ಇತ್ತೀಚಿನ ಸುದ್ದಿ
ಬಿಜೆಪಿ ಮೊದಲ ಪಟ್ಟಿ ಬಿಡುಗಡೆ: ಮಂಗಳೂರು ಉತ್ತರ- ಡಾ. ಭರತ್ ಶೆಟ್ಟಿ, ದಕ್ಷಿಣ- ವೇದವ್ಯಾಸ ಕಾಮತ್, ಬಂಟ್ವಾಳ- ರಾಜೇಶ್ ನಾಯ್ಕ್; ಅಂಗಾರ, ಮಠಂದೂರಿಗೆ ಟಿಕೆಟ್ ಇಲ್ಲ
11/04/2023, 22:11

ಹೊಸದಿಲ್ಲಿ(reporterkarnataka.com): ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯ ಪ್ರಥಮ ಯಾದಿ ಮಂಗಳವಾರ ಬಿಡುಗಡೆಯಾಗಿದ್ದು, ಮಂಗಳೂರು ಉತ್ತರ, ದಕ್ಷಿಣ, ಮೂಡುಬಿದರೆ ಸೇರಿದಂತೆ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ದೊರಕಿದೆ.
ಮಂಗಳೂರು ಉತ್ತರದಿಂದ ಡಾ. ವೈ. ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ವೇದವ್ಯಾಸ ಕಾಮತ್, ಮೂಡುಬಿದರೆ ಉಮಾನಾಥ ಕೋಟ್ಯಾನ್, ಬೆಳ್ತಂಗಡಿ ಹರೀಶ್ ಪೂಂಜ, ಬಂಟ್ವಾಳ ರಾಜೇಶ್ ನಾಯ್ಕ್ ಅವರಿಗೆ ಟಿಕೆಟ್ ದೊರೆತಿದೆ. ಸುಳ್ಯ ಹಾಗೂ ಪುತ್ತೂರಿನಲ್ಲಿ ಹಾಲಿ ಶಾಸಕರಾದ ಅಂಗಾರ ಹಾಗೂ ಸಂಜೀವ ಮಠಂದೂರು ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಸುಳ್ಯದಲ್ಲಿ ಭಾಗೀರಥಿ ಮುರುಳ್ಯ ಮತ್ತು ಪುತ್ತೂರಿನಲ್ಲಿ ಆಶಾ ತಿಮ್ಮಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಗೆ ಮಂಗಳೂರು ಕ್ಷೇತ್ರದಲ್ಲಿ ಸತೀಶ್ ಕುಂಪಲ ಅವರಿಗೆ ಅವಕಾಶ ನೀಡಲಾಗಿದೆ.
…