ಇತ್ತೀಚಿನ ಸುದ್ದಿ
ಭೂಕಂಪನದಿಂದ ಹಾನಿಗೀಡಾದ ಮನೆಗೆ ಸಚಿವ ಆರ್. ಅಶೋಕ್ ಭೇಟಿ: 5 ಲಕ್ಷ ರೂ. ಪರಿಹಾರದ ಭರವಸೆ
07/07/2022, 20:19

ಮಂಗಳೂರು(reporterkarnataka.com): ಕೆಲದಿನಗಳ ಹಿಂದೆ ಭೂಕಂಪನದಿಂದ ಹಾನಿಗೊಳಪಟ್ಟ ಸುಳ್ಯ ತಾಲೂಕಿನ ವಸಂತ ಭಟ್ ಅವರ ಮನೆಗೆ ಕಂದಾಯ ಸಚಿವ ಆರ್. ಅಶೋಕ್ ಭೇಟಿ ನೀಡಿ ಹಾನಿ ಬಗ್ಗೆ ಪರಿಶೀಲನೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಸುಳ್ಯ ತಾಲೂಕು ತಹಶೀಲ್ದಾರ್ ಅನಿತಾ ಲಕ್ಷ್ಮೀ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 45 ಸಾವಿರದ ಚೆಕ್ ವಿತರಿಸಿದರು. 5 ಲಕ್ಷ ರೂ.ಗಳ ಪರಿಹಾರ ಒದಗಿಸುವ ಭರವಸೆ ನೀಡಿದರು.