ಇತ್ತೀಚಿನ ಸುದ್ದಿ
ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ: 3 ಮಂದಿ ಪ್ರಮುಖ ಆರೋಪಿಗಳ ಬಂಧನ? ಎಲ್ಲರೂ ಸ್ಥಳೀಯರು?
11/08/2022, 10:32
ಸುಳ್ಯ(reporterkarnataka.com): ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ 3 ಮಂದಿ ಆರೋಪಗಳನ್ನು ಪೋಲಿಸರು ಬಂಧಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಇದರೊಂದಿಗೆ ಪ್ರವೀಣ್ ಹಂತಕರನ್ನು ದಸ್ತಗಿರಿ ಮಾಡುವುದರಲ್ಲಿ ದ.ಕ. ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳು ಸ್ಥಳೀಯರೇ ಆಗಿದ್ದಾರೆ. ಹತ್ಯೆಗೆ ಬಳಸಿದ ಬೈಕ್ ಕೂಡ ಕರ್ನಾಟಕದ್ದೇ ಆಗಿದೆ ಎಂದು ತಿಳಿದು ಬಂದಿದೆ.
ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೊಳಗಾಗಿದ್ದ ಸುಳ್ಯದ ಕಬೀರ್ ಎಂಬಾತ ಹತ್ಯೆ ನಡೆಸಲು ಬೈಕ್ ಒದಗಿಸಿದ್ದ. ಈ ಬೈಕ್ ಕೂಡ ಬೇರೆ ವ್ಯಕ್ತಿದಾಗಿದೆ.
ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ 6 ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ತುರ್ತು ಸಭೆ ನಿನ್ನೆ ಆ.10 ರಂದು ಬೆಳ್ಳಾರೆಯಲ್ಲಿ ನಡೆದಿತ್ತು.
ಇಂದು ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿನ ಎಸ್.ಪಿ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ಕರೆದಿದ್ದು ಈ ವೇಳೆ ವಿಷಯ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.