1:29 AM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಬಿಜೆಪಿ – ಕಾಂಗ್ರೆಸ್ ಪೈಪೋಟಿ ನಡುವೆ ಹೊಸ ತೀರ್ಮಾನ: ಇತಿಹಾಸದಲ್ಲೇ ಮೊದಲ ಬಾರಿ ಸಂಚಾಲಕರಿಲ್ಲದೆ ರಥೋತ್ಸವ, ತೆಪ್ಪೋತ್ಸವ!

07/12/2024, 21:04

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಗೆ ಈ ಬಾರಿ ಹೊಸ ನಿರ್ಣಯವೊಂದು ತೆಗೆದುಕೊಳ್ಳಲಾಗಿದ್ದು ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ತೆಪ್ಪೋತ್ಸವ ಸಂಚಾಲಕರಿಲ್ಲದೆ ರಥೋತ್ಸವ ಮತ್ತು ತೆಪ್ಪೋತ್ಸವ ನಡೆಸಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.

ಶನಿವಾರ ಸಂಜೆ ಗ್ರಾಮೀಣಾಭಿವೃದ್ಧಿ ಸಭಾಂಗಣದಲ್ಲಿ ನಡೆದ ತೆಪ್ಪೋತ್ಸವ ಪೂರ್ವಭಾವಿ ಸಭೆಯಲ್ಲಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಆರ್’ಎಂ ಮಂಜುನಾಥ್ ಗೌಡರ ನೇತೃತ್ವದಲ್ಲಿ ಅದ್ದೂರಿ ತೆಪ್ಪೋತ್ಸವ ಹಾಗೂ ಎಳ್ಳಮಾವಾಸ್ಯೆ ಜಾತ್ರೆಯನ್ನು ನಡೆಸಲು ತೀರ್ಮಾನಿಸಲಾಯಿತು.
ಸಭೆ ಆರಂಭವಾದಾಗ ಸಭೆಯಲ್ಲಿ ಹೈಡ್ರಾಮಾ ಆರಂಭವಾಗಿತ್ತು. ಬಿಜೆಪಿ ಪರವಾಗಿ ಸೊಪ್ಪುಗುಡ್ಡೆ ರಾಘವೇಂದ್ರ ಅವರು ಚೆನ್ನಾಗಿ ಕೆಲಸ ಮಾಡಿದ್ದಾರೆ.

ಪಾರದರ್ಶಕವಾಗಿ ಲೆಕ್ಕ ಪತ್ರ ಕೊಟ್ಟಿದ್ದಾರೆ. ಅವರನ್ನೇ ಪುನಃ ಸಂಚಾಲಕರನ್ನಾಗಿ ಮಾಡಿ ಹಳೆ ಸಮಿತಿ ಜೊತೆಗೆ ಹೊಸಬರನ್ನು ಸೇರಿಸಿ ದಸರಾ ಕಾರ್ಯಕ್ರಮ ಆದಂತೆ ಆಗುವುದು ಬೇಡ ಎಂದು ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಕುಕ್ಕೆ ಪ್ರಶಾಂತ್ ಸಲಹೆ ನೀಡಿದರು.
ತಕ್ಷಣವೇ ಪಟ್ಟಣ ಪಂಚಾಯಿತಿ ಸದಸ್ಯ ಕಂಡಿಲ್ ರಾಘವೇಂದ್ರ ಶೆಟ್ಟಿ ತೆಪ್ಪೋತ್ಸವ ಮೊದಲು ಹುಟ್ಟಿದ್ದಾ? ಕುಕ್ಕೆ ಪ್ರಶಾಂತ್ ಮೊದಲು ಹುಟ್ಟಿದ್ದಾ? ತಿಳಿದಿಲ್ಲ. ನಾವು ಗೌರವಯುತವಾಗಿ ಸಭೆಯಲ್ಲಿ ಮಾತನಾಡುತ್ತಿದ್ದೇವೆ ಅಂದ ಮೇಲೆ ನೀವು ಹಾಗೆ ಮಾತನಾಡಬೇಕು ಎಂದು ಹೇಳಿದಾಗ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ನಡುವೆ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ತೀರ್ಥಹಳ್ಳಿ ಇತಿಹಾಸದಲ್ಲಿ ಮೊದಲ ಬಾರಿ ಹೀಗೆ ಗೊಂದಲ ಆಗುತ್ತಿದೆ. ಯಾರೋ ಒಬ್ಬರಿಂದ ಪ್ರತ್ಯೇಕ ಆಗುವುದು ಬೇಡ, ನಾವು ಬೇರೆ ನೀವು ಬೇರೆ ಅನ್ನುವುದು ಬೇಡ. ದೇವಸ್ಥಾನದ ಕಾರ್ಯಕ್ರಮಕ್ಕೆ ಹುಳಿ ಹಿಂಡುವ ಕೆಲಸ ಆಗುವುದು ಬೇಡ. ಈ ಬಾರಿ ನನ್ನ ಹಾಗೂ ಆರ್ ಎಂ ಮಂಜುನಾಥ್ ಗೌಡರ ನೇತೃತ್ವದಲ್ಲಿ ಹಾಗೂ ತಹಸೀಲ್ದಾರ್, ಪಪಂ ಮುಖ್ಯಾಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆಗೆ ಹಳೆ ಸಮಿತಿ ಜೊತೆಗೆ ಎಳ್ಳಮಾವಾಸ್ಯೆ ಜಾತ್ರೆ ಅದ್ದೂರಿಯಾಗಿ ನಡೆಯಲಿದೆ ಎಂದರು.
ಆರ್’ಎಂ ಮಂಜುನಾಥ್ ಗೌಡ ಮಾತನಾಡಿ ಇಲ್ಲಿ ಅಭಿಪ್ರಾಯ ಹೇಳಲು ಎಲ್ಲರಿಗೂ ಮುಕ್ತ ಅವಕಾಶ ಇದೆ. ಅವರು ಮಾತನಾಡಿದಾಗ ನೀವು ಚಪ್ಪಾಳೆ ಹೊಡೆಯುವುದು, ನೀವು ಮಾತನಾಡಿದಾಗ ಅವರು ಚಪ್ಪಾಳೆ ಹೊಡೆಯುವುದಕ್ಕೆ ಇದು ರಾಜಕಾರಣ ಸಭೆಯಲ್ಲ, ದೇವಸ್ಥಾನಕ್ಕೆ ಸಂಬಂಧಪಟ್ಟ ರಾಮೇಶ್ವರ ತೆಪ್ಪೋತ್ಸವ ಪೂರ್ವ ಬಾವಿ ಸಭೆ ಎನ್ನುತ್ತಿದ್ದಂತೆ ಸಭೆ ಮದ್ಯ ಒಬ್ಬರು ನಿಮ್ಮವರು ಹೊಡೆದಿದ್ದು ಮೊದಲು ಚಪ್ಪಾಳೆ ಎನ್ನುತ್ತಿದ್ದಂತೆ ಆರ್ ಎಂ ಮಂಜುನಾಥ್ ಗೌಡ ಗರಂ ಆಗಿ ನಾನೇ ಈ ಬಾರಿ ಜಾತ್ರೆ ಮಾಡುತ್ತೇನೆ, ನನಗೂ ಅನುಭವ ಇದೆ ಎಂದು ಆರ್ಭಟಿಸಿದಾಗ ಇಡೀ ಸಭೆ ಮೌನವಾಯಿತು.
ಅಧಿಕಾರಿಗಳೇ ಜಾತ್ರೆ ನಡೆಸಲಿ ನಾವು ಅವರಿಗೆ ಸಹಕಾರ ನೀಡೋಣ. ಈ ಮನಸ್ತಾಪ ಎಲ್ಲಾ ಬೇಡ,ಶಾಸಕರು ಇದ್ದಾರೆ ತೀರ್ಮಾನ ಮಾಡುತ್ತಾರೆ. ಇದು ರಾಜಕಾರಣ ವಿಚಾರ ಅಲ್ಲ. ಯಾರೇ ಆದರೂ ಇದು ನಮ್ಮ ಊರಿನ ಜಾತ್ರೆ ಅದನ್ನು ಎಲ್ಲರು ಸೇರಿ ಮಾಡಬೇಕು. ಅದನ್ನು ಬಿಟ್ಟು ಹೀಗೆ ಗಲಾಟೆ ಮಾಡುವುದಾದರೆ ಅಧಿಕಾರಿಗಳೇ ಜಾತ್ರೆ ನಡೆಸುತ್ತಾರೆ ಎಂದು ಗರಂ ಆದರು.
ಹಿರಿಯ ಮುಖಂಡರ ಹೊಂದಾಣಿಕೆ ಕಿರಿಯರಲ್ಲಿ ಇಲ್ಲವೇ ..!?
ಶಾಸಕ ಆರಗ ಜ್ಞಾನೇಂದ್ರ ಹಾಗೂ ಆರ್ ಎಂ ಮಂಜುನಾಥ್ ಗೌಡರ ಮಾತಿನ ಶೈಲಿ ಸಭೆಯಲ್ಲಿದ್ದವರನ್ನು ಬೆರಗುಗೊಳಿಸುವಂತೆ ಮಾಡಿತು. ಸಭೆ ಆರಂಭದಲ್ಲಿ ಕಿರಿಯ ಕಾರ್ಯಕರ್ತರಲ್ಲಿರುವ ಹೊಂದಾಣಿಕೆ ಹೇಗೆ ಎಂಬುದು ತಿಳಿದರೆ,ಅದನ್ನೆಲ್ಲಾ ಸರಿಪಡಿಸುವ ಮೂಲಕ ಜಾತ್ರೆಯ ಸ್ಪಷ್ಟ ಚಿತ್ರಣ ಕೊಟ್ಟ ಹಿರಿಯ ರಾಜಕಾರಣಿಗಳನ್ನು ನೋಡಿದರೆ ಹಿರಿಯ ಮುಖಂಡರ ಹೊಂದಾಣಿಕೆ ಕಿರಿಯರಲ್ಲಿ ಇಲ್ಲವೇ ..!? ಎಂಬ ಅನುಮಾನ ಸಹ ಮೂಡಿತು.

ಇತ್ತೀಚಿನ ಸುದ್ದಿ

ಜಾಹೀರಾತು