ಇತ್ತೀಚಿನ ಸುದ್ದಿ
ಭವಿಷ್ಯದ ನಿರ್ಮಾಣ: ಅಕ್ಷಯ ಪಾತ್ರ ಫೌಂಡೇಶನ್ ಮತ್ತು ಎನ್ಟಿಟಿ ಲಿಮಿಟೆಡ್ ವತಿಯಿಂದ ಬೆಂಗಳೂರಿನ ಸರ್ಕಾರಿ ಶಾಲೆಗೆ ಅಡಿಪಾಯ
01/07/2022, 11:28
ಶಾಲೆಯು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುತ್ತಿದೆ ಮತ್ತು 7,500 ಚದರ ಅಡಿ ವಿಸ್ತೀರ್ಣ ಹೊಂದಲಿದೆ
• ರೂ. 2 ಕೋಟಿಯ ಯೋಜನೆಯು 2023 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
• ಶಾಲೆಯು ಮಧ್ಯಾಹ್ನದ ಊಟದ ಬಳಕೆಗಾಗಿ ಮೀಸಲಾದ ಬಹುಪಯೋಗಿ ಸಭಾಂಗಣ, ಆಂಫಿಥಿಯೇಟರ್ ಮತ್ತು ಸೌರಶಕ್ತಿ ವ್ಯವಸ್ಥೆಯನ್ನು ಹೊಂದಿರುತ್ತದೆ
ಬೆಂಗಳೂರು(reporterkarnataka.com): ಪ್ರಮುಖ ಐಟಿ ಮೂಲಸೌಕರ್ಯ ಮತ್ತು ಸೇವಾ ಸಂಸ್ಥೆಯಾದ ಎನ್ಟಿಟಿ ಲಿಮಿಟೆಡ್, ಅಕ್ಷಯ ಪಾತ್ರ ಫೌಂಡೇಶನ್ ಜೊತೆಗೆ ಶಿಕ್ಷಣದ ಮೂಲಕ ತರಗತಿಯ ಹಸಿವು ಮತ್ತು ಅಪೌಷ್ಟಿಕತೆಯನ್ನು ಪರಿಹರಿಸುವ ಸಾಮೂಹಿಕ ಪ್ರಯತ್ನಗಳನ್ನು ಮುಂದುವರಿಸುವ ಸಲುವಾಗಿ ಗುರುವಾರ ಜೂನ್ 30, 2022ರಂದು ಬೆಂಗಳೂರಿನ ಲಕ್ಷ್ಮೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೂಮಿಪೂಜೆ ನೆರವೇರಿಸಿ ಶಂಕುಸ್ಥಾಪನೆ ನೆರವೇರಿಸಿದೆ.
ಎರಡೂ ಸಂಸ್ಥೆಗಳು 2023ರ ಅಂತ್ಯದ ವೇಳೆಗೆ ಸರ್ಕಾರದಿಂದ ಮಂಜೂರಾದ ನಿವೇಶನದಲ್ಲಿ ನಿರ್ಮಿಸಲಾಗುತ್ತಿರುವ ಶಾಲೆಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿವೆ. 7,500 ಚದರ ಅಡಿಗಳಲ್ಲಿ ಹರಡಿರುವ ಸುಮಾರು ರೂ. 2 ಕೋಟಿ ಅಂದಾಜು ವೆಚ್ಚದ ಈ ಯೋಜನೆಯು ಬಹು ವಿಶಿಷ್ಟ ಲಕ್ಷಣಗಳನ್ನು ಹೊಂದಿರುತ್ತದೆ. ಅವುಗಳೆಂದರೆ ಬಹು- ಉದ್ದೇಶದ ಸಭಾಂಗಣ, ಮಧ್ಯಾಹ್ನದ ಊಟದ ಬಳಕೆಗಾಗಿ ಮೀಸಲಾದ ಸ್ಥಳ, ಆಂಫಿಥಿಯೇಟರ್, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಸೌರಶಕ್ತಿ ಮತ್ತು ಮಳೆನೀರು ಕೊಯ್ಲು ವ್ಯವಸ್ಥೆ. ಯೋಜಿಸಲಾದ ಇತರ ಸೌಲಭ್ಯಗಳೆಂದರೆ ನೀರು ಶುದ್ಧೀಕರಿಸುವ ವ್ಯವಸ್ಥೆಗಳು, ತರಗತಿಯ ಮೂಲಸೌಕರ್ಯ, ಕ್ರೀಡಾ ಮೈದಾನ ಮತ್ತು ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ.
ಕಾರ್ಯಕ್ರಮದಲ್ಲಿ ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಮಂಜುನಾಥ್ ಆರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ
ಲೋಹಿತೇಶ್ವರ ರೆಡ್ಡಿ (ಬೆಂಗಳೂರು- ಉತ್ತರ),ಅಶ್ವಥ್ ನಾರಾಯಣ, ಬ್ಲಾಕ್ ಶಿಕ್ಷಣಾಧಿಕಾರಿ (ಬೆಂಗಳೂರು ಉತ್ತರ- 4), ಸುನಿಲ್ ಕಿಶೋರ್, ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ, ಎನ್ಟಿಟಿ,ದಿಲೀಪ್ ಕುಮಾರ್, ಮುಖ್ಯ ಡಿಜಿಟಲ್ ಮತ್ತು ಜಾಗತಿಕ ವ್ಯಾಪಾರ ಸೇವೆಗಳ ಅಧಿಕಾರಿ, ಎನ್ಟಿಟಿ, ಅಕ್ಷಯ ಪಾತ್ರ ಫೌಂಡೇಶನ್ ಸಿಎಸ್ಸಿಓ ಶ್ರೀ ಅನಂತ್ ಅರೋರಾ ಮತ್ತು ಅಕ್ಷಯ ಪಾತ್ರ ಫೌಂಡೇಶನ್ ಸಿಎಫ್ಓ ಬಾಲಾಜಿ ಎಂ.ಎನ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಆರ್.ಮಂಜುನಾಥ್ ಅವರು, ಈ ಆಧುನಿಕ ಸರ್ಕಾರಿ ಶಾಲೆಯ ನಿರ್ಮಾಣಕ್ಕೆ ಮಂದಾಗಿರುವ ಎನ್ಟಿಟಿ ಮತ್ತು ಅಕ್ಷಯ ಪಾತ್ರೆಗೆ ಬೆಂಗಳೂರು ಕೃತಜ್ಞತೆ ಸಲ್ಲಿಸುತ್ತದೆ ಎಂದು ಹೇಳಿದರು. ಈ ಕಾರ್ಯಕ್ಕೆ ಅಗತ್ಯವಿರುವ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.
ಸಹಯೋಗದ ಕುರಿತು ಮಾತನಾಡಿದ ಎನ್ಟಿಟಿಯ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸುನೀಲ್ ಕಿಶೋರ್ ಅವರು, “ಗುಣಮಟ್ಟದ ಶಿಕ್ಷಣದ ಪ್ರವೇಶವು ಅವರ ಸಾಮಾಜಿಕ-ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಪ್ರತಿ ಮಗುವಿನ ಮೂಲಭೂತ ಹಕ್ಕಾಗಿದೆ. ಎನ್ಟಿಟಿಯಲ್ಲಿ, ಇತ್ತೀಚಿನ ತಂತ್ರಜ್ಞಾನಗಳು ಮತ್ತು ಡಿಜಿಟಲ್ ಒಳಗೊಳ್ಳುವಿಕೆಯೊಂದಿಗೆ ಸುಸಜ್ಜಿತವಾದ ಸಮಗ್ರ ಪರಿಸರವು ಆರ್ಥಿಕವಾಗಿ ದುರ್ಬಲ ವರ್ಗಗಳ ಮಕ್ಕಳು ಕೈಗೆಟುಕುವ ಅಥವಾ ಲಭ್ಯತೆಯ ಸಮಸ್ಯೆಗಳಿಂದಾಗಿ ಅವಕಾಶಗಳನ್ನು ಕಳೆದುಕೊಳ್ಳದ ಜಗತ್ತನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ನಾವು ದೃಢವಾಗಿ ನಂಬುತ್ತೇವೆ. ನಮ್ಮ ಅಸ್ತಿತ್ವದಲ್ಲಿರುವ ಶಿಕ್ಷಣ ಪರಿಸರ ವ್ಯವಸ್ಥೆಗೆ ಸ್ಪಷ್ಟವಾದ ಪರಿಣಾಮವನ್ನು ತರುವುದು ನಮ್ಮ ತತ್ವವಾಗಿದೆ ಮತ್ತು ನಮ್ಮ ಸಾಮಾಜಿಕ ಪ್ರಭಾವದ ಉಪಕ್ರಮವನ್ನು ಬಲಪಡಿಸಲು ಅಕ್ಷಯ ಪಾತ್ರ ಫೌಂಡೇಶನ್ನೊಂದಿಗೆ ಪಾಲುದಾರಿಕೆ ಹೊಂದಲು ನಾವು ಸಂತೋಷಪಡುತ್ತೇವೆ ಮತ್ತು ಈ ದೇಶದ ಭವಿಷ್ಯದ ಮಕ್ಕಳಿಗೆ ಸುರಕ್ಷಿತ ಸ್ಥಳವನ್ನು ಒದಗಿಸುತ್ತೇವೆ” ಎಂದು ಹೇಳಿದರು.
1963 ರಲ್ಲಿ ಸ್ಥಾಪಿತವಾದ ಶಾಲೆಯು ಪ್ರಸ್ತುತ ಹಳೆಯ ಕಟ್ಟಡದಲ್ಲಿದೆ ಮತ್ತು ದುರ್ಬಲ ಸಮುದಾಯಗಳು ಮತ್ತು ಕಡಿಮೆ ಆದಾಯದ ಕುಟುಂಬಗಳ 201 ಮಕ್ಕಳಿಗೆ ಶಿಕ್ಷಣವನ್ನು ಒದಗಿಸುತ್ತದೆ.
ಈ ಸಂದರ್ಭದಲ್ಲಿ, ಅಕ್ಷಯ ಪಾತ್ರ ಫೌಂಡೇಶನ್ನ ಸಿಇಒ ಶ್ರೀಧರ್ ವೆಂಕಟ್ ಮಾತನಾಡಿ, “ಭಾರತದಲ್ಲಿ ಯಾವುದೇ ಮಗು ಹಸಿವಿನಿಂದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ನಮ್ಮ ದೃಷ್ಟಿಕೋನಕ್ಕೆ ಬೆಂಬಲವನ್ನು ಪುನರುಚ್ಚರಿಸಿದ ಎನ್ಟಿಟಿ ಲಿಮಿಟೆಡ್ಗೆ ನಾವು ಕೃತಜ್ಞರಾಗಿರುತ್ತೇವೆ. ಈ ಸಹಯೋಗವು ದುರ್ಬಲ ಸಮುದಾಯಗಳಿಗೆ ಸೇರಿದ ಮಕ್ಕಳಿಗೆ ಸಮಗ್ರ ಅಧ್ಯಯನದ ಸ್ಥಳವನ್ನು ಒದಗಿಸಲು ನಮಗೆ ಬೆಂಬಲ ನೀಡುವುದಲ್ಲದೆ, ನಮ್ಮ ದೇಶಕ್ಕೆ ಸಂತೋಷದ ಭವಿಷ್ಯವನ್ನು ಪೋಷಿಸುವ ಅತ್ಯುತ್ತಮ ವಿಧಾನಗಳಲ್ಲಿ ಶಿಕ್ಷಣವು ಒಂದು ಎಂಬ ನಮ್ಮ ನಂಬಿಕೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಎಲ್ಟಿಟಿ ಲಿಮಿಟೆಡ್ ಜೊತೆ ಪಾಲುದಾರಿಕೆ ಹೊಂದಿರುವುದು ಗೌರವ ಎಂಬ ಭಾವನೆಯನ್ನು ನಾವು ಹೊಂದಿದ್ದೇವೆ ಮತ್ತು ಈ ಸಹಯೋಗವು ಮುಂಬರುವ ಹಲವು ವರ್ಷಗಳವರೆಗೆ ತಳ ಮಟ್ಟದಲ್ಲಿ ಪ್ರಭಾವ ಬೀರುವುದನ್ನು ಮುಂದುವರಿಸುತ್ತದೆ ಎಂದು ಭಾವಿಸುತ್ತೇವೆ” ಎಂದು ಹೇಳಿದರು.
ಈ ಯೋಜನೆಯು ವೈಯಕ್ತಿಕವಾಗಿ ಶಾಲಾ ಹಂತಗಳಲ್ಲಿ ಎದುರಿಸುತ್ತಿರುವ ವಿವಿಧ ಸವಾಲುಗಳನ್ನು ಎದುರಿಸಲು ಕೇಂದ್ರೀಕರಿಸುವ ಒಂದು ಉಪಕ್ರಮವಾದ ವಿದ್ಯಾರ್ಥಿ ಪರಿವರ್ತನೆಗಾಗಿ ರಾಷ್ಟ್ರೀಯ ಪ್ರಯತ್ನ (ಎನ್ಇಎಸ್ಟಿ) ಅಡಿಯಲ್ಲಿ ಅಕ್ಷಯ ಪಾತ್ರದ ಶಾಲಾ ಪುನರುಜ್ಜೀವನ ಕಾರ್ಯಕ್ರಮದ ಒಂದು ಭಾಗವಾಗಿದೆ. ಪ್ರತಿ ಶಾಲೆಯು ತನ್ನದೇ ಆದ ವಿಶಿಷ್ಟ ಸವಾಲುಗಳನ್ನು ಹೊಂದಿದೆ ಮತ್ತು ಶಾಲೆಯ ಆಡಳಿತದ ಪರಿಣತಿಯೊಂದಿಗೆ ಈ ಸವಾಲುಗಳನ್ನು ಎದುರಿಸಲು ಪರಿಹಾರಗಳನ್ನು ಕಸ್ಟಮೈಸ್ ಮಾಡಬೇಕಾಗುತ್ತದೆ ಎಂದು ಫೌಂಡೇಶನ್ ದೃಢವಾಗಿ ನಂಬುತ್ತದೆ. ಪೋಷಕರು ಮತ್ತು ಸಮುದಾಯದ ಸದಸ್ಯರನ್ನು ಬಲವಾದ ಪಾತ್ರಗಳಲ್ಲಿ ತೊಡಗಿಸಿಕೊಳ್ಳಲು ಶಾಲಾ ಮಟ್ಟದಲ್ಲಿ ಸಮುದಾಯ ಹೂಡಿಕೆಯ ಮೇಲೆ ಕಾರ್ಯಕ್ರಮವು ಗಮನ ಕೇಂದ್ರೀಕರಿಸುತ್ತದೆ.
ಈ ಉಪಕ್ರಮದ ಉದ್ದೇಶವು ಮೂಲಸೌಕರ್ಯ ಸುಧಾರಣೆಗಳು, ಶಿಕ್ಷಣದ ಗುಣಮಟ್ಟ ಮತ್ತು ಸಮುದಾಯದ ಒಳಗೊಳ್ಳುವಿಕೆಯ ಮೇಲೆ ಕೇಂದ್ರೀಕರಿಸುವ ಮೂಲಕ ಶಿಕ್ಷಣದ ಪರಿಣಾಮವನ್ನು ಹೆಚ್ಚಿಸುವ ವಾತಾವರಣವನ್ನು ಸೃಷ್ಟಿಸುವುದು. ಭವಿಷ್ಯದಲ್ಲಿ ಇತರ ಶಾಲೆಗಳಿಗೆ ಟೆಂಪ್ಲೇಟ್ ಆಗಿ ಕಾರ್ಯನಿರ್ವಹಿಸುವ ಸಮರ್ಥನೀಯ ಮತ್ತು ಪುನರಾವರ್ತಿಸಬಹುದಾದ ಮಾದರಿಯನ್ನು ರಚಿಸಲು ಇದು ಫೌಂಡೇಶನ್ನ ಪ್ರಯತ್ನವಾಗಿದೆ.
ಈ ಯೋಜನೆಯು ಅಕ್ಷಯ ಪಾತ್ರ ಮತ್ತು ಎನ್ಟಿಟಿ ಲಿಮಿಟೆಡ್ನ ಹಲವಾರು ಸಹಯೋಗಗಳಲ್ಲಿ ಒಂದಾಗಿದೆ. ಈ ವರ್ಷದ ಆರಂಭದಲ್ಲಿ, ಫೌಂಡೇಶನ್ನ ಡಿಜಿಟಲ್ ಶಿಕ್ಷಣ ಉಪಕ್ರಮ ಪ್ರಾರಂಭದ ಅಂಗವಾಗಿ ಬಸವನಗುಡಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಸರ್ಕಾರಿ ಬಾಲಕಿಯರ ಪಿಯುಸಿಯ 235 ವಿದ್ಯಾರ್ಥಿಗಳಿಗೆ ಆಂಡ್ರಾಯ್ಡ್ ಟ್ಯಾಬ್ಲೆಟ್ಗಳನ್ನು ನೀಡಲು ಎರಡೂ ಸಂಸ್ಥೆಗಳು ಕೈಜೋಡಿಸಿವೆ. ಅಕ್ಷಯ ಪಾತ್ರ ಫೌಂಡೇಷನ್, ಕಾರ್ಪೊರೇಟ್ ದಾನಿಗಳ ಬೆಂಬಲದೊಂದಿಗೆ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ, ಆಧುನಿಕ ಶಿಕ್ಷಣವನ್ನು ಉಚಿತವಾಗಿ ಪಡೆಯಲು ಅವಕಾಶವನ್ನು ಒದಗಿಸುವ ಮೂಲಕ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡಲು ಮತ್ತು ಮತ್ತಷ್ಟು ಡಿಜಿಟಲ್ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಈ ಉಪಕ್ರಮವನ್ನು ಜಾರಿಗೆ ತಂದಿದೆ.