿ.ಎಲ್.ಬೋಜೇಗೌಡ ಮಾತನಾಡಿ, ಎಲ್ಲರ ಧ್ವನಿಯಾಗಿ ಪರಿಷತ್ ಒಳಗೆ ಮತ್ತು ಹೊರಗೆ ಸದಾ ಇರುತ್ತೇನೆ ಎಂದು ಭರವಸೆ ನೀಡಿದರು. ಅವಿಭಜಿತ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಪಕ್ಷನಿಷ್ಠೆಯುಳ್ಳವರು ಹಾಗಾಗಿ ಸದಾ ಭದ್ರಕೋಟೆಯಾಗಿಯೇ ಉಳಿದಿದೆ ಎಂದು ಅವರು ತಿಳಿಸಿದರು.
ಶಿಕ್ಷಣ ಕ್ಷೇತ್ರಕ್ಕೆ ನ್ಯಾಯವನ್ನು ಕೊಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಬಿಜೆಪಿ ಮಂಡಲದ ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ, ಕಾರ್ಯದರ್ಶಿಗಳಾದ ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾಡ್ತ,ಸಂಘಟನಾ ಪರ್ವದ ಸಂಚಾಲಕ ದೇವದಾಸ ಶೆಟ್ಟಿ, ಬೂತ್ ಚಲೋ ಕಾರ್ಯಕ್ರಮದ ಸಂಚಾಲಕ ಸಂದೇಶ್ ಶೆಟ್ಟಿ, ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ನಂದನ್ ಮಲ್ಯ , ಸಂಘಟನಾ ಪರ್ವದ ಪ್ರಭಾರಿ ಜಗದೀಶ್ ಶೇಣವ, ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಮತ್ತಿತರರು ಉಪಸ್ಥಿತರಿದ್ದರು. ವಿಕಾಶ್ ಪುತ್ತೂರು ಅಭಿನಂದನಾ ಭಾಷಣ ಮಾಡಿದರು.
ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಮಂಡಲದ ಕಾರ್ಯದರ್ಶಿ ರಶ್ಮಿತ್ ಶೆಟ್ಟಿ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.
ವಿಶೇಷ ಕಾರ್ಯಕಾರಿಣಿ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆಯ ಅಂಗವಾಗಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಲಾಯಿತು. ಬಳಿಕ ಬಿಜೆಪಿ ಪ್ರಮುಖರಾದ ಡೊಂಬಯ್ಯ ಅರಳ ಅವರು ಬ್ರಹ್ಮ ಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯ ಬಗ್ಗೆ ಪ್ರಧಾನ ಭಾಷಣ ಮಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು