ಇತ್ತೀಚಿನ ಸುದ್ದಿ
ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಕೂಟದಲ್ಲಿ ಚಿನ್ನದ ಪದಕಗಳನ್ನು ಗೆದ್ದ ಬಜಪೆಯ ಡ್ರಾಗನ್ ಕಾಂಬ್ಯಾಟ್ ಸ್ಪೋರ್ಟ್ಸ್ ಅಕಾಡೆಮಿ ಸದಸ್ಯರು
02/07/2025, 13:25

ಮಂಗಳೂರು (reporterkarnataka.com)
ಮಹಾರಾಷ್ಟ್ರದ ಮಿರಾ ರೋಡ್‌ನ ಮಿಹಿರ್ ಸೇನ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಇತ್ತೀಚೆಗೆ ನಡೆದ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್‌ನ ಪಿಎಂಎಲ್ ನ್ಯಾಷನಲ್ ಕ್ರೀಡಾಕೂಟದಲ್ಲಿ ಮಂಗಳೂರಿನ ಮಾರ್ಷಲ್ ಆರ್ಟ್ಸ್ ಪಟುಗಳು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಸುಜಯ್ ಪೂಜಾರಿ, ಸುಜನ್ ಪೂಜಾರಿ, ಪ್ರಕಾಶ್ ರಾಥೋಡ್, ಆಕಾಶ್ ರಾಥೋಡ್, ಗಗನ್ ಶೆಟ್ಟಿ ಕಾರ್ತಿಕ್ ಅಂಚನ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವರು ಬಜಪೆಯ ಡ್ರಾಗನ್ ಕಾಂಬ್ಯಾಟ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಕರಣ್ ದೇಸಾಯಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.