ಇತ್ತೀಚಿನ ಸುದ್ದಿ
ಬೈಕಂಪಾಡಿ: 120 ವರ್ಷಕ್ಕೂ ಹಳೆಯ ಐತಿಹಾಸಿಕ ಶಾಲೆಗೆ ನೂತನ ಕಟ್ಟಡ ನಿರ್ಮಿಸಲು ಶಿಲಾನ್ಯಾಸ
10/09/2024, 22:02
ಸುರತ್ಕಲ್(reporterkarnataka.com): ಬೈಕಂಪಾಡಿ ಮೊಗವೀರ ಮಹಾಸಭಾದ ಆಡಳಿತಕ್ಕೊಳಪಟ್ಟಿರುವ 120 ವರ್ಷಕ್ಕೂ ಹಿಂದೆ ನಿರ್ಮಿಸಿರುವ ಐತಿಹಾಸಿಕ ಶಾಲೆಯ ಪುನರ್ ನವೀಕರಣ ಸಲುವಾಗಿ ನೂತನ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಸಭಾ ಕಾರ್ಯಕ್ರಮ ಮಂಗಳವಾರ ಬೈಕಂಪಾಡಿ ಇಂದಿರಾ ಮಾಧವ ಸಭಾಂಗಣದಲ್ಲಿ ನೆರವೇರಿತು.
ಮನವಿ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಶಾಸಕರಾದ ಡಾ. ಭರತ್ ಶೆಟ್ಟಿ ವೈ ಅವರು ಬೈಕಂಪಾಡಿ ಶಾಲೆಯನ್ನ ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತಿಸಲು ಮನವಿಯನ್ನ ಈಗಾಗಲೇ ನೀಡಲಾಗಿದೆ.
ಶಿಕ್ಷಣ ಮಂತ್ರಿಗಳಲ್ಲಿ ಮಾತುಕತೆ ನಡೆಸಿ ಹೊಸ ಕಟ್ಟಡ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಆಂಗ್ಲ ಮಾಧ್ಯಮವನ್ನು ಕೂಡ ಆರಂಭಿಸುವ ಸಲುವಾಗಿ ಬೇಕಾದ ಅನುಮತಿಯನ್ನು ಪಡೆಯಲಾಗುವುದು ಎಂದು ನುಡಿದರು.
ಪ್ರಸ್ತುತ ಸನ್ನಿವೇಶದಲ್ಲಿ 450 ಮಕ್ಕಳು ಸರಕಾರಿ ಶಾಲೆಗಳಲ್ಲಿ ಕಲಿಕೆಯಲ್ಲಿ ಕಂಡುಬರುವುದು ಬಹು ಅಪರೂಪವಾಗಿದೆ.
ಬೈಕಂಪಾಡಿಯಲ್ಲಿ ವಲಸೆ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿದ್ದು ಮೊಗವೀರ ಮಹಾಸಭಾ
ಈ ಒಂದು ಸೇವೆಯು ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನಿತಾ, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ರಾಮಚಂದರ್ ಬೈಕಂಪಾಡಿ,ಮಹಾಸಭಾ ಅಧ್ಯಕ್ಷ ವಸಂತ ಅಮೀನ್,ಮನಪಾ ಸದಸ್ಯರಾದ ಸುಮಿತ್ರ ಕರಿಯ,
ಶಿಕ್ಷಣ ತಜ್ಞವಾಸುದೇವ ಐತಾಳ್ ಪಿ.,ವಿವಿಧ ಕಂಪನಿಯ ಅಧಿಕಾರಿಗಳು,ಮಹಾಸಭಾದ ಗುರಿಕಾರರು,ಸದಸ್ಯರು ಉಪಸ್ಥಿತರಿದ್ದರು.