12:35 AM Sunday4 - January 2026
ಬ್ರೇಕಿಂಗ್ ನ್ಯೂಸ್
ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ; ಕಲಾವಿದರು,ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆ ಕಲ್ಪಿಸಿದೆ: ಮುಖ್ಯಮಂತ್ರಿ Kodagu | ಸಾರ್ವಜನಿಕವಾಗಿ ಬಂದೂಕು ಪ್ರದರ್ಶನ: 3 ಮಂದಿ ಆರೋಪಿಗಳ ಬಂಧನ ಸೋಶಿಯಲ್ ಮೀಡಿಯಾ ಪವರ್: 60 ವರ್ಷದ ವೃದ್ದನನ್ನು ಕುಟುಂಬದೊಂದಿಗೆ ಮತ್ತೆ ಒಂದಾಗಿಸಿದ ರೀಲ್ಸ್! ಜಗತ್ತಿನ 3ನೇ ಅತಿ ಎತ್ತರದ ಮೌಂಟ್ ಕೆನ್ಯಾ ಪರ್ವತ ಏರಿದ ಮಂಗಳೂರು ಮೂಲದ… Bangalore | ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನಕ್ಕೆ ಸಂಪುಟದ ಸಮ್ಮತಿ: 153 ಎಕರೆ… ಬಳ್ಳಾರಿ ಫೈಯರಿಂಗ್ | ಕೊಲೆ ಪ್ರಕರಣ ದಾಖಲಿಸಿ ಶಾಸಕರ ಕೂಡಲೇ ಬಂಧಿಸಿ: ಆರ್.ಅಶೋಕ್… ಬಳ್ಳಾರಿ ಗಲಭೆ ಸಿಬಿಐ ಅಥವಾ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಲಿ: ಮಾಜಿ ಸಿಎಂ… ಬಳ್ಳಾರಿ ಅಹಿತಕರ ಘಟನೆಯ ನ್ಯಾಯಾಂಗ ತನಿಖೆ ನಡೆಯಲಿ: ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹ 6322 ಪರಿಶಿಷ್ಟ ಕುಟುಂಬಗಳಿಗೆ ಕೊಳವೆಬಾವಿ ಭಾಗ್ಯ: ಕಾಮಗಾರಿ ಚುರುಕುಗೊಳಿಸಲು ನೀರಾವರಿ ಸಚಿವರ ಖಡಕ್… Kodagu | ಸೋಮವಾರಪೇಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆ: ಕೋವಿ ಸಹಿತ ಮೂವರ…

ಇತ್ತೀಚಿನ ಸುದ್ದಿ

ಕೊಡಗಿನ ಭವಾನಿ ಭಾರತದ ನಂ1 ಶ್ರೇಯಾಂಕದ ಅಂತಾರಾಷ್ಟ್ರೀಯ ಕ್ರಾಸ್ ಕಂಟ್ರಿ ಸ್ಕೀಯಿಂಗ್ ಕ್ರೀಡಾಪಟು

04/01/2026, 20:43

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmal.com

ಕೊಡಗು ಜಿಲ್ಲೆಯು ಕರ್ನಾಟಕದ ಕಾಶ್ಮೀರ, ಕಿತ್ತಳೆಯ ನಾಡು ಕಾಫಿಯ ಬೀಡು ಭಾರತ ದೇಶಕ್ಕೆ ಮೊಟ್ಟಮೊದಲ ಸೇನಾ ದಂಡ ನಾಯಕನ ನೀಡಿದ ಮಣ್ಣು. ಭಾರತ ದೇಶದಲ್ಲಿ ವಿವಿಧ ಕ್ರೀಡೆಗಳಿಗೆ ಹಲವಾರು ದಿಗ್ಗಜರನ್ನು ನೀಡಿದ ಹೆಮ್ಮೆಯ ಜಿಲ್ಲೆ. ಹಾಕಿ ,ಕ್ರಿಕೆಟ್, ಫುಟ್ಬಾಲ್, ಟೆನಿಸ್ ,ಸ್ಕ್ವಾಶ್ ಹೀಗೆ ವಿವಿಧ ಕ್ರೀಡಾಕೂಟಕ್ಕೆ ಜಗತ್ತು ತಿರುಗಿ ನೋಡುವ ರೀತಿಯ ಪ್ರತಿಭೆಗಳನ್ನು ಕೊಡಗು ಪರಿಚಯಿಸಿದೆ.
ಇಂತಹದ್ದೇ ಒಬ್ಬ ಸಾಧಕಿ ನಮ್ಮ ಕೊಡಗು ಜಿಲ್ಲೆಯ ನಾಪೋಕ್ಲುವಿನ ಪೇರೂರು ಗ್ರಾಮದಲ್ಲಿದ್ದಾರೆ.

ತೆಕ್ಕಡ ನಂಜುಂಡ ಮತ್ತು ತೆಕ್ಕಡ ಪಾರ್ವತಿ ಅವರ ಪುತ್ರಿ ಭಾರತದ ನಂ 1 ಶ್ರೇಯಾಂಕದ ಕ್ರಾಸ್ ಕಂಟ್ರಿ ಸ್ಕೆಯಿಂಗ್ ಕ್ರೀಡಾಪಟು ಭವಾನಿ ತೆಕ್ಕಡ.

*ಶಿಕ್ಷಣ:* ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಶ್ರೀಮಂಗಲದ ಜೆ ಸಿ ಶಾಲೆಯಲ್ಲಿ ಪ್ರಾರಂಭಿಸಿ. ಮಡಿಕೇರಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ಮುಗಿಸಿದರು. ಮಂಗಳೂರಿನ ಪ್ರತಿಷ್ಠಿತ ಸಂತ ಆಗ್ನೆಸ್ ಕಾಲೇಜಿನಿಂದ ಪದವೀಧರೆಯಾಗಿ ದೆಹಲಿಯ ರಾಜೀವ ಗಾಂಧಿ ವಿಶ್ವ ವಿದ್ಯಾಲಯದಿಂದ ಹೆಚ್ಚುವರಿ ಪದವಿಯನ್ನು ಪಡೆದರು. ಸ್ವೀಡನ್ನಿನಲ್ಲಿ ಕ್ರಾಸ್ ಕಂಟ್ರಿ ಸ್ಕೆಯಿಂಗಿನಲ್ಲಿ ಡಿಪ್ಲೊಮ ಪದವಿ ಪಡೆದರು.

*ಸಾಧನೆಗಳು:*
ಚಿಲಿ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಾಸ್ ಕಂಟ್ರಿ ಸ್ಕೆಯಿಂಗ್ ಸ್ಪರ್ಧೆಯಲ್ಲಿ 2 ಕಂಚಿನ ಪದಕ.
ಇಟಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಕ್ರಾಸ್ ಕಂಟ್ರಿ ಸ್ಕೆಯಿಂಗ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದ ಮೊದಲ ಭಾರತೀಯೆ ಭವಾನಿ ತೆಕ್ಕಡ.
FIS Nordic Worrd Ski 2023 ಮತ್ತು 2025 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಕೊಡಗಿನ ಯುವತಿ.
ಭಾರತದ ಇತಿಹಾಸದಲ್ಲೇ ಮೊದಲ ಮಹಿಳಾ ಆಟಗಾರ್ತಿ ಕ್ರಾಸ್ ಕಂಟ್ರಿ ಸ್ಕೆಯಿಂಗ್ ವಿಶ್ವ ಕಪ್ ಸ್ಪರ್ಧೆಯಲ್ಲಿ ಭಾಗವಹಿಸಿದವರು.

*ರಾಷ್ಟ್ರ ಮಟ್ಟದ ಸಾಧನೆ:*
ಚಳಿಗಾಲದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಭಾಗವಹಿಸಿ 6 ಚಿನ್ನ, 3 ಬೆಳ್ಳಿ ಮತ್ತು 5 ಕಂಚಿನ ಪದಕ ಪಡೆಯುವ ಮೂಲಕ ಪದಕಗಳ ಗೊಂಚಲೇ ಬಾಚಿಕೊಂಡಿದ್ದಾರೆ. ರಾಷ್ಟ್ರಮಟ್ಟದ ಕ್ರಾಸ್ ಕಂಟ್ರಿ ಸ್ಕೆಯಿಂಗಿನಲ್ಲಿ 1 ಚಿನ್ನ, 5 ಬೆಳ್ಳಿ ಮತ್ತು 1 ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು