ಇತ್ತೀಚಿನ ಸುದ್ದಿ
ಸಾಣೂರು: ಬೈಕ್ ಅಪಘಾತ; ಇಬ್ಬರಿಗೆ ತೀವ್ರ ಗಾಯ; ಮಣಿಪಾಲ ಆಸ್ಪತ್ರೆಗೆ ದಾಖಲು
07/12/2021, 08:55

ಕಾರ್ಕಳ(reporterkarnataka.com);
ಸಾಣೂರು ಪರ್ಪಲೆ ತಿರುವಿನ ನಡೆದ ರಸ್ತೆ ಅಪಘಾತದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಕಸಬಾದ ತೆಳ್ಳಾರ್ ಕೋಲ್ ಪಲ್ಕೆ ಶಬರಿ ಆಶ್ರಮದ ನಿಶಾಂತ್ ಹಾಗೂ ಶಾಶ್ವತ್ ಎಂಬುವರು ಬೈಕ್ ನಲ್ಲಿ ಸಂಚರಿಸುತ್ತಿದ್ದಾಗ ಈ ದುರ್ಘಟನೆ ನಡೆಯಿತು.
ಪಡುಬಿದ್ರೆಯಿಂದ ಕಾರ್ಕಳಕ್ಕೆ ಬರುತಿದ್ದಾಗ ಸಾಣೂರು ಪರ್ಪಲೆ ತಿರುವಿನ ಬಳಿ ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಪರಿಣಾಮ ನಿಶಾಂತನ ತಲೆಯ ಹಿಂಬದಿಗೆ ತೀವ್ರ ತರಹದ ಗಾಯಗಳಾಗಿವೆ. ಶಾಶ್ವತ್ ನಿಗೆ ಬಲಗಾಲಿಗೆ, ಎಡಕೈಗೆ ತರಚಿದ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಕಳ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.