9:24 PM Monday19 - May 2025
ಬ್ರೇಕಿಂಗ್ ನ್ಯೂಸ್
GBA | ಬೆಂಗಳೂರಿಗೆ ಭಾರಿ ಮಳೆಯಿಂದ ಹಾನಿ: ವಾರ್ ರೂಮ್‌ನಲ್ಲಿ ಮಾಹಿತಿ ಪಡೆದ… ಫಲಾನುಭವಿಗಳ ನೋಡಲು ಬಿಜೆಪಿ ನಾಯಕರುಗಳೇ ಬನ್ನಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಆಹ್ವಾನ Karnataka | ಹಂಪಿಯಲ್ಲಿ ರಾಜ್ಯದ 2ನೇ ಅತಿದೊಡ್ಡ ತಾರಾಲಯ ಹಾಗೂ ವಿಜ್ಞಾನ ಕೇಂದ್ರ… HDK | ಗ್ರೇಟರ್ ಬೆಂಗಳೂರು ಅಲ್ಲ, ಲೂಟರ್ ಗಳ ಬೆಂಗಳೂರು: ರಾಜ್ಯ ಸರಕಾರ… ಬೆಂಗಳೂರು: ಗುಡುಗು ಸಹಿತ ಭಾರೀ ಮಳೆ: ರಸ್ತೆಯಲ್ಲಿ ನಿಂತ ನೀರು; ಟ್ರಾಫಿಕ್ ಜಾಮ್;… ಪಾಕ್ ಬೆಂಬಲಿತ ಭಯೋತ್ಪಾದನೆ: ಅಮೆರಿಕ ತೆರಳಲಿರುವ ಸರ್ವಪಕ್ಷ ನಿಯೋಗದಲ್ಲಿ ಸಂಸದರಾದ ತೇಜಸ್ವಿ ಸೂರ್ಯ,… Chikkamagaluru | ಕೃಷಿ ಹೊಂಡದಲ್ಲಿ ಒಂಟಿ ಸಲಗನ ಜಲಕ್ರೀಡೆ!: ಒಂದು ತಾಸಿಗೂ ಅಧಿಕ… ಕರ್ನಾಟಕದ ಆನೆ ಮೇ 21ರಂದು ಆಂಧ್ರಕ್ಕೆ: ಎಪಿ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್… MSEM | ಮುಂದಿನ ದಿನಗಳಲ್ಲಿ ಎಂಎಸ್ಎಂಇ ಪ್ರತ್ಯೇಕ ಇಲಾಖೆ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ Tamilnadu | ಮಂಜೇಶ್ವರದ ಸ್ನೇಹಾಲಯದಿಂದ ಕುಂಬಕೋಣಂವರೆಗೆ ಗಿರಿ ಪಯಣ: ಕುಟುಂಬ ಜತೆ ಮತ್ತೆ…

ಇತ್ತೀಚಿನ ಸುದ್ದಿ

ಫಲಾನುಭವಿಗಳ ನೋಡಲು ಬಿಜೆಪಿ ನಾಯಕರುಗಳೇ ಬನ್ನಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಆಹ್ವಾನ

19/05/2025, 20:41

* ಬಿಜೆಪಿ ನಾಯಕರಿಗೆ ಶಾಸಕ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷರಿಂದ ಆಹ್ವಾನ

* ಪ್ರಪಂಚದ ಯಾವುದೇ ದೇಶದಲ್ಲಿ ಇಲ್ಲದ ವಿಶಿಷ್ಟ ಗ್ಯಾರಂಟಿ ಯೋಜನೆ ಎಂದು ಬಣ್ಣನೆ

ಬೆಂಗಳೂರು(reporterkarnataka.com): ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮೇ 20ರಂದು ಆಯೋಜನೆಯಾಗಿರುವ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಫಲಾನುಭವಿಗಳ ಸಮಾವೇಶಕ್ಕೆ ಆಗಮಿಸಿ ಫಲಾನುಭವಿಗಳ ನೋಡಿ ಖುದ್ದು ಕೇಳಿ, ಕಿವಿ ತುಂಬಿಕೊಳ್ಳಿ ಎಂದು ಶಾಸಕರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಬಿಜೆಪಿ ನಾಯಕರಿಗೆ ಆಹ್ವಾನ ನೀಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ . ವಿಜಯೇಂದ್ರ ಅವರು ಸಮಾವೇಶಕ್ಕೆ ಬರಬೇಕು. ಫಲಾನುಭವಿಗಳು ಏನು ಹೇಳುತ್ತಾರೆ ಎಂಬುದನ್ನು ಖುದ್ದು, ನೋಡಿ, ಕೇಳಿ ಕಣ್ತುಂಬಿಕೊಳ್ಳಬೇಕು ಎಂದು ಆಹ್ವಾನಿಸಿದ್ದಾರೆ.
ಕರೋನಾ ಕಾಲದಲ್ಲಿ ರಾಜ್ಯದ ಆರ್ಥಿಕತೆ ಹದಗೆಟ್ಟಿತ್ತು. ಜನ ಸಂಕಷ್ಟ ಅನುಭವಿಸುತ್ತಿದ್ದರು. ಕಾಂಗ್ರೆಸ್ ಎರಡು ವರ್ಷಗಳ ಹಿಂದೆ ಚುನಾವಣಾ ಪ್ರಣಾಳಿಕೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಜನ ಕಲ್ಯಾಣ ಯೋಜನೆಗಳ ಜತೆ ರಾಜ್ಯದ ಆರ್ಥಿಕತೆಯನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿತ್ತು. ಕಾಂಗ್ರೆಸ್‌ ಎಂದರೆ ಗ್ಯಾರಂಟಿ. ಕಾಂಗ್ರೆಸ್ ನಾಯಕರು ಎಂದರೆ ಗ್ಯಾರಂಟಿ. ಪಕ್ಷ ನೀಡಿದ ಆಶ್ವಾಸನೆಯನ್ನು ಎರಡು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಈಡೇರಿಸಿಕೊಂಡು ಬಂದಿದೆ ಎಂದು ಮಂಜುನಾಥ್ ಭಂಡಾರಿ ಹೇಳಿದ್ದಾರೆ.

*ಪ್ರಪಂಚದಲ್ಲೆಲ್ಲೂ ಇಲ್ಲದ ಗ್ಯಾರಂಟಿ:*
ಎರಡು ವರ್ಷಗಳಿಂದ ಕಾಂಗ್ರೆಸ್ 90 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೇರವಾಗಿ ತಲುಪಿಸಲಾಗಿದೆ.
ರಾಜ್ಯದ ಬಡವರು, ಮಧ್ಯಮ ವರ್ಗದವರು, ಅಲ್ಪಸಂಖ್ಯಾತರು, ಹಿಂದುಳಿದವರು, ಮಹಿಳೆಯರು, ಯುವಕರು ಎಲ್ಲರಿಗೂ ಜಾತಿ, ಧರ್ಮ, ಪಕ್ಷ, ಬೇಧವಿಲ್ಲದೇ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾ‌ ಮಾಡಲಾಗಿದೆ.
ಪ್ರಪಂಚದ ಯಾವ ರಾಷ್ಟ್ರದಲ್ಲೂ ಇಲ್ಲದಂಥ ವಿಶಿಷ್ಟವಾದ ಜನಕಲ್ಯಾಣ ಕಾರ್ಯಕ್ರಮ ಈ ಗ್ಯಾರಂಟಿ ಯೋಜನೆಯಾಗಿದೆ. ಆದರೆ, ವಿರೋಧ ಪಕ್ಷಗಳ ನಾಯಕರು ಮೊಸರಿನಲ್ಲಿ ಕಲ್ಲು ಹುಡುಕುವ ಕಾರ್ಯ ಮಾಡುತ್ತಿದ್ದಾರೆ. ಗ್ಯಾರಂಟಿಗಳ ಬಗ್ಗೆ ಲೇವಡಿ ಮಾಡುತ್ತಿದ್ದಾರೆ. ಗ್ಯಾರಂಟಿಗಳಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ.‌
ಆದರೆ, 4 ಲಕ್ಷ 09 ಸಾವಿರ ಕೋಟಿ ರೂ. ಆಯವ್ಯಯದಲ್ಲಿ 1 ಲಕ್ಷ 35. ಸಾವಿರ ಕೋಟಿ ರೂ. ಹಣವನ್ನು ನಮ್ಮ ಮುಖ್ಯಮಂತ್ರಿಗಳು ಅಭಿವೃದ್ಧಿಗಾಗಿ ತೆಗೆದಿರಿಸಿದ್ದಾರೆ. ಹಾಗಾಗಿ ಗ್ಯಾರಂಟಿಗಳ ಮೂಲಕ ಜನರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ತಲುಪುವ ಜತೆಗೆ, ಅಭಿವೃದ್ಧಿ ಯೋಜನೆಗಳೂ ಶರವೇಗದಲ್ಲಿ‌ ನಡೆಯುತ್ತಿವೆ ಎಂದು ಮಂಜುನಾಥ್ ಭಂಡಾರಿ ಹೇಳಿದ್ದಾರೆ.
ಹೀಗಾಗಿ ಈ ಸಮಾವೇಶಕ್ಕೆ ವಿರೋಧ ಪಕ್ಷದ ನಾಯಕರು ಬಂದು ಖುದ್ದು ಫಲಾನುಭವಿಗಳ ಮಾತುಗಳನ್ನು ಆಲಿಸಬೇಕಾಗಿ ಈ ಮೂಲಕ ಆಹ್ವಾನ ನೀಡುತ್ತೇನೆ ಎಂದು ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ್ ಭಂಡಾರಿ ಅವರು ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು