ಇತ್ತೀಚಿನ ಸುದ್ದಿ
ಬಿರುಸಿನ ಮಳೆಗೆ ಕಡಿದು ಹೋದ ಕಂದಾವರ ಗ್ರಾಪಂ ರಸ್ತೆ: ಶಾಸಕ ಡಾ.ಭರತ್ ಶೆಟ್ಟಿ ಭೇಟಿ; ತಕ್ಷಣ ಕ್ರಮಕ್ಕೆ ಸೂಚನೆ
22/07/2024, 22:45

ಸುರತ್ಕಲ್(reporterkarnataka.com): ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪನಾ ಕಾಲೇಜು ಕಡೆಯಿಂದ ಸುಂಕದಕಟ್ಟೆ ಕಡೆಗೆ ಹೋಗುವ ಸಂಪರ್ಕ ರಸ್ತೆಯು ಭೀಕರ ಮಳೆಗೆ ಕಡಿದು ಹೋಗಿದ್ದು , ಸ್ಥಳೀಯ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಸ್ಥಳಕ್ಕೆ ಆಗಮಮಿಸಿ ಪರೀಶಿಲಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರು,ಕೂಡಲೇ ಇದರ ಬಗ್ಗೆ, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಜೊತೆ ಮಾತಾನಾಡಿ, ಸಮಸ್ಯೆಯನ್ನು ಬಗೆಹರಿಸಲು ಸೂಚಿಸಿದರು.
ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗುರುಪುರ ಮಹಾ ಶಕ್ತಿಕೇಂದ್ರದ ಅಧ್ಯಕ್ಷರು, ಮಂಡಲದ ರೈತಾ ಮೋರ್ಚಾದ ಅಧ್ಯಕ್ಷರು, ಬಿಜೆಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.