ಇತ್ತೀಚಿನ ಸುದ್ದಿ
ಬಿಜೆಪಿ ಕಾರ್ಯಕರ್ತರು ರಾಜೀನಾಮೆ ನೀಡಿದರೆ ಹೊಸ ಕಾರ್ಯಕರ್ತರು ಬರುತ್ತಾರೆ: ಈಶ್ವರಪ್ಪ
30/07/2022, 15:46
ಶಿವಮೊಗ್ಗ(reporterkarnataka.com): ಬಿಜೆಪಿಯಲ್ಲಿ ಕಾರ್ಯಕರ್ತರ ಕೊರತೆ ಇಲ್ಲ. ನೀವು ರಾಜೀನಾಮೆ ಕೊಟ್ಟರೆ ಹೊಸಬರು ಬರುತ್ತಾರೆ ಎಂದು ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮತ್ತೆ ನಾಲಗೆ ಹರಿಯಬಿಟ್ಟಿದ್ದಾರೆ.
ಮಾಧ್ಯಮ ಜತೆ ಮಾತನಾಡಿದ ಅವರು, ರಾಜೀನಾಮೆ ನೀಡುವುದು ಹೇಡಿಗಳ ಲಕ್ಷಣ. ಇದು ಪಲಾಯನವಾದ. ಇದಕ್ಕೆಲ್ಲ ರಾಜೀನಾಮೆ ಉತ್ತರವಲ್ಲ. ಅಕಸ್ಮಾತ್ ನೀವು ರಾಜೀನಾಮೆ ಕೊಟ್ಟು ಅದನ್ನು ಅಧ್ಯಕ್ಷರು ಸ್ವೀಕರಿಸಿದರೆ, ಹೊಸ ಕಾರ್ಯಕರ್ತರು ಬರುತ್ತಾರೆ ಎಂದರು.
ಕಾರ್ಯಕರ್ತರು ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಆದರ್ಶ ಪಾಲಿಸಬೇಕು. ರೈಲಿನಲ್ಲಿ ಹತ್ಯೆಗೀಡಾದ ಅವರು ಎಲ್ಲೂ ಕೈಚೆಲ್ಲಿಲ್ಲ. ನಮ್ಮ ಕೆಲವು ಕಾರ್ಯಕರ್ತರಲ್ಲಿ ಮೆಚುರಿಟಿಯ ಕೊರತೆಯಿದೆ ಎಂದು ಈಶ್ವರಪ್ಪ ನುಡಿದರು.














