ಇತ್ತೀಚಿನ ಸುದ್ದಿ
ಬಿಜೆಪಿ ಫೇಸ್ಬುಕ್ ಪೇಜ್: ಡಿ.ವಿ.ಸದಾನಂದ ಗೌಡ ಔಟ್; ಶೋಭಾ ಕರಂದ್ಲಾಜೆ, ಜ್ಯೋತಿರಾದಿತ್ಯ ಇನ್
10/07/2021, 07:44
ನವದೆಹಲಿ(reporterkarnataka news): ಕೇಂದ್ರ ಸಚಿವ ಸಂಪುಟದಿಂದ ಕೊಕ್ ನೀಡಲಾದ ಬಿಜೆಪಿ ಹಿರಿಯ ನಾಯಕ ಡಿ.ವಿ.ಸದಾನಂದ ಗೌಡ ಅವರನ್ನು ಪಕ್ಷದ ಫೇಸ್ ಬುಕ್ ಪೇಜ್ ನಿಂದ ಡಿಲಿಟ್ ಮಾಡಲಾಗಿದೆ. ಹಾಗೆ ಹೊಸ ಮುಖಗಳ ಸೇರ್ಪಡೆಯಾಗಿದೆ.
ಸಂಪುಟದಿಂದ ಕೈಬಿಟ್ಟವರಲ್ಲಿ ಡಾ. ಹರ್ಷವರ್ಧನ ಹಾಗೂ ಜಾವ್ಡೇಕರ್ ಅವರನ್ನು ಕೂಡ ಬಿಜೆಪಿ ಪೇಸ್ ಬುಕ್ ಪೇಜ್ ನಿಂದ ಕೈಬಿಡಲಾಗಿದೆ. ಜ್ಯೋತಿರಾದಿತ್ಯ ಸಿಂಧ್ಯಾ, ಶೋಭಾ ಕರಂದ್ಲಾಜೆ, ಅನುಪ್ರಿಯಾ ಸಿಂಗ್ ಪಟೇಲ್ ಹಾಗೂ ವೈಷ್ಣವ್ ಅವರನ್ನು ಫೇಸ್ ಬುಕ್ ಪೇಜ್ ಗೆ ಸೇರಿಸಲಾಗಿದೆ.
ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಪುನರ್ ರಚನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರಿ ಬದಲಾವಣೆ ಮಾಡಿದ್ದಾರೆ. ಸಾಮಾಜಿಕ ನ್ಯಾಯ ಒದಗಿಸುವ ಪ್ರಯತ್ನ ನಡೆದಿದೆ. ಸಂಪುಟದಲ್ಲಿ ಮೀಸಲಾತಿ ಪರಿಕಲ್ಪನೆಗೆ ಭಾರಿ ಒತ್ತು ನೀಡಲಾಗಿದೆ. 77 ಮಂತ್ರಿಗಳ ಸಂಪುಟದಲ್ಲಿ 52 ಮಂತ್ರಿಗಳನ್ನು ಮೀಸಲಾತಿ ಆಧಾರದಲ್ಲಿ ನೇಮಕ ಮಾಡಲಾಗಿದೆ. ಎಸ್ ಸಿ 12, ಎಸ್ ಟಿ 8, ಹಿಂದುಳಿದ ವರ್ಗ 27 ಹಾಗೂ ಅಲ್ಪಸಂಖ್ಯಾತರ 5 ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಸಂಪುಟದಲ್ಲಿ 11 ಮಂದಿ ಮಹಿಳೆಯರಿಗೆ ಸ್ಥಾನ ದೊರೆತಿದೆ.